Connect with us

Bengaluru City

ಗುಜರಾತ್‍ನಲ್ಲಿ ಪ್ರಾದೇಶಿಕ ಪಕ್ಷ ಇದ್ದಿದ್ರೆ ಜಯ ಗಳಿಸುತ್ತಿತ್ತು: ಎಚ್‍ಡಿಕೆ

Published

on

ಬೆಂಗಳೂರು: ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳಿಗೂ ನಿರಾಶೆ ಮೂಡಿಸಿದೆ. ಆದರೆ ಗುಜರಾತ್ ನಲ್ಲಿ ಪ್ರಾದೇಶಿಕ ಪಕ್ಷ ಇದಿದ್ದರೆ ಜಯ ಗಳಿಸುತ್ತಿತ್ತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಗುಜರಾತ್ ಚುನಾವಣೆ ಫಲಿತಾಂಶದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಜನರನ್ನು ಒಲಿಸಿಕೊಳ್ಳಲು 75 ದಿನ ನಿರಂತರ ಹರಸಾಹಸ ಪಟ್ಟಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಆ ಮೂವರ ಹುಡುಗರು ಇಲ್ಲದೇ ಹೋಗಿದ್ದಾರೆ ಅಧೋಗತಿಗೆ ಹೋಗುತ್ತಿತ್ತು. ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಆ ರಾಜ್ಯಗಳ ಅಭಿವೃದ್ಧಿ, ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿಲ್ಲ. ವೈಯಕ್ತಿಕ ಮಾತುಗಳು, ಕೆಟ್ಟ ಭಾಷೆ ಬಳಕೆ ಬಗ್ಗೆ ಮಾತನಾಡಿವೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಗುಜರಾತ್ ನಲ್ಲಿ ಗ್ರಾಮೀಣ ಭಾಗದ ಜನ, ನರ್ಮದಾ ನದಿಯ ಭಾಗ ರೈತರು ಬಿಜೆಪಿಯನ್ನು ತಿರಸ್ಕಾರ ಮಾಡಿದ್ದಾರೆ. ಇದಕ್ಕೆ ಚುನಾವಣೆಯಲ್ಲಿ ಆರು ಲಕ್ಷ ನೋಟಾ ಮತದಾನ ಆಗಿದೆ ಎಂಬುವುದೇ ಸಾಕ್ಷಿ. ಈ ಎಲ್ಲಾ ಮತಗಳು ಬಿಜೆಪಿ ಪಕ್ಷಕ್ಕೆ ಸೇರಿದ್ದವು. ಆದರೆ ಗುಜರಾತ್ ನಲ್ಲಿ ಪ್ರಾದೇಶಿಕ ಪಕ್ಷ ಇದಿದ್ದರೆ ಖಂಡಿತ ಜಯಗಳಿಸುತ್ತಿತ್ತು. ಮುಂದೆ ಕರ್ನಾಟಕದ ಜನ ಸಹ ಎರಡು ಪಕ್ಷಗಳನ್ನು ತಿರಸ್ಕಾರ ಮಾಡುತ್ತಾರೆ. ಕರ್ನಾಟಕದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಮಿತ್ ಶಾ ಮತ್ತು ಮೋದಿ ಆಟ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದ ಎಚ್‍ಡಿಕೆ, ರಾಜನಾಥ್ ಸಿಂಗ್ ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯವರು ಕರ್ನಾಟಕದಲ್ಲಿ ಆಡಳಿತದಲ್ಲಿದ್ದಾಗ ಏನು ಮಾಡಿದರು ಎನ್ನುವುದು ಜನರಿಗೆ ಗೊತ್ತಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ತನ್ನ ಮೂರುವರೇ ಆಡಳಿತ ಅವಧಿಯಲ್ಲಿ ರಾಜ್ಯಕ್ಕೆ ಏನು ಕೊಡುಗೆ ನೀಡಿದೆ ಎಂದು ಪ್ರಶ್ನಿಸಿದರು. ದೇಶದ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ. ಅದ್ದರಿಂದ ಶಾ ಮತ್ತು ಮೋದಿ ಕರ್ನಾಟಕಕ್ಕೆ ಬಂದು ಏನು ಹೇಳುತ್ತಾರೆ. ಅಲ್ಲದೆ ರಾಜ್ಯದ ಎರಡು ರಾಷ್ಟ್ರೀಯ ಪಕ್ಷದ ನಾಯಕರು ಹತಾಶೆಯಿಂದ ಏಕವಚನ ಪ್ರಯೋಗ ಮಾಡುತ್ತಿದ್ದಾರೆ. ಇದು ಅವರ ನಡೆಯನ್ನು ತೋರಿಸುತ್ತದೆ ಎಂದರು. ಇದನ್ನೂ ಓದಿ: ವಿಜಯೋತ್ಸವದ ಖುಷಿಯಲ್ಲಿರುವ ಕಾರ್ಯಕರ್ತರಿಗೆ ಹೊಸ ಮಂತ್ರ ಪಠಿಸಿದ ಮೋದಿ

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಅವರು ಸರ್ಕಾರ ಜಾಹೀರಾತುಗಳ ಹಿಂದೆ ಬಿದ್ದಿದ್ದಾರೆ. ಹಳೇ ಕಾಮಗಾರಿಗಳಿಗೆ ದುಡ್ಡು ಕೊಟ್ಟಿದ್ದಾರೆ ಹೊರತು ರೈತರಿಗೆ ಹೊಸ ಯೋಜನೆ ಕೊಟ್ಟಿಲ್ಲ. ಹೆಚ್ಚು ಕಡಿಮೆ ಏಳು ಸಾವಿರ ಕೋಟಿಯಲ್ಲಿ ಆರು ಸಾವಿರ ಕೋಟಿ ದುಡ್ಡು ರಿವರ್ಕ್ ಮಾಡಲು ಖರ್ಚು ಮಾಡಿದ್ದಾರೆ. ರಾಜ್ಯದ ಜನರ ದುಡ್ಡಿನಲ್ಲಿ ಕಾಂಗ್ರೆಸ್ ನಾಯಕರು ಪ್ರಚಾರ ಮಾಡುತ್ತಾ ಸುತ್ತುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಬೆಂಗ್ಳೂರು ರೆಸಾರ್ಟಿಗೆ ಬಂದಿದ್ದ ಶಾಸಕರಲ್ಲಿ ಎಷ್ಟು ಮಂದಿ ಜಯಗಳಿಸಿದ್ದಾರೆ: ಡಿಕೆಶಿ ಹೇಳಿದ್ರು

ಜೆಡಿಎಸ್‍ನ ಶಾಸಕರು ಪಕ್ಷ ಬಿಡುವುದರ ಬಗ್ಗೆ ಪ್ರತಿಕ್ರಿಯೇ ನೀಡಿದ ಅವರು, ನಮ್ಮ ಪಕ್ಷದ ಯಾವ ಶಾಸಕರು ಪಕ್ಷ ಬಿಡುವುದಿಲ್ಲ. ಎಲ್ಲರೂ ಸಹ ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದರು. ಇದನ್ನೂ ಓದಿ: 2014ರ ನಂತರ ಮೋದಿ ಸಾಮ್ರಾಜ್ಯ ಎಲ್ಲೆಲ್ಲಿ ವಿಸ್ತರಣೆಯಾಗಿದೆ? ಮ್ಯಾಪ್ ನೋಡಿ

 

Click to comment

Leave a Reply

Your email address will not be published. Required fields are marked *