ಜಯನಗರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡ್ತೀನಿ, ಮಂತ್ರಿ ಸ್ಥಾನ ನೀಡಿದ್ರೆ ಸ್ವೀಕರಿಸಲ್ಲ: ಸೌಮ್ಯಾ ರೆಡ್ಡಿ

Public TV
3 Min Read
sowmya reddy public tv

ಬೆಂಗಳೂರು: ಜಯನಗರ ಕ್ಷೇತ್ರವನ್ನು ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿದ್ದೇನೆ. ಅದು ಬಿಟ್ಟು ಬೇರೆ ಯಾವುದೇ ನಿರೀಕ್ಷೆ, ಆಸೆಯಿಲ್ಲ. ಸಚಿವ ಸ್ಥಾನ ನೀಡಿದರೆ ಸ್ವೀಕರಿಸಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಹೇಳಿದ್ದಾರೆ.

ಜಯನಗರ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಗೆಲುವು ಸಾಧಿಸಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ತುಂಬಾ ಸಮಾಜಸೇವೆ ಮಾಡಿರುವುದು ಕೂಡ ಗೆಲುವಿಗೆ ಒಂದು ಕಾರಣವಾಗಿದೆ. ಇಂದು ತಂದೆ, ಕುಟುಂಬ ಹಾಗೂ ಪ್ರತಿಯೊಬ್ಬ ಕಾರ್ಯಕರ್ತರ ಗೆಲುವಾಗಿದೆ ಅಂತ ಹೇಳಿದ್ರು.

ರಂಜಾನ್ ತಿಂಗಳಾಗಿದ್ದರಿಂದ ಉಪವಾಸವಿದ್ರೂ ನಮ್ಮ ಮುಸ್ಲಿಂ ಬಾಂಧವರು ಕಷ್ಟಪಟ್ಟು ದುಡಿದಿದ್ದಾರೆ. ಇದು ನನ್ನ ಗೆಲುವಲ್ಲ. ಪ್ರತಿಯೊಬ್ಬರ ಗೆಲುವಾಗಿದೆ. ಜೆಡಿಎಸ್ ವರಿಷ್ಠ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಹೀಗೆ ಪ್ರತಿಯೊಬ್ಬರೂ ನನಗೆ ಬೆಂಬಲ ಸೂಚಿಸಿದ್ದಾರೆ. ನನನ್ನು ಆರಿಸಿದ್ದ ಜಯನಗರ ಮತದಾರರಿಗೆ ಧನ್ಯವಾದ ಎಂದರು.

REDDY

ಜಯನಗರದಲ್ಲಿ ನನ್ನ ಮನೆ ಮಗಳು ತರ ಪ್ರತಿಯೊಬ್ಬರೂ ನೋಡಿದ್ದಾರೆ. ಈ ಕ್ಷೇತ್ರವನ್ನು ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಬೇಕೆಂದು ಇದ್ದೇನೆ. ಅದು ಬಿಟ್ಟು ಬೇರೆ ಯಾವುದೇ ನಿರೀಕ್ಷೆ, ಆಸೆಯಿಲ್ಲ ಎಂದು ತಿಳಿಸಿದರು.

ಪಕ್ಷಕ್ಕೆ ನಷ್ಟ: ಬಿಟಿಎಂ ಲೇ ಔಟ್ ನಲ್ಲಿ ತಂದೆ ರಾಮಲಿಂಗಾರೆಡ್ಡಿ, ಜಯನಗರದಲ್ಲಿ ನೀವು ಗೆದ್ದಿದ್ದೀರಾ ಹೀಗಾಗಿ ಪಕ್ಷ ನಿಮಗೇನಾದ್ರೂ ಸಚಿವ ಸ್ಥಾನ ನೀಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ತಂದೆ ಯಾವುದೇ ಲಾಬಿ ಮಾಡಿಲ್ಲ. ಸಚಿವ ಸ್ಥಾನ ಬೇಕು ಅಂತ ಕೇಳಿಲ್ಲ. ಸತತ 7 ಬಾರಿ ಜನ ಅವರನ್ನು ಆಯ್ಕೆ ಮಾಡಿದ್ದಾರೆ. ಕಷ್ಟಪಟ್ಟು ದುಡಿದಿದ್ದಾರೆ. ಒಂದು ಬಾರಿನೂ ಅವರು ಪಕ್ಷ ಬಿಟ್ಟು ಹೋಗಿಲ್ಲ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಿಲ್ಲ ಅಂದ್ರೆ ಅದು ಪಕ್ಷಕ್ಕೆ ನಷ್ಟವಾಗುತ್ತೆ ಅಂತ ಹೇಳಿದ್ರು.

ಸಚಿವ ಸ್ಥಾನ ನೀಡಿದ್ರೆ ನಾನು ಸ್ವೀಕರಿಸಲ್ಲ ಅಂತ ಹೇಳಿದ ಅವರು, 7 ಬಾರಿ ಆಯ್ಕೆಯಾದ ಶಾಸಕರಿಗೆ ಕೊಟ್ಟಿಲ್ಲ. ಜಯನಗರ ಜನತೆಯ ಸೇವೆ ಮಾಡುವುದು ಬಿಟ್ಟರೆ ಬೇರೆ ಯಾವುದೇ ಆಸೆಯಿಲ್ಲ ಅಂದ್ರು.

ನಾನು ಮತ್ತು ತಂದೆ ಇಬ್ಬರೂ ಮನಗೆ ಸಚಿವ ಸ್ಥಾನ ಬೇಕು ಅಂತ ಪಟ್ಟು ಹಿಡಿದಿಲ್ಲ. ನಾಲ್ಕೈದು ಬಾರಿ ಸಚಿವರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಿ ಮಾದರಿ ವಿಧಾನಸಭೆಯನ್ನಾಗಿ ಮಾಡೋಣ ಅಂತ ಕ್ಷೇತ್ರದ ಮತದಾರರಿಗೆ ಧನ್ಯವಾದ ತಿಳಿಸಿದ್ರು.

ಯಾವ ಸುತ್ತಿನಲ್ಲಿ ಯಾರಿಗೆ ಎಷ್ಟು ಮುನ್ನಡೆ?
* 1ನೇ ಸುತ್ತಿನ ಮತ ಎಣಿಕೆ
ಬಿಜೆಪಿ 3,322
ಕಾಂಗ್ರೆಸ್- 3,749

* 2ನೇ ಸುತ್ತಿನ ಮತ ಎಣಿಕೆ
ಬಿಜೆಪಿ – 6,453
ಕಾಂಗ್ರೆಸ್ -6,719

* 3ನೇಸುತ್ತಿನ ಮತ ಎಣಿಕೆ
ಕಾಂಗ್ರೆಸ್-11,494
ಬಿಜೆಪಿ-8,617

* 4ನೇ ಸುತ್ತಿನ ಮತ ಎಣಿಕೆ
ಕಾಂಗ್ರೆಸ್-16,438
ಬಿಜೆಪಿ-11,090

* 5ನೇ ಸುತ್ತಿನ ಮತ ಎಣಿಕೆ
ಬಿಜೆಪಿ-16,331
ಕಾಂಗ್ರೆಸ್-17,923

* 6ನೇಸುತ್ತಿನ ಏಣಿಕೆ
ಕಾಂಗ್ರೆಸ್-22,356
ಬಿಜೆಪಿ-18,813

* 7ನೇ ಸುತ್ತಿನ ಮತ ಎಣಿಕೆ
ಕಾಂಗ್ರೆಸ್-27,195
ಬಿಜೆಪಿ-19,873

* 8ನೇ ಸುತ್ತಿನ ಮತ ಏಣಿಕೆ
ಬಿಜೆಪಿ- 21,437
ಕಾಂಗ್ರೆಸ್- 31,642

* 9ನೇ ಸುತ್ತಿನ ಮತ ಏಣಿಕೆ
ಕಾಂಗ್ರೆಸ್-37,288
ಬಿಜೆಪಿ -21,994

* 10ನೇ ಸುತ್ತಿನ ಮತ ಏಣಿಕೆ
ಕಾಂಗ್ರೆಸ್-40,677
ಬಿಜೆಪಿ -25,779

* 11ನೇ ಸುತ್ತಿನ ಮತ ಏಣಿಕೆ
ಕಾಂಗ್ರೆಸ್-43,476
ಬಿಜೆಪಿ -30,746

* 12ನೇ ಸುತ್ತಿನ ಮತ ಏಣಿಕೆ
ಕಾಂಗ್ರೆಸ್-45,978
ಬಿಜೆಪಿ-35,849

* 13ನೇ ಸುತ್ತಿನ ಮತ ಏಣಿಕೆ
ಕಾಂಗ್ರೆಸ್-48,584
ಬಿಜೆಪಿ-39,970

* 14ನೇ ಸುತ್ತಿನ ಮತ ಏಣಿಕೆ
ಕಾಂಗ್ರೆಸ್-51,347
ಬಿಜೆಪಿ-44,785

* 15ನೇ ಸುತ್ತಿನ ಮತ ಏಣಿಕೆ
ಕಾಂಗ್ರೆಸ್-54,457
ಬಿಜೆಪಿ-49,526

* 16ನೇ ಸುತ್ತಿನ ಮತ ಏಣಿಕೆ
ಕಾಂಗ್ರೆಸ್-54,457
ಬಿಜೆಪಿ-51,568

Share This Article
Leave a Comment

Leave a Reply

Your email address will not be published. Required fields are marked *