ಹೈದರಾಬಾದ್: ಹಿರಿಯ ನಟಿ ಜಯಪ್ರದಾ ಅವರ ತಾಯಿ ನೀಲವೇಣಿ ಅವರು ಇಂದು ವಯೋಸಹಜ ಅನಾರೋಗ್ಯದಿಂದ ಹೈದರಾಬಾದ್ನಲ್ಲಿ ಮೃತಪಟ್ಟಿದ್ದಾರೆ.
ಕಳೆದ ಕೆಲವು ವಾರಗಳಿಂದ ನೀಲವೇಣಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಜಕೀಯ ಕೆಲಸಕ್ಕಾಗಿ ದೆಹಲಿಗೆ ತೆರಳಿದ್ದ ಜಯಪ್ರದಾ ಅವರು ತಾಯಿ ನಿಧನದ ವಿಚಾರ ತಿಳಿದ ತಕ್ಷಣವೇ ಹೈದರಾಬಾದ್ಗೆ ಬಂದರು. ಇದನ್ನೂ ಓದಿ: ಬಿಜೆಪಿಗೆ ಸೇರಿದರೆ ನನ್ನನ್ನು ಹೇಮಾ ಮಾಲಿನಿಯಾಗಿ ಮಾಡುತ್ತಿದ್ದರು: ಜಯಂತ್ ಚೌಧರಿ
ಜಯಪ್ರದಾ ಅವರು ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದ ನಂತರ ಚಿತ್ರರಂಗಕ್ಕೆ ಸೇರುವ ಮೊದಲು ತಾಯಿಯಿಂದ ನೃತ್ಯ ತರಬೇತಿ ಪಡೆದುಕೊಂಡರು. ಜಯಪ್ರದಾ ಅವರು ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಲು ಅವರ ತಾಯಿ ನೀಲವೇಣಿ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿದ್ದರು.
ಬಾಲಿವುಡ್ ಮತ್ತು ಸ್ಯಾಂಡಲ್ವುಡ್ ಸಿನಿಮಾದಲ್ಲಿ ನಟಿಸುವ ಮೂಲಕವಾಗಿ ಅಪಾರವಾದ ಅಭಿಮಾನಿ ಬಳಗವನ್ನು ಸಂಪಾದಿಸಿದರು. ನಂತರ ಜಯಪ್ರದಾ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಭಾರತೀಯ ಜನತಾ ಪಕ್ಷದ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.