ಧಾರವಾಡ: ಸಿಎಂ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿಗಳಿಗೆ ಮೀಸಲಾತಿ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಅವರ ಮೇಲೆ ಸಂಪೂರ್ಣ ಭರವಸೆ ಇದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿಗಳ ಮೀಸಲಾತಿಯ ಪಾದಯಾತ್ರೆ ಹೋರಾಟಕ್ಕೆ ಒಂದು ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು. ಯಡಿಯೂರಪ್ಪನವರ ಸಂದರ್ಭದಲ್ಲಿ ನಾವು ತಾಳ್ಮೆ ಏರಿಳಿತ ಆಗಿದ್ದನ್ನು ಕಂಡಿದ್ದೇವೆ. ಆದರೆ ಸಿಎಂ ಬೊಮ್ಮಾಯಿ ಅವರು ಇಂದಿನವರೆಗೆ ಯಾರೂ ಸ್ಪಂದಿಸದಷ್ಟು ಅವರು ಸ್ಪಂದಿಸಿದ್ದಾರೆ. ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಬೊಮ್ಮಾಯಿ ಅವರು ನಮ್ಮ ಹೋರಾಟ ಸಮಿತಿಯ ಅಧ್ಯಕ್ಷರಾದ ಬಸನಗೌಡ ಪಾಟೀಲ್ ಯತ್ನಾಳ, ಸಚಿವ ಸಿ.ಸಿ. ಪಾಟೀಲ್ ಹಾಗೂ ವಿಜಯಾನಂದ ಕಾಶಪ್ಪನವರನ್ನು ಕರೆದು ಮಾತನಾಡಿಸಿದ್ದಾರೆ. ಬೆಳಗಾವಿ ಹೋರಾಟದ ವೇಳೆ ಸಿಎಂ ಅವರೇ ನಮ್ಮ ಸ್ಥಳಕ್ಕೆ ಬಂದು ಇನ್ನಷ್ಟು ಸಮಯಾವಕಾಶ ಕೇಳಿದ್ದರು. ಪದೇ ಪದೇ ಚುನಾವಣೆ ಬಂದಿದ್ದರಿಂದ ಸಭೆ ಮಾಡಲು ಆಗಿಲ್ಲ ಎಂದು ಹೇಳಿದ್ದರು. ಹೀಗಾಗಿ ಅವರಿಗೆ ಸಮಯ ಕೊಡಲಾಗಿತ್ತು ಎಂದರು.
Advertisement
Advertisement
ನಾವು ಪಾದಯಾತ್ರೆ ಮಾಡಿ ಒಂದು ವರ್ಷ ತುಂಬಲಿದೆ. ಕೇವಲ ಉತ್ತರ ಕರ್ನಾಟಕಕ್ಕೆ ಮಾತ್ರ ಸಿಮೀತವಾಗಿದ್ದ ಪಂಚಮಸಾಲಿ ಸಮಾಜದ ಪಾದಯಾತ್ರೆಯಿಂದಾಗಿ ಮಲೆನಾಡು ಹಾಗೂ ದಕ್ಷಿಣ ಭಾಗದವರೆಗೂ ವಿಸ್ತರಣೆಗೊಂಡಿದೆ. ಹೀಗಾಗಿ ಕೂಡಲ ಸಂಗಮದಲ್ಲಿ ಜನವರಿ 14ರಂದು ಪಂಚಮಸಾಲಿ ಹೋರಾಟದ ವರ್ಷಾಚರಣೆ ಕಾರ್ಯಕ್ರಮ ನಡೆಸಲಿದ್ದೇವೆ. ಸಿಎಂ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅಲ್ಲಿ ಕೂಡಾ ನಾವು ಮನವಿ ಕೊಡುತ್ತೇವೆ. ಸಿಎಂ ನಮಗೆ ಆ ದಿನ ಎಳ್ಳು, ಬೆಲ್ಲ ಕೊಡಬಹುದು. ಅದೇ ದಿನ ಮೀಸಲಾತಿ ಘೋಷಣೆ ಮಾಡಿದರೆ ಆಶ್ಚರ್ಯ ಪಡೆಬೇಕಾಗಿಲ್ಲ. ಅವರು ಯುಗಾದಿ ಒಳಗಾದರೂ ಸಿಹಿ ಸುದ್ದಿ ಕೊಡುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರು. ಇದನ್ನೂ ಓದಿ: ತರಕಾರಿ, ಹಣ್ಣುಗಳನ್ನು ಲಂಚವಾಗಿ ಪಡೆಯುತ್ತಿದ್ದ ಅಧಿಕಾರಿಗಳು!
ಯಡಿಯೂರಪ್ಪ ನಮ್ಮವರು ಎಂದು ನಂಬಿದ್ದೆವು, ಅವರನ್ನು 10 ವರ್ಷ ನಂಬಿದರೂ ಸಹ ಅವರು ಅವಕಾಶ ಪಡೆದುಕೊಳ್ಳಲಾಗಲಿಲ್ಲ. ಶೇ. 90ರಷ್ಟು ನಮ್ಮ ಸಮಾಜ ಯಡಿಯೂರಪ್ಪ ಅವರನ್ನ ಬೆಂಬಲಿಸಿತ್ತು. ಬಿಜೆಪಿ ಸರ್ಕಾರ ಯಾವತ್ತೂ ಈ ಸಮಾಜದ ಕೈಬಿಡಲ್ಲ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜಾರ್ಖಂಡ್ ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಣೆ
ಸಿಎಂ ಶಿಗ್ಗಾವಿಯಲ್ಲಿ ಮೂರು ಬಾರಿ ಗೆಲ್ಲಲು ಯಥೆಚ್ಚ ಬೆಂಬಲ ಕೊಟ್ಟಿದ್ದು ಪಂಚಮಸಾಲಿ ಸಮಾಜವಾಗಿದೆ. ಹೀಗಾಗಿ ಸಿಎಂ ಅನ್ಯಾಯ ಮಾಡಲ್ಲ ಎಂಬ ನಂಬಿಕೆ ಇದೆ. ಯತ್ನಾಳ ಅವರು ಒಂದು ವರ್ಷದಿಂದ ಏನೇನು ಹೇಳಿದ್ದಾರೆ ಅದೆಲ್ಲವೂ ಸತ್ಯ ಆಗಿದೆ. ಯತ್ನಾಳ್ ಅವರೇ ಸಿಎಂ ಆದರೂ ಆಗಬಹುದು. ಏನೇ ಬದಲಾವಣೆ ಆದರೂ ನಮ್ಮ ಸಮಾಜಕ್ಕೆ ಬೊಮ್ಮಾಯಿ ಅವರೇ ನ್ಯಾಯ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.