ಹಾಸನ: ಜೆಡಿಎಸ್ ತವರು ನೆಲ ಹಾಸನ ಜಿಲ್ಲೆಯಲ್ಲಿ ಈಗ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು, ಜೆಡಿಎಸ್ ಅಭ್ಯರ್ಥಿಯಾಗಿ ಭವಾನಿ ರೇವಣ್ಣ ಹಾಗೂ ಯುವ ನಾಯಕ ಸೂರಜ್ ರೇವಣ್ಣ ಹೆಸರು ರೇಸ್ ನಲ್ಲಿ ಮೊದಲಿದೆ.
ನಿನ್ನೆ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಬಹುತೇಕರು ಭವಾನಿ ರೇವಣ್ಣ ಅವರಿಗೆ ಜೈ ಅಂದ್ರೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಾತ್ರ ದೇವೇಗೌಡರು ಯಾರನ್ನೇ ನಿಲ್ಲಿಸಿದ್ರು ನನ್ನ ಸಹಮತ ಎಂದರು. ಬೇಲೂರು ಶಾಸಕ ಲಿಂಗೇಶ್, ಸೇರಿದಂತೆ ಬಹುತೇಕ ಜೆಡಿಎಸ್ ಶಾಸಕರು, ಕಾರ್ಯಕರ್ತರು ಭವಾನಿ ರೇವಣ್ಣ ಸ್ಪರ್ಧೆ ಮಾಡಲಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಭಗವಂತನ ಮೇಲೆ ಕೋಪ ಬರುತ್ತಿದೆ: ಸಾಯಿ ಕುಮಾರ್
ಈ ಮಧ್ಯೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಿರಿಯ ಪುತ್ರ ಡಾ.ಸೂರಜ್ ರೇವಣ್ಣ ಈ ಬಾರಿ ವಿಧಾನ ಪರಿಷತ್ ಕಣಕ್ಕೆ ಇಳಿಸುತ್ತಾರೆ ಎನ್ನುವ ಗುಸು ಗುಸು ಹೆಚ್ಚಾಗಿದ್ದು, ಒಂದು ವೇಳೆ ಸೂರಜ್ ರೇವಣ್ಣ ಕಣಕ್ಕಿಳಿದ್ರೆ ರೇವಣ್ಣ ಅವರ ಇಬ್ಬರು ಪುತ್ರರು ರಾಜ್ಯ ರಾಜಕೀಯಕ್ಕೆ ಪ್ರವೇಶಿಸಿದಂತೆ ಆಗುತ್ತೆ. ಈಗಾಗಲೇ ಪ್ರಜ್ವಲ್ ರೇವಣ್ಣ ಸಂಸದ ಪಟ್ಟದಲ್ಲಿರೋ ಕಾರಣ ಸೂರಜ್ ರೇವಣ್ಣ ಮಾತ್ರ ರಾಜ್ಯ ರಾಜಕೀಯಕ್ಕೆ ಪ್ರವೇಶ ಕೊಡಲು ವಿಧಾನ ಪರಿಷತ್ ದಾರಿಯಾಗಲಿದೆ ಎನ್ನುವ ಹಲವು ಲೆಕ್ಕಚಾರವಿದೆ. ಇನ್ನೂ ಈ ಬಗ್ಗೆ ಸೂರಜ್ ಅವರನ್ನು ಕೇಳಿದ್ರೆ, ನನಗಿಂತ ನನ್ನ ತಾಯಿ ಭವಾನಿ ರೇವಣ್ಣ ಅವರೇ ಅಭ್ಯರ್ಥಿ ಆಗಲಿ ಎಂಬ ಕೂಗು 80% ಹೆಚ್ಚಿದೆ. ಹೀಗಾಗಿ ಯಾರೇ ಸ್ಪರ್ಧೆ ಮಾಡಿದ್ರು ಸರಿ ಎಂದು ತನ್ನ ತಾಯಿಯ ಕಡೆ ಬೆರಳು ತೋರಿದ್ದಾರೆ.
ಜೆಡಿಎಸ್ ನಲ್ಲಿ ಯಾರನ್ನ ಅಭ್ಯರ್ಥಿ ಮಾಡಬೇಕು ಎಂದರೂ ದೇವೇಗೌಡರ ಸಮ್ಮತಿ ಮತ್ತು ಅವರ ರಾಜಕೀಯ ಲೆಕ್ಕಾಚಾರವೇ ಅಂತಿಮ. ಹೀಗಾಗಿ ಯಾರು ಏನೇ ಹೇಳಿದ್ರು ದೇವೇಗೌಡರು ಏನು ನಿರ್ಧಾರ ಮಾಡ್ತಾರೆ ಮತ್ತು ಜಿಲ್ಲೆಯ ಜೆಡಿಎಸ್ ಸ್ಥಳೀಯ ನಾಯಕರು ಏನು ಒತ್ತಡ ಏರುತ್ತಾರೆ ಎನ್ನುವುದರ ಮೇಲೆ ಇದೆಲ್ಲಾ ಅವಲಂಬನೆ ಆಗಿದೆ. ಇದನ್ನೂ ಓದಿ: ಚಿನ್ನಾಭರಣ ಕಳವು ಮಾಡಿರುವುದಾಗಿ ಮಗಳ ವಿರುದ್ಧವೇ ದೂರು ಕೊಟ್ಟ ತಾಯಿ
ಇದೆಲ್ಲಾ ಏನೇ ಇರಲಿ ಸದ್ಯದ ಬೆಳವಣಿಗೆ ನೋಡಿದ್ರೆ ಭವಾನಿ ರೇವಣ್ಣ ಅಥವಾ ಸೂರಜ್ ರೇವಣ್ಣ ಇವರಿಬ್ಬರಲ್ಲಿ ಒಬ್ಬರು ಜೆಡಿಎಸ್ ಪಕ್ಷದಿಂದ ಹಾಸನದ ಕಣಕ್ಕಿಳಿಯೋದು ಪಕ್ಕಾ ಅನ್ನುವಂತಿದೆ. ಒಂದು ವೇಳೆ ತಾಯಿ ಮಗ ಇಬ್ಬರಲ್ಲಿ ಯಾರೇ ರೇಸಿಗೆ ಇಳಿದ್ರು, ಹಾಸನ ವಿಧಾನ ಪರಿಷತ್ ಚುನಾವಣೆ ರಾಜ್ಯಮಟ್ಟದಲ್ಲಿ ಬಾರಿ ಕುತೂಹಲ ಕ್ಷೇತ್ರದಲ್ಲಿ ಒಂದಾಗೋದಂತು ನಿಜ.