ರಾಯಚೂರು: ಜಿಲ್ಲೆಯ ಮಸ್ಕಿ ಮತ್ತು ಲಿಂಗಸಗೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಅವರ ಪತ್ನಿಯರೇ ಪ್ರತಿಸ್ಪರ್ಧಿಗಳಾಗಿದ್ದಾರೆ.
ಮಸ್ಕಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಾ ಸೋಮನಾಥ್ ನಾಯಕ್ ನಾಮಪತ್ರ ಸಲ್ಲಿಸಿದ್ದಾರೆ. ಜೊತೆಗೆ ತಮ್ಮ ಪತ್ನಿ ತಾರಾರಾಣಿ ಅವರಿಂದಲೂ ಜೆಡಿಎಸ್ ಪಕ್ಷದಿಂದಲೇ ನಾಮಪತ್ರ ಹಾಕಿಸಿದ್ದಾರೆ. ಲಿಂಗಸುಗೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿದ್ದಪ್ಪ ಬಂಡಿ ಹಾಗೂ ತಮ್ಮ ಪತ್ನಿ ಗಂಗಾ ಬಂಡಿ ಇಬ್ಬರೂ ನಾಮಪತ್ರಗಳನ್ನ ಸಲ್ಲಿಸಿದ್ದಾರೆ.
Advertisement
Advertisement
ಲಿಂಗಸಗೂರಿನ ಬಿಜೆಪಿ ಅಭ್ಯರ್ಥಿಗೆ ಸಹೋದರನ ಮಗನೇ ಎದುರಾಳಿಯಾಗಿದ್ದಾನೆ. ಆದ್ರೆ ಒಂದೇ ಪಕ್ಷದಿಂದ ಒಂದೇ ಮನೆಯಲ್ಲಿನ ಇಬ್ಬಿಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಈ ರೀತಿಯಾಗಿ ಪತ್ನಿಯರು ನಾಮಪತ್ರ ಸಲ್ಲಿಸೋದಕ್ಕೆ ಜ್ಯೋತಿಷಿಗಳು ಕಾರಣ ಎನ್ನಲಾಗಿದ್ದು, ಪತ್ನಿಯರಿಂದಲೂ ನಾಮಪತ್ರ ಹಾಕಿಸಿದರೆ ಒಳ್ಳೆಯದು ಅಂತ ಈ ಇಬ್ಬರು ಅಭ್ಯರ್ಥಿಗಳು ಎರಡು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
Advertisement
ಲಿಂಗಸಯಗೂರಿನ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ತಮ್ಮ ಸಹೋದರನ ಪುತ್ರ ದೇವರಾಜ್ ದೋತ್ರೆ ಬಿಜೆಪಿ ಪಕ್ಷದಿಂದಲೇ ತಮ್ಮ ಉಮೇದುಗಾರಿಕೆ ಸಲ್ಲಿಸಿದ್ದಾರೆ. ಒಂದು ವೇಳೆ ತಮ್ಮ ನಾಮಪತ್ರ ತಿರಸ್ಕೃತವಾದ್ರೆ ಇರಲಿ ಅಂತ ಸಹೋದರನ ಪುತ್ರನಿಂದಲೂ ನಾಮಪತ್ರ ಹಾಕಿಸಿದ್ದಾರೆ ಎನ್ನಲಾಗಿದೆ.