ತುಮಕೂರು: ಕಾಂಗ್ರೆಸ್ (Congress) ಸೇರುವ ದುಃಸ್ಥಿತಿ ನನಗೆ ಬಂದಿಲ್ಲ. ಯಾವನೋ ಮುಠ್ಠಾಳ ಈ ರೀತಿ ಹೇಳಿ ಸುಳ್ಳು ಸುದ್ದಿಯನ್ನು ಟಿವಿಗೆ ಹಾಕಿಸಿದ್ದಾನೆ ಎಂದು ಮಾಜಿ ಸಚಿವ ಮಾಧುಸ್ವಾಮಿ (J.C.Madhu Swamy) ವದಂತಿಗೆ ತೆರೆ ಎಳೆದಿದ್ದಾರೆ.
ಚಿಕ್ಕನಾಯಕನಹಳ್ಳಿಯಲ್ಲಿ (Chikkanayakanahalli) ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್‌ಗೆ ಸೇರುತ್ತೇನೆ ಎಂದು ಯಾವನೋ ಮುಠ್ಠಾಳ ವದಂತಿ ಹಬ್ಬಿಸಿದ್ದಾನೆ. ನನ್ನ ಜೀವನವಿಡೀ ಕಾಂಗ್ರೆಸ್ ವಿರೋಧಿಸಿಕೊಂಡು ಬಂದವನು ಎಂದು ಕಿಡಿಕಾರಿದರು. ಇದನ್ನೂ ಓದಿ: ನಾಳೆಯಿಂದ ಹೊಸ ಸರ್ಕಾರದ ಮೊದಲ ಅಧಿವೇಶನ – ಸದನ ಕದನ ಅಖಾಡ ರೆಡಿ
- Advertisement -
- Advertisement -
ಜೆಪಿ ಚಳುವಳಿಯಲ್ಲಿ (JP Movement) ಕಾಂಗ್ರೆಸ್ ವಿರುದ್ಧ ಹೋರಾಡಿದವನು ನಾನು. ಅಂತಹದರಲ್ಲಿ ಕಾಂಗ್ರೆಸ್ ಸೇರುತ್ತೇನಾ? ಇಂತಹ ವದಂತಿಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಆಗಸ್ಟ್‌ನಿಂದ ಮನೆಯ ಯಜಮಾನಿಗೆ ಗೃಹಲಕ್ಷ್ಮಿ: ಲಕ್ಷ್ಮಿ ಹೆಬ್ಬಾಳ್ಕರ್
- Advertisement -
Web Stories