ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ರಚನೆ ಸರ್ಕಸ್ ಮುಂದುವರಿದಿದೆ. ಸೋಮವಾರ ದೆಹಲಿಗೆ ತೆರಳಿದ್ದ ಎಚ್‍ಡಿ ಕುಮಾರಸ್ವಾಮಿ ರಾತ್ರಿ 11.30ಕ್ಕೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ರು.
ಅಲ್ಲಿಂದ ನೇರವಾಗಿ ತಮ್ಮ ಪಕ್ಷದ ಶಾಸಕರು ತಂಗಿದ್ದ ನಂದಿಬೆಟ್ಟದ ರೆಸಾರ್ಟ್‍ಗೆ ತೆರಳಿ ದೆಹಲಿಯಲ್ಲಿ ನಡೆದ ವಿದ್ಯಾಮಾನಗಳು ಮತ್ತು ಸಂಪುಟ ರಚನೆಯ ಬಗ್ಗೆ ಶಾಸಕರೊಂದಿಗೆ ಚರ್ಚೆ ನಡೆಸಿದ್ರು. ನಂತ್ರ ಬೆಳಗ್ಗಿನ ಜಾವ 3.30ರ ಸುಮಾರಿಗೆ ತಮ್ಮ ಪುತ್ರ ನಿಖಿಲ್ ಜೊತೆ ತಮ್ಮ ಜೆಪಿ ನಗರದ ನಿವಾಸಕ್ಕೆ ಆಗಮಿಸಿದ್ರು.
Advertisement
ಯಾರ್ಯಾರಿಗೆ ಸಚಿವ ಸ್ಥಾನ, ಯಾರಿಗೆ ಡಿಸಿಎಂ ಪಟ್ಟ ಅನ್ನೋದು ಇವತ್ತು ಬಹುತೇಕ ಖಚಿತವಾಗಲಿದೆ. ಈ ಮಧ್ಯೆ ಮಂತ್ರಿಗಿರಿ ಮತ್ತು ಡಿಸಿಎಂ ಪಟ್ಟಕ್ಕಾಗಿ ಲಾಬಿ ಜೋರಾಗಿದೆ. ನಿನ್ನೆ ಸಂಜೆ 7 ಗಂಟೆಗೆ ಖಾಸಗಿ ಹೋಟೆಲ್‍ನಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಭೇಟಿಯಾದ ಜಮೀರ್ ಅಹ್ಮದ್, ಅಲ್ಪಸಂಖ್ಯಾತರ ಕೋಟಾದಲ್ಲಿ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇನ್ನು ಸಿದ್ದರಾಮಯ್ಯ ಕೂಡಾ ಮೊದಲ ಬಾರಿಗೆ ಶಾಸಕರಾಗಿರುವ ತಮ್ಮ ಪುತ್ರ ಯತೀಂದ್ರಗೆ ಸಚಿವ ಸ್ಥಾನ ದೊರಕಿಸಲು ಹೈಕಮಾಂಡ್ ಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ. ಮತ್ತೊಂದ್ಕಡೆ ಲಿಂಗಾಯತ ಸ್ವಾಮೀಜಿಗಳು ತಮ್ಮ ಸಮುದಾಯದವರನ್ನೇ ಡಿಸಿಎಂ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.
Advertisement
ಜೆಡಿಎಸ್‍ನಲ್ಲಿ ಯಾರಿಗೆಲ್ಲಾ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಅನ್ನೋದನ್ನ ನೋಡೋದಾದ್ರೆ..
* ಹಾಸನ – ಎಚ್.ಡಿ.ರೇವಣ್ಣ – ಒಕ್ಕಲಿಗ – ಹೊಳೆನರಸೀಪುರ
– ಎ.ಟಿ. ರಾಮಸ್ವಾಮಿ – ಒಕ್ಕಲಿಗ – ಅರಕಲಗೂಡು
– ಎಚ್.ಕೆ.ಕುಮಾರಸ್ವಾಮಿ – ಪರಿಶಿಷ್ಟ ಜಾತಿ -ಸಕಲೇಶಪುರ
Advertisement
* ಧಾರವಾಡ – ಬಸವರಾಜ ಹೊರಟ್ಟಿ – ಲಿಂಗಾಯತ – ಪರಿಷತ್ ಸದಸ್ಯ
Advertisement
* ಮೈಸೂರು – ಎಚ್.ವಿಶ್ವನಾಥ್ – ಕುರುಬ – ಹುಣಸೂರು
– ಜಿ.ಟಿ.ದೇವೇಗೌಡ – ಒಕ್ಕಲಿಗ – ಚಾಮುಂಡೇಶ್ವರಿ
* ಮಂಡ್ಯ – ಸಿ.ಎಸ್.ಪುಟ್ಟರಾಜು – ಒಕ್ಕಲಿಗ – ಮೇಲುಕೋಟೆ
* ಬೀದರ್ – ಬಂಡೆಪ್ಪ ಕಾಶೆಂಪೂರ್- ಕುರುಬ – ಬೀದರ್ ದಕ್ಷಿಣ
* ಚಾಮರಾಜನಗರ – ಎನ್.ಮಹೇಶ್, ಬಿಎಸ್‍ಪಿ – ಪರಿಶಿಷ್ಟ ಜಾತಿ – ಕೊಳ್ಳೇಗಾಲ
* ತುಮಕೂರು – ಸತ್ಯನಾರಾಯಣ/ಗುಬ್ಬಿ ಶ್ರೀನಿವಾಸ್ – ಒಕ್ಕಲಿಗ
– ಸತ್ಯನಾರಾಯಣ- ಶಿರಾ, ಶ್ರೀನಿವಾಸ್ -ಗುಬ್ಬಿ
* ಮಂಗಳೂರು – ಬಿ.ಎಂ.ಫಾರೂಕ್ – ಅಲ್ಪಸಂಖ್ಯಾತ
* ಯಾದಗಿರಿ – ನಾಗನಗೌಡ ಕಂದಕೂರ – ಲಿಂಗಾಯತ – ಗುರುಮಿಠ್ಕಲ್
* ರಾಯಚೂರು – ವೆಂಕಟರಾವ್ ನಾಡಗೌಡ – ಲಿಂಗಾಯತ – ಸಿಂಧನೂರು
* ವಿಜಯಪುರ – ಎಸ್.ಎಂ.ಮನಗೂಳಿ – ಲಿಂಗಾಯತ – ಸಿಂಧಗಿ
* ಬೆಂಗಳೂರು – ಟಿ.ಎ. ಶರವಣ – ಆರ್ಯ ವೈಶ್ಯ – ಮೇಲ್ಮನೆ ಸದಸ್ಯ
ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಯಾರು ಯಾರಿದ್ದಾರೆ ಅನ್ನೋದನ್ನ ನೋಡೋದಾದ್ರೆ..
* ತುಮಕೂರು – ಜಿ.ಪರಮೇಶ್ವರ್ – ಪರಿಶಿಷ್ಟ ಜಾತಿ ಬಲ – ಕೊರಟಗೆರೆ
* ರಾಮನಗರ – ಡಿ.ಕೆ.ಶಿವಕುಮಾರ್ – ಒಕ್ಕಲಿಗ – ಕನಕಪುರ
* ದಾವಣಗೆರೆ – ಶಾಮನೂರು ಶಿವಶಂಕರಪ್ಪ – ಲಿಂಗಾಯತ – ದಾವಣಗೆರೆ ದಕ್ಷಿಣ
* ಕೋಲಾರ – ರಮೇಶ್ ಕುಮಾರ್ – ಬ್ರಾಹ್ಮಣ – ಶ್ರೀನಿವಾಸಪುರ
– ರೂಪಾ ಶಶಿಧರ್ – ಪರಿಶಿಷ್ಟಜಾತಿ ಎಡ – ಕೆಜಿಎಫ್
* ಕಲಬುರಗಿ – ಪ್ರಿಯಾಂಕ್ ಖರ್ಗೆ – ಪರಿಶಿಷ್ಟ ಜಾತಿ ಬಲ – ಚಿತ್ತಾಪುರ
* ಮೈಸೂರು – ತನ್ವೀರ್ ಸೇಠ್ – ಅಲ್ಪಸಂಖ್ಯಾತ – ನರಸಿಂಹರಾಜ
* ಉತ್ತರ ಕನ್ನಡ- ಆರ್.ವಿ.ದೇಶಪಾಂಡೆ – ಬ್ರಾಹ್ಮಣ – ಹಳಿಯಾಳ
* ಹಾವೇರಿ – ಬಿ.ಸಿ.ಪಾಟೀಲ್ – ಲಿಂಗಾಯತ – ಹಿರೇಕೆರೂರು
* ಬಳ್ಳಾರಿ – ನಾಗೇಂದ್ರ – ಪರಿಶಿಷ್ಟ ಪಂಗಡ – ಬಳ್ಳಾರಿ
– ತುಕಾರಾಂ – ಪರಿಶಿಷ್ಟ ಪಂಗಡ – ಸಂಡೂರು
* ಬೆಳಗಾವಿ – ರಮೇಶ್ ಜಾರಕಿಹೊಳಿ – ಪರಿಶಿಷ್ಟ ಪಂಗಡ – ಗೋಕಾಕ್
– ಸತೀಶ್ ಜಾರಕಿಹೊಳಿ – ಪರಿಶಿಷ್ಟ ಪಂಗಡ – ಯಮಕನಮರಡಿ
– ಲಕ್ಷ್ಮಿ ಹೆಬ್ಬಾಳ್ಕರ್ – ಲಿಂಗಾಯತ – ಬೆಳಗಾವಿ ಗ್ರಾಮೀಣ
* ಬಾಗಲಕೋಟೆ – ಸಿದ್ದು ನ್ಯಾಮಗೌಡ – ಲಿಂಗಾಯತ – ಜಮಖಂಡಿ
– ಎಸ್.ಆರ್.ಪಾಟೀಲ್ – ಲಿಂಗಾಯತ – ಪರಿಷತ್ ಸದಸ್ಯ
* ಬೀದರ್ – ಈಶ್ವರ್ ಖಂಡ್ರೆ – ಲಿಂಗಾಯತ – ಭಾಲ್ಕಿ
– ರಾಜಶೇಖರ ಪಾಟೀಲ್ – ಲಿಂಗಾಯತ – ಹುಮ್ನಾಬಾದ್
– ರಹೀಂ ಖಾನ್ – ಅಲ್ಪಸಂಖ್ಯಾತ – ಬೀದರ್
* ವಿಜಯಪುರ – ಎಂ.ಬಿ. ಪಾಟೀಲ್ – ಲಿಂಗಾಯತ – ಬಬಲೇಶ್ವರ
– ಶಿವಾನಂದ ಪಾಟೀಲ್ – ಲಿಂಗಾಯತ – ಬಸವನಬಾಗೇವಾಡಿ
* ಕೊಪ್ಪಳ – ಅಮರೇಗೌಡ ಬಯ್ಯಾಪುರ – ಲಿಂಗಾಯತ – ಕುಷ್ಠಗಿ
– ರಾಘವೇಂದ್ರ ಹಿಟ್ನಾಳ್ – ಕುರುಬ – ಕೊಪ್ಪಳ
* ಧಾರವಾಡ – ಸಿ.ಎಸ್.ಶಿವಳ್ಳಿ – ಕುರುಬ – ಕುಂದಗೋಳ
* ಬೆಂಗಳೂರು ಗ್ರಾ. – ಎಂ.ಟಿ.ಬಿ ನಾಗಾರಾಜ್ – ಕುರುಬ – ಹೊಸಕೋಟೆ
* ಗದಗ – ಎಚ್.ಕೆ.ಪಾಟೀಲ್ – ಲಿಂಗಾಯತ – ಗದಗ
* ಮಂಗಳೂರು – ಯು.ಟಿ.ಖಾದರ್ – ಅಲ್ಪಸಂಖ್ಯಾತ – ಮಂಗಳೂರು
* ಚಾಮರಾಜನಗರ – ಪುಟ್ಟರಂಗಶೆಟ್ಟಿ – ಉಪ್ಪಾರ – ಚಾಮರಾಜನಗರ
– ನರೇಂದ್ರ – ಒಕ್ಕಲಿಗ – ಹನೂರು
* ಚಿಕ್ಕಬಳ್ಳಾಪುರ- ಡಾ.ಸುಧಾಕರ್ – ಒಕ್ಕಲಿಗ – ಚಿಕ್ಕಬಳ್ಳಾಪುರ
– ವಿ.ಮುನಿಯಪ್ಪ – ಒಕ್ಕಲಿಗ – ಶಿಡ್ಲಘಟ್ಟ
– ಶಿವಶಂಕರ ರೆಡ್ಡಿ – ರೆಡ್ಡಿ ಒಕ್ಕಲಿಗ – ಗೌರಿಬಿದನೂರು
* ಬೆಂಗಳೂರು- ರಾಮಲಿಂಗಾ ರೆಡ್ಡಿ – ರೆಡ್ಡಿ ಒಕ್ಕಲಿಗ- ಬಿಟಿಎಂ ಲೇಔಟ್
– ಕೆ.ಜೆ.ಜಾರ್ಜ್ – ಕ್ರಿಶ್ಚಿಯನ್ – ಸರ್ವಜ್ಞ ನಗರ
– ಕೃಷ್ಣಬೈರೇಗೌಡ – ಒಕ್ಕಲಿಗ – ಬ್ಯಾಟರಾಯನಪುರ
– ಎಂ.ಕೃಷ್ಣಪ್ಪ – ಒಕ್ಕಲಿಗ – ವಿಜಯನಗರ
– ರೋಷನ್ ಬೇಗ್ – ಅಲ್ಪಸಂಖ್ಯಾತ – ಶಿವಾಜಿನಗರ
– ದಿನೇಶ್ ಗುಂಡೂರಾವ್ – ಬ್ರಾಹ್ಮಣ – ಗಾಂಧಿನಗರ