ರಾಯಚೂರು: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಆಡಿಯೋದಲ್ಲಿನ ಸಂಭಾಷಣೆ ಹಿಂದೂಗಳ ಭಾವನೆಗೆ ದಕ್ಕೆ ತಂದಿದೆ ಎಂದು ಆರೋಪಿಸಿ ರಾಯಚೂರು (Raichur) ನಗರ ಬಿಜೆಪಿ (BJP) ಶಾಸಕ ಡಾ.ಶಿವರಾಜ್ ಪಾಟೀಲ್ ವಿರುದ್ಧ ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಜೆಡಿಎಸ್ ದೂರು ದಾಖಲಿಸಿದೆ.
ಜೆಡಿಎಸ್ (JDS) ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ವಿಶ್ವನಾಥ್ ಪಟ್ಟಿ, ಶಾಸಕ ಡಾ.ಶಿವರಾಜ್ ಪಾಟೀಲ್ ವಿರುದ್ಧ ದೂರು ನೀಡಿದ್ದಾರೆ. ಹೋರಾಟಗಾರ ಅಶೋಕ್ ಜೈನ್ ಜೊತೆ ಶಾಸಕ ಡಾ.ಶಿವರಾಜ್ ಪಾಟೀಲ್ ನಡೆಸಿದ್ದ ಸಂಭಾಷಣೆ ಆಡಿಯೋ ವೈರಲ್ ಆಗಿತ್ತು. ಆಡಿಯೋದಲ್ಲಿ “ನಾನೇ ದೇವರು, ನಾನೇ ಎಲ್ಲಾ, ನಾನಿದ್ದರೆ ಜಗತ್ತು. ನನಗೆ ಎಲ್ಲರೂ ಬಂದು ಕಾಲು ಮುಗಿಯಬೇಕು” ಎಂಬ ಸಂಭಾಷಣೆ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಗುಜರಾತ್ ನಾಯಕರನ್ನು ಮೆಚ್ಚಿಸಲು ಕೆಎಂಎಫ್ ಮುಗಿಸುವ ಹುನ್ನಾರ: ಹೆಚ್ಡಿಕೆ ವಾಗ್ದಾಳಿ
Advertisement
Advertisement
ಆಡಿಯೋದಲ್ಲಿ ಮಾತನಾಡಿದ್ದು ನಾನೇ ಎಂದು ಡಾ.ಶಿವರಾಜ್ ಪಾಟೀಲ್ ಒಪ್ಪಿಕೊಂಡಿದ್ದಾರೆ. ಹೀಗಾಗಿ ಧರ್ಮ ಆಚರಣೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ತಪ್ಪು. ಶಿವರಾಜ್ ಪಾಟೀಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ವಿಶ್ವನಾಥ್ ಪಟ್ಟಿ ಒತ್ತಾಯಿಸಿದ್ದಾರೆ. ನಾನು ಒಬ್ಬ ಹಿಂದೂ ಧರ್ಮದವನಾಗಿದ್ದು, ನನ್ನ ಭಾವನೆಗಳಿಗೆ ಧಕ್ಕೆ ಆದ ಕಾರಣ ದೂರನ್ನು ನೀಡಿರುವುದಾಗಿ ವಿಶ್ವನಾಥ್ ಹೇಳಿದ್ದಾರೆ.
Advertisement
Advertisement
ಇದೇ ಆಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಕುರಿತು ಮಾತನಾಡಿದ್ದು ಕೂಡ ಈಗಾಗಲೇ ಸಾಕಷ್ಟು ಚರ್ಚೆಗೆ ಒಳಗಾಗಿದೆ. “ನಾನೇ ಮೋದಿ ನಾನೇ ದೇವರು. ಮೋದಿ ಪಾದಿ ಯಾವ್ದೂ ಇಲ್ಲಾ” ಎನ್ನುವ ಸಂಭಾಷಣೆ ವೈರಲ್ ಆಗಿತ್ತು. ಬಿಜೆಪಿ ಟಿಕೆಟ್ ಘೋಷಣೆ ಹಂತದಲ್ಲೇ ಶಾಸಕ ಶಿವರಾಜ್ ಪಾಟೀಲ್‍ಗೆ ವೈರಲ್ ಆಡಿಯೋ ಸಂಕಷ್ಟ ತಂದಿದೆ. ಇದನ್ನೂ ಓದಿ: ನಿಷೇಧಿತ ಪಿಎಫ್‍ಐನ ಇಬ್ಬರು ಮುಖಂಡರ ಬಂಧನ