– 6 ತಿಂಗಳಿಂದ ಷಡ್ಯಂತ್ರ ನಡೆದಿತ್ತು ಅನ್ನೋದೆಲ್ಲ ಸುಳ್ಳು
– 7-8 ವರ್ಷದಿಂದ ಮಲ್ಲಸಂದ್ರದಲ್ಲಿ ವಾಸವಿರುವ ಜಯಂತ್
ಬೆಂಗಳೂರು: ಚಿನ್ನಯ್ಯ ತಂದಿದ್ದ ಬುರುಡೆ ಪ್ರಕರಣಕ್ಕೆ ಈಗ ಬೆಂಗಳೂರು (Bengaluru) ನಂಟು ತಳುಕುಹಾಕಿಕೊಂಡಿದೆ. ಧರ್ಮಸ್ಥಳ ವಿರುದ್ಧ ಮಹಾ ಷಡ್ಯಂತ್ರಕ್ಕೆ ಬೆಂಗಳೂರಿನಲ್ಲೇ ಸ್ಕೆಚ್ ನಡೆದಿರೋದು ಬೆಳಕಿಗೆ ಬಂದಿದೆ. ಎಸ್‌ಐಟಿ ವಿಚಾರಣೆ (SIT Investigation) ವೇಳೆ ಚಿನ್ನಯ್ಯ ಜಯಂತ್ ಹೆಸರು ಬಾಯ್ಬಿಟ್ಟಿದ್ದಾನೆ. ಚಿನ್ನಯ್ಯನ (Chinnayya) ಹೇಳಿಕೆ ಆಧರಿಸಿ ಬೆಂಗಳೂರಿನ ಮಲ್ಲಸಂದ್ರದಲ್ಲಿರೋ ಜಯಂತ್ ಮನೆ ಮೇಲೆ ದಾಳಿ ನಡೆಸಿ, ಮಹಜರು ನಡೆಸಿದ್ದಾರೆ.
ಈ ನಡುವೆ ʻಪಬ್ಲಿಕ್ ಟಿವಿʼ (Public TV) ಜೊತೆಗೆ ಮಾತನಾಡಿರುವ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarody) ಆಪ್ತ ಹಾಗೂ ದೂರುದಾರ ಜಯಂತ್, ಚಿನ್ನಯ್ಯ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ನನ್ನ ಬೆಂಗಳೂರಿನ ಮನೆಗೆ ಚಿನ್ನಯ್ಯ ಬಂದಿದ್ದು ನಿಜ. ನಾನು ಅವನಿಗೆ ಆಶ್ರಯ ನೀಡಿದ್ದೆ. ಅವನೇ ಬುರುಡೆ ತಂದಿದ್ದ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲ ತಪ್ಪಿದ್ದರೆ ನನಗೆ ಶಿಕ್ಷೆ ಆಗಲಿ ಎಂದು ಒತ್ತಾಯಿಸಿದ್ದಾರೆ.
3ನೇ ಬಾರಿ ಬಂದಾಗ ಬುರುಡೆ ತಂದಿದ್ದ
ಚಿನ್ನಯ್ಯನನ್ನ ನನ್ನ ಮನೆಯಲ್ಲೇ ಇರಿಸಿ ಊಟ ಹಾಕಿದ್ದೇನೆ. ಕಳೆದ ಏಪ್ರಿಲ್‌ನಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದಾಗ ಮನೆಗೆ ಕರೆದುಕೊಂಡು ಹೋಗಿದ್ದೆ. 2 ದಿನ ಊಟ ಹಾಕಿದ್ದೆ. ಅದಕ್ಕೆ ಮನೆಗೆ ಬಂದು ಮಹಜರು ಮಾಡಿದ್ದಾರೆ. ಏಸ್‌ಐಟಿಯವರು ಏನು ಬೇಕಾದ್ರೂ ಕೇಳಲಿ, ವಿಚಾರಣೆಗೆ ಸಹಕರಿಸಲು ಸಿದ್ಧರಿದ್ದೇವೆ ಎಂದಿದ್ದಾರೆ.
ಮೊದಲು 2 ಬಾರಿ ಬಂದಾಗಲೂ ಬರಿಗೈನಲ್ಲಿ ಬಂದಿದ್ದ. 3ನೇ ಬಾರಿಗೆ ಬಂದಾಗ ಕಟ್ಟುವೊಂದನ್ನ (ಬ್ಯಾಗ್) ತಂದಿದ್ದ. ಅದರಲ್ಲಿ ತಲೆಬುರುಡೆ ಇತ್ತು, ಅದನ್ನ ಫೋಟೋ ತೆಗೆದು ಕಳಿಸಿದ್ದ. ನಂತರ ಸುಪ್ರೀಂ ಕೋರ್ಟ್‌ಗೆ ಹೋಗಲು ಸಹಾಯ ಮಾಡಿದ್ದೆ, ಅವನೊಂದಿಗೆ ನಾನೂ ಹೋಗಿದ್ದೆ. ಆಗ ನಾನು ಹಾಗೂ ಅವನು ಬುರುಡೆ ತೆಗೆದುಕೊಂಡು ಹೋಗಿದ್ದೇವೆ. ಆದ್ರೆ ಯಾವುದೇ ಕಾರಣಕ್ಕೂ ನಾನು ಷಡ್ಯಂತ್ರದಲ್ಲಿ ಭಾಗಿಯಾಗಿಲ್ಲ. ಬೇಕಿದ್ದರೆ ನನ್ನ ಹೆಂಡತಿ ಮಕ್ಕಳನ್ನು ಕೇಳಲಿ. ಸತ್ಯಕ್ಕಾಹಿ ನಾನು ಈ ಸಹಾಯ ಮಾಡಿದ್ದೇನೆ. ಷಡ್ಯಂತ್ರದಲ್ಲಿ ಮಾಡಿದ್ದೇವೆ, 6 ತಿಂಗಳಿಂದ ಪ್ಲ್ಯಾನ್ ನಡೆದಿತ್ತು ಅನ್ನೋದೆಲ್ಲ ಸುಳ್ಳು. ಇದು ಇಷ್ಟು ದೊಡ್ಡದಾಗುತ್ತೆ ಅಂದುಕೊಂಡಿರಲಿಲ್ಲ. ನಾನು ಸತ್ಯಕ್ಕಾಗಿ ಮಾಡಿದ ಕೆಲಸ. ಎಸ್‌ಐಟಿ ಯಾವುದೇ ವಿಚಾರಣೆ ನಾನು ಸಿದ್ಧ, ತಪ್ಪು ಮಾಡಿದ್ದರೆ, ಯಾವುದೇ ಶಿಕ್ಷೆಗೂ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
7-8 ವರ್ಷದಿಂದ ಮಲ್ಲಸಂದ್ರದಲ್ಲಿ ಜಯಂತ್ ವಾಸ
ಜಯಂತ್ ಕಳೆದ 7-8 ವರ್ಷದಿಂದ ಇಬ್ಬರು ಮಕ್ಕಳು, ಹೆಂಡತಿಯೊಂದಿಗೆ ಮಲ್ಲಸಂದ್ರದಲ್ಲಿ ವಾಸವಾಗಿದ್ದಾರೆ. ಐದಾರು ವರ್ಷಗಳಿಂದ ಮಲ್ಲಸಂದ್ರ ರಸ್ತೆಯಲ್ಲಿ ನಿಸರ್ಗ ನಿಧಿ ಕೊಬ್ಬರಿ ಎಣ್ಣೆ ಅಂಗಡಿ ನಡೆಸುತ್ತಿದ್ದಾರಂತೆ. ಇನ್ನು ಸ್ಥಳೀಯರು ಹೇಳುವ ಪ್ರಕಾರ, ಸ್ಥಳೀಯ ವಾಟ್ಸಪ್ ಗ್ರೂಪ್‌ಗಳಲ್ಲಿ ಧರ್ಮಸ್ಥಳ ವಿರುದ್ಧ ಕೆಲ ಪೋಸ್ಟ್ ಮಾಡ್ತಿದ್ರು. ಪ್ರಶ್ನೆ ಮಾಡಿದ್ದಕ್ಕೆ ನಂತರ ಪೋಸ್ಟ್ ಹಾಕೋದನ್ನು ಜಯಂತ್ ಬಿಟ್ಟಿದ್ರು. ಆಮೇಲೆ ಸ್ವಲ್ಪ ದಿನ ಜಯಂತ್ ಅವರು ನಮಗೆ ಕಾಣಲಿಲ್ಲ. ಬುರುಡೆ ಕೇಸಲ್ಲಿ ಜಯಂತ್ ಹೆಸರು ಕೇಳಿ ನಮಗೆ ಆಶ್ಚರ್ಯವಾಗಿದೆ ಅಂತಿದ್ದಾರೆ.
ಎಸ್‌ಐಟಿ ನೂರಾರು ಪ್ರಶ್ನೆ; ಚಿನ್ನಯ್ಯ ತಬ್ಬಿಬ್ಬು
ಬುರುಡೆ ಪ್ರಕರಣದ ಷಡ್ಯಂತ್ರ ಭೇದಿಸಲು ಸಂಬಂಧ ಎಸ್‌ಐಟಿ ಟೀಂ ಚಿನ್ನಯ್ಯನಿಂದ ಚಿನ್ನಯ್ಯನ ಬಾಯಿಂದ ಸತ್ಯ ಕಕ್ಕಿಸುತ್ತಿದ್ದಾರೆ. ಎಸ್‌ಐಟಿ ಪ್ರಶ್ನೆಗಳಿಂದ ಚಿನ್ನಯ್ಯ ದಂಗಾಗಿ ಹೋಗಿದ್ದಾನೆ. ಪ್ರಶ್ನೋತ್ತರ ಹೇಗಿತ್ತು ಅಂತ ನೋಡೋದಾದ್ರೆ..
ಎಸ್‌ಐಟಿ – ಚಿನ್ನಯ್ಯ ಪ್ರಶ್ನೋತ್ತರ ಹೀಗಿತ್ತು….
* ಎಸ್‌ಐಟಿ: ಧರ್ಮಸ್ಥಳ ಕ್ಷೇತ್ರದಲ್ಲಿ ಎಷ್ಟು ವರ್ಷ ಕೆಲಸ ಮಾಡಿದ್ರಿ..?
ಚಿನ್ನಯ್ಯ: ಸುಮಾರು ಇಪ್ಪತ್ತು ವರ್ಷ
* ಎಸ್‌ಐಟಿ: ಮೃತ ದೇಹಗಳನ್ನು ಹೂತಿದ್ದು ಹೌದಾ?
ಚಿನ್ನಯ್ಯ: ನಾನು ಬಹಳ ಮೃತ ದೇಹಗಳನ್ನು ಹೂತ್ತಿದ್ದೇನೆ
* ಎಸ್‌ಐಟಿ: ಎಷ್ಟು ಎಂಬ ಲೆಕ್ಕ ಇದೆಯಾ?
ಚಿನ್ನಯ್ಯ: ಸರಿಯಾದ ಲೆಕ್ಕ ಇಲ್ಲ
* ಎಸ್‌ಐಟಿ: ನೂರಾರು.. ಮುನ್ನೂರು ಎಂದು ಹೇಗೆ ಹೇಳಿದೆ..?
ಚಿನ್ನಯ್ಯ: ಒಂದು ಅಂದಾಜಿನಲ್ಲಿ ಲೆಕ್ಕ ಹೇಳಿದೆ
* ಎಸ್‌ಐಟಿ: ಅಂತ್ಯಕ್ರಿಯೆ ಸ್ಥಳಕ್ಕೆ ವೈದ್ಯರು, ಪೊಲೀಸರು ಬರುತ್ತಿದ್ದರಾ..?
ಚಿನ್ನಯ್ಯ: ವೈದ್ಯರು, ಪೊಲೀಸರು, ಪಂಚಾಯತ್, ಗ್ರಾಮಸ್ಥರು ಬರುತ್ತಿದ್ದರು
* ಎಸ್‌ಐಟಿ: ನೂರಾರು ಅತ್ಯಾಚಾರ ಎಂಬ ದೂರು ಇದ್ಯಲ್ಲ
ಚಿನ್ನಯ್ಯ: ಅದೆಲ್ಲ ಗೊತ್ತಿಲ್ಲ ಸ್ವಾಮಿ, ನನಗೆ ಓದು-ಬರಹ ಬರಲ್ಲ
* ಎಸ್‌ಐಟಿ: ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆದಿದೆ ನಿನಗೆ ಗೊತ್ತಾ?
ಚಿನ್ನಯ್ಯ: ನನಗೆ ಪಿತೂರಿಗಳ ಬಗ್ಗೆ ನನಗೆ ಮಾಹಿತಿ ಇಲ್ಲ, ನಾನು ಯಾರ ವಿರುದ್ಧವಲ್ಲ.. ಯಾರ ಪರವೂ ಅಲ್ಲ
* ಎಸ್‌ಐಟಿ: ನೀನು ಪ್ರಕರಣದಲ್ಲಿ ಆರೋಪಿ ಎಂಬ ಮಾಹಿತಿ ಇದ್ಯಾ..?
ಚಿನ್ನಯ್ಯ: ನನಗೆ ತಿಳಿದಿರುವುದನ್ನು ಹೇಳಿದ್ದೇನೆ ದಯವಿಟ್ಟು ಬಿಟ್ಟು ಬಿಡಿ
ಇನ್ನು ಬುರುಡೆ ಗ್ಯಾಂಗ್ ನಂಟಿನ ಬಗ್ಗೆಯೂ ಎಸ್‌ಐಟಿ ಪ್ರಶ್ನಾವಳಿ ಇಟ್ಟಿದ್ದು, ತನಿಖಾಧಿಕಾರಿಗಳ ಮುಂದೆ ಸತ್ಯ ಕಕ್ಕಿದ್ದಾನೆ.
`ಬುರುಡೆ’ ಚಿನ್ನಯ್ಯಗೆ ಗ್ರಿಲ್
* ಎಸ್‌ಐಟಿ: ಮಹೇಶ್ ತಿಮರೋಡಿ ಮಟ್ಟಣ್ಣ ಗೊತ್ತಾ..?
ಚಿನ್ನಯ್ಯ: ಗೊತ್ತು ಸರ್..
* ಎಸ್‌ಐಟಿ: ಯಾವಾಗಿನಿಂದ ಪರಿಚಯ ಇದೆ..?
ಚಿನ್ನಯ್ಯ: ಒಂದೂವರೆ-ಎರಡು ವರ್ಷದಿಂದ ಗೊತ್ತು
* ಎಸ್‌ಐಟಿ: ನಿನಗೆ ಹಣ ಕೊಟ್ಟು ಕರೆಸಿದ್ದಾರಾ?
ಚಿನ್ನಯ್ಯ: ನಾನು ಆಗಾಗ ಖರ್ಚಿಗೆ ಹಣ ತೆಗೆದುಕೊಳ್ಳುತ್ತಿದ್ದೆ, ಲೆಕ್ಕ ಇಲ್ಲ
* ಎಸ್‌ಐಟಿ: ಎಲ್ಲೆಲ್ಲಿ ಭೇಟಿಯಾಗಿದ್ದೀರಿ..?
ಚಿನ್ನಯ್ಯ: ಉಜಿರೆ, ಮಂಗಳೂರು ಕೇರಳ, ತಮಿಳುನಾಡು
* ಎಸ್‌ಐಟಿ: ತಿಮರೋಡಿ ಮನೆಯಲ್ಲಿ ಏನೆಲ್ಲ ಚರ್ಚೆ ನಡೆಯುತ್ತಿತ್ತು..?
ಚಿನ್ನಯ್ಯ: ಕ್ಷೇತ್ರದಲ್ಲಿ ಏನೆಲ್ಲ ಕೆಲಸ ಮಾಡುತ್ತಿದ್ದೆ ಎಂಬುದನ್ನು ಹೇಳುತ್ತಿದ್ದೆ, ಬಹಳ ಜನ ಬಂದು ವಿಡಿಯೋ ಮಾಡುತ್ತಿದ್ದರು
* ಎಸ್‌ಐಟಿ: ಹೀಗೆ ಹೇಳಬೇಕು ಎಂಬ ತಾಕೀತು ಏನಾದರೂ ಇತ್ತಾ..?
ಚಿನ್ನಯ್ಯ: ಕೆಲ ವಿಚಾರವನ್ನು ಅಲ್ಲಿ ಇದ್ದವರು ಹೇಳಿಕೊಡುತ್ತಿದ್ದರು, ನಾನು ಅವರು ಹೇಳಿದಂತೆ ಹೇಳುತ್ತಿದ್ದೆ.
500 ಪುಟಗಳ ವಿವರ ನೀಡಿದ ಮಟ್ಟಣ್ಣನವರ್
ಇತ್ತ ಸುಳ್ಳುಕೋರ ಸಮೀರ್, ದಾಖಲೆ ಹಿಡಿದುಕೊಂಡು ಬೆಳ್ತಂಗಡಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾನೆ. ಇತ್ತ ಗಿರೀಶ್ ಮಟ್ಟಣ್ಣನವರ್, ಎಸ್‌ಐಟಿಗೆ 500 ಪುಟಗಳ ವಿವರವಾದ ಮಾಹಿತಿ ಒಳಗೊಂಡ ದಾಖಲೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಕೆಲವು ಅಸಹಜ ಸವುಗಳ ಸರಿಯಾದ ತನಿಖೆ ನಡೆದಿಲ್ಲ. ಆ ಸಾವುಗಳ ತನಿಖೆ ನಡೆಸಿ ಎಂದು ಗಿರೀಶ್ ಮಟ್ಟಣ್ಣ ಎಸ್‌ಐಟಿಗೆ ಮನವಿ ಮಾಡಿದ್ದಾರೆ.