ಮೈಸೂರು: ರೆಸಾರ್ಟ್ ರಾಜಕೀಯ ಮಾಡೋದು ತಪ್ಪು. ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಜೆಡಿಎಸ್ ಪಕ್ಷಕ್ಕೆ ರೆಸಾರ್ಟ್ ರಾಜಕಾರಣ ಮಾಡುವ ಅನಿವಾರ್ಯತೆ ಇಲ್ಲ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನನ್ನು ಮತ್ತು ಮೈತ್ರಿ ಸರ್ಕಾರವನ್ನು ಚಾಮುಂಡಿ ತಾಯಿ ರಕ್ಷಿಸುತ್ತಿದ್ದಾಳೆ. ನಮ್ಮನ್ನು ರಕ್ಷಿಸುತ್ತಿರುವ ಚಾಮುಂಡಿ ದೇವಿಯೆ ಬಿಜೆಪಿಯವರಿಗೆ ಒಳ್ಳೆಯ ಬುದ್ದಿ ಕೊಡಲಿ. ಬಿಜೆಪಿ ಮಾಡಿದ ಗೊಂದಲಕ್ಕಾಗಿ ಕಾಂಗ್ರೆಸ್‍ನವರು ತಮ್ಮ ಶಾಸಕರ ಜೊತೆ ಮಾತುಕತೆ ನಡೆಸಲು ರೆಸಾರ್ಟ್ ಗೆ ತೆರಳಿದ್ದಾರೆ. ಹಾಗಂತ ನಮ್ಮ ಜೆಡಿಎಸ್ ಶಾಸಕರನ್ನು ರೆಸಾರ್ಟ್ಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಬರಲ್ಲ. ಅದರ ಅವಶ್ಯಕತೆಯು ನಮಗಿಲ್ಲ ಅಂತ ಹೇಳಿದ್ದಾರೆ.
ಬಿಜೆಪಿಯ ಯಾವ ಶಾಸಕರನ್ನು ನಾವು ಆಪರೇಷನ್‍ಗೆ ಒಳಪಡಿಸಿಲ್ಲ. ಈಗ ನಾವು ಆಪರೇಷನ್ ಶುರುಮಾಡ್ಬೇಕು ಎಂದು ಬಿಜೆಪಿ ನಿರೀಕ್ಷಿಸುತ್ತಿದಿಯಾ? ನಿರೀಕ್ಷೆ ಇದ್ದರೆ ನಮಗೆ ಹೇಳಲಿ, ಆಗ ಮುಂದೆ ನೋಡುತ್ತೇವೆ ಎಂದು ಬಿಜೆಪಿ ಅವರ ಕಾಲೆಳೆದಿದ್ದಾರೆ. ಹಾಗೆಯೇ ಈ ಹಿಂದೆ ಯಡಿಯೂರಪ್ಪ ಅವರು ತಮ್ಮ ಸರ್ಕಾರ ರಚನೆ ಮಾಡಿದ ಮೇಲೂ ಆಪರೇಷನ್ ಕಮಲ ನಡೆಸಿದರು. ನಾವು ಅಂತಹ ಕೆಲಸಕ್ಕೆ ಮುಂದಾಗುವುದಿಲ್ಲ. ಆ ಅನಿವಾರ್ಯತೆಯೂ ನಮಗಿಲ್ಲ. ಬಿಜೆಪಿ ಸದಾ ಮೈತ್ರಿ ಸರ್ಕಾರವನ್ನ ಬೀಳಿಸುವ ಕನಸು ಕಾಣುತ್ತಲೇ ಇರುತ್ತೆ. ಅದಕ್ಕಾಗಿ ಇಲ್ಲದ ಕಸರತ್ತನ್ನು ಮಾಡುತ್ತಿದ್ದಾರೆ. ಆದರೆ ಅದ್ಯಾವುದು ಫಲ ಕೊಡುವುದಿಲ್ಲ ಎಂದು ಸಿಎಂ ಕಿಡಿಕಾರಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv