ತುಮಕೂರು: ನಿವೇಶನ ಹಂಚಿಕೆ ವಿಚಾರದಲ್ಲಿ ವಾಗ್ವಾದ ನಡೆದು ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಬಡಿದಾಡಿಕೊಂಡಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ವದನಕಲ್ಲು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್‍ನ ದೊಸ್ತಿ ಸರ್ಕಾರ ನಡೆಯುತ್ತಿದ್ದು. ವದನಕಲ್ಲು ಗ್ರಾಮದ ದೋಸ್ತಿ ಸರ್ಕಾರದ ಕಾರ್ಯಕರ್ತರೇ ಹೊಡೆದಾಡಿಕೊಂಡಿದ್ದಾರೆ. ಬಡವರಿಗೆ ಸೇರಿದ್ದ ನಿವೇಶನ ಹಂಚಿಕೆ ವಿಚಾರದಲ್ಲಿ ವಾಗ್ವಾದ ನಡೆದು ಪಾವಗಡ ತಾಲೂಕು ಇಓ ಆನಂದ್ ಸಮ್ಮುಖದಲ್ಲೇ ಘಟನೆ ಜರುಗಿದೆ.
Advertisement
ಚುನಾವಣೆಗೂ ಮುನ್ನ ಜೆಡಿಎಸ್ ಮಾಜಿ ಶಾಸಕ ತಿಮ್ಮರಾಯಪ್ಪರ ನಿರ್ದೇಶನದಂತೆ ನಿವೇಶನ ಫಲಾನುಭವಿಗಳ ಪಟ್ಟಿಯನ್ನು ತಾಲೂಕು ಪಂಚಾಯಿತಿ ಅಧಿಕಾರಿಗೆ ಸಲ್ಲಿಸಲಾಗಿತ್ತು. ಆದರೆ ಈಗ ಕಾಂಗ್ರೆಸ್ ಶಾಸಕರು ಪಾವಗಡ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
Advertisement
ಜೆಡಿಎಸ್ ನೀಡಿದ್ದ ಪಟ್ಟಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರ ಪರಿಣಾಮವಾಗಿ ದೊಣ್ಣೆ ಹಾಗೂ ಕಲ್ಲಿನಿಂದ ಕಾರ್ಯಕರ್ತರು ಹೊಡಿದಾಡಿಕೊಂಡಿದ್ದಾರೆ.
Advertisement
https://www.youtube.com/watch?v=0LrZeDvg5HM