ತುಮಕೂರು: ಗಟ್ಟಿ ಸ್ವಭಾವದ ಸಚಿವ ಮಾಧುಸ್ವಾಮಿ ಅವರ ಕಣ್ಣಂಚಲಿ ಇಂದು ಕಣ್ಣೀರು ಬಂದಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆ ಕನಸು ಸಾಕಾರಗೊಂಡ ಹಿನ್ನೆಲೆಯಲ್ಲಿ ಧನ್ಯತಾಭಾವದಿಂದ ಮಾಧುಸ್ವಾಮಿ ಗದ್ಗದಿತರಾಗಿ ಕಣ್ಣೀರು ಹಾಕಿದ್ದಾರೆ.
Advertisement
ಸ್ವಗ್ರಾಮ ಜೆ.ಸಿ.ಪುರದಲ್ಲಿ 121 ಕೆರೆಗಳಿಗೆ ನೀರುಹರಿಸುವ 250 ಕೋಟಿ ರೂ ಕಾಮಗಾರಿಗೆ ಚಾಲನೆ ಕೊಟ್ಟು ಮಾತನಾಡುತ್ತಾ ಕೊಟ್ಟ ಮಾತನ್ನು ಉಳಿಸಿಕೊಂಡ ಧನ್ಯತಾಭಾವದಿಂದ ಆನಂದಭಾಷ್ಪ ಸುರಿಸಿದರು. ಮೊನ್ನೆ ದಿನ ದಾರಿಯಲ್ಲಿ ಒಬ್ಬ ವೃದ್ದೆ ಸಿಕ್ಕಿ ” ಏನಪ್ಪಾ ನಿನ್ನ ಬಾಯಿ, ಅದ್ಯಾವ್ ಬಾಯಲ್ಲಿ ಅಂದಿದ್ಯೋ ಎಲ್ಲಾ ಕೆರೆ ತುಂಬಿಸ್ತಿನಿ ಅಂತಾ, ಮಳೆನೇ ಬಂದು ಎಲ್ಲಾ ಕೆರೆನೆ ತುಂಬಿ ಹೋಯ್ತು” ಅಂದ್ಳು. ಆ ಮಹಾತಾಯಿ ಹಾರೈಕೆ ಕಂಡು ನನ್ನ ಮನಸ್ಸು ತುಂಬಿ ಬಂತು. ನಾನು ಕ್ಷೇತ್ರದ ಜನತೆಗೆ ಕೊಟ್ಟ ಮಾತನ್ನು ನೆರವೇರಿಸಿ ನಾಲಿಗೆ ಉಳಿಸಿಕೊಳ್ಳಬೇಕು ಎಂದರೆ ಎತ್ತಿನಹೊಳೆಯಿಂದ ಕೆರೆಗಳಿಗೆ ನೀರನ್ನು ಹರಿಸಬೇಕು ತಾಯಿ ಎಂದಿದ್ದೆ. ಆ ಕನಸು ಇಂದು ನೆರವೇರಿಸಿದೆ ಎಂದು ನೆನಪಿಸಿಕೊಂಡು ಭಾವುಕರಾದರು.
Advertisement
Advertisement
ಎತ್ತಿನಹೊಳೆ ಯೋಜನೆಯಿಂದ ಚಿಕ್ಕನಾಯಕನಹಳ್ಳಿ ತಾಲೂಕಿನ 131 ಕೆರೆಗಳಿಗೆ 0.98 ಟಿ.ಎಮ್.ಸಿ ನೀರನ್ನು ಹರಿಸಲಾಗುವುದು. ಮುಂದಿನ ಒಂದು ವರ್ಷದಲ್ಲಿ ಈ ಯೋಜನೆ ಪೂರ್ಣಗೊಂಡು ನೀರುಹರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement