ಹಿಂದಿ ಕಿರುತೆರೆಗೆ ಜಯರಾಂ ಕಾರ್ತಿಕ್ ಕಂಬ್ಯಾಕ್

Public TV
1 Min Read
jk

ನ್ನಡ ಚಿತ್ರರಂಗದ ಪ್ರತಿಭಾವಂತ ನಟ ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್ ಮತ್ತೆ ಹಿಂದಿ ಕಿರುತೆರೆಗೆ ಮರಳಿದ್ದಾರೆ. ಕಿರುತೆರೆ ಮತ್ತು ಹಿರಿತೆರೆ ಎರಡಲ್ಲೂ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಜೆಕೆ, ಈ ಹಿಂದೆ `ಸಿಯಾ ಕೆ ರಾಮ್’ ಧಾರಾವಾಹಿಯಲ್ಲಿ ರಾವಣನಾಗಿ ಅಬ್ಬರಿಸಿದ್ದರು. ಈಗ ಮತ್ತೆ ಹಿಂದಿ ಕಿರುತೆರೆಗೆ ಜೆಕೆ ಮರಳಿದ್ದಾರೆ.

JK 1

`ಅಶ್ವಿನಿ ನಕ್ಷತ್ರ’ ಧಾರಾವಾಹಿ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದ ಜೆಕೆ ಬೆಳ್ಳಿಪರದೆಯಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಕಮಾಲ್ ಮಾಡಿದ್ದಾರೆ. ಇನ್ನು ಹಿಂದಿಯ `ಸಿಯಾ ಕೆ ರಾಮ್’ ಸೀರಿಯಲ್ ಜೆಕೆ ವೃತ್ತಿಬದುಕಿಗೆ ಬಿಗ್ ಬ್ರೇಕ್ ನೀಡಿತ್ತು. ರಾಮನ ಎದುರು ರಾವಣನಾಗಿ ಖಡಕ್ ಆಗಿ ಅಭಿನಯಿಸಿದ್ದರು. ಈಗ ಮತ್ತೆ ಸತತ 5 ವರ್ಷಗಳ ನಂತರ ಹಿಂದಿ ಕಿರುತೆರೆಗೆ ಖಳನಾಯಕನಾಗಿ ಖಡಕ್ ಎಂಟ್ರಿ ಕೊಡ್ತಿದ್ದಾರೆ.

ಹಿಂದಿಯಲ್ಲಿ `ಅಲಿಬಾಬಾ ದಸ್ತಾನ್-ಎ-ಕಾಬೂಲ್’ ಎಂಬ ಫ್ಯಾಂಟಸಿ ಧಾರಾವಾಹಿ ಇದೇ ತಿಂಗಳು ಸೆಟ್ಟೇರಲಿದೆ. ಇದೇ ಧಾರಾವಾಹಿಯಲ್ಲಿ ಜಯರಾಂ ಕಾರ್ತಿಕ್ ಕೂಡ ನಟಿಸಲಿದ್ದಾರೆ. ಮಾನ್ ಸಿಂಗ್ ಈ ಧಾರಾವಾಹಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಸೀರಿಯಲ್ ಮತ್ತೆ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ತಿದ್ದು, ಪವರ್‌ಫುಲ್ ಪಾತ್ರಕ್ಕೆ ಜೆಕೆ ಬಣ್ಣ ಹಚ್ಚಲಿದ್ದಾರೆ. ಇದನ್ನೂ ಓದಿ:ಖ್ಯಾತ ಗಾಯಕ ಕೆಕೆ ಅಂತ್ಯ ಸಂಸ್ಕಾರ ಮುಂಬೈನಲ್ಲಿ : ಅಂತಿಮ ನಮನ ಸಲ್ಲಿಸಿದ ಬಿಟೌನ್

JK 2

ಈಗಾಗಲೇ ಪಾತ್ರಕ್ಕಾಗಿ ಸಕಲ ತಯಾರಿ ಮಾಡಿಕೊಂಡಿರುವ ಜೆಕೆ, ಸೀರಿಯಲ್‌ನ ಮೊದಲ ಹಂತದ ಚಿತ್ರೀಕರಣಕ್ಕಾಗಿ ಲಡಾಖ್‌ಗೆ ತೆರಳಿದ್ದಾರೆ. ಇನ್ನು ಯಾವುದೇ ಪಾತ್ರ ಕೊಟ್ರು ಆ ಪಾತ್ರವೇ ತಾವಾಗಿ ನಟಿಸೋ ಪ್ರತಿಭಾವಂತ ಕಲಾವಿದ ಜೆಕೆಯ ಹೊಸ ಅವತಾರ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *