ಬೆಳಗಾವಿ: ಪಂಚಮಸಾಲಿ ಸಮುದಾಯದಲ್ಲಿ ಒಳಜಗಳ ತೀವ್ರಗೊಂಡಿದೆ. ಬೆಳಗಾವಿಯಲ್ಲಿ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ನಡೆದ ಪಂಚಮಸಾಲಿ ಸಮುದಾಯದ ರಾಜ್ಯ ಕಾರ್ಯಕಾರಿಣಿಯಲ್ಲಿ ಮೂರನೇ ಪೀಠ ಬೆಂಬಲಿಸುತ್ತಿರುವ ಸಚಿವ ನಿರಾಣಿ ನಡೆಗೆ ಆಕ್ರೋಶ ವ್ಯಕ್ತವಾಗಿದೆ.
Advertisement
ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ಸಮುದಾಯದ ರಾಜ್ಯ ಕಾರ್ಯಕಾರಿಣಿ ಸಭೆ ಮುಕ್ತಾಯದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ನಿರಾಣಿ ಈ ಹಿಂದೆ ಶ್ರೀಪೀಠಕ್ಕೆ ತಂದುಕೊಟ್ಟಿದ್ದ ವಸ್ತುಗಳನ್ನು ಅವರ ಮನೆಗೆ ಮರಳಿಸಲು ತೀರ್ಮಾನಿಸಲಾಗಿದೆ. ಜಯ ಮೃತ್ಯುಂಜಯ ಸ್ವಾಮೀಜಿ ನಮ್ಮ ಋಣದಲ್ಲಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ಇದರಿಂದ ನಮಗೆ ನೋವಾಗಿದೆ. ನಾವು ವ್ಯಕ್ತಿಯ ಋಣದಲ್ಲಿರಲು ಬಯಸಲ್ಲ. ಸಮಾಜದ ಋಣದಲ್ಲಿ ಬಯಸುತ್ತೇವೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 15 ದಿನ ಟೋಯಿಂಗ್ ಸ್ಥಗಿತ: ಆರಗ ಜ್ಞಾನೇಂದ್ರ
Advertisement
Advertisement
ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಅಪಪ್ರಚಾರ ಆಗುತ್ತಿದೆ. ಶ್ರೀ ಪೀಠಕ್ಕೆ ಎಲ್ಲರೂ ದಾನ ಧರ್ಮ ಕೊಟ್ಟಿದ್ದಾರೆ. ಅವರ ಹೆಸರಲ್ಲಿ ಪದೇ ಪದೇ ನಮ್ಮ ಋಣದಲ್ಲಿದ್ದಾರೆ ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಹೀಗಾಗಿ ಮುರುಗೇಶ್ ನಿರಾಣಿ ಹೆಸರಲ್ಲಿ ಶ್ರೀ ಪೀಠಕ್ಕೆ ಕೊಟ್ಟಂತ ವಸ್ತುಗಳನ್ನು ಅವರ ಮನೆಗೆ ಕೊಡಲು ನಿರ್ಣಯ ಮಾಡಲಾಗಿದೆ. ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರದ 2A ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಒತ್ತಾಯಿಸಲಾಗುವುದು. ಕಳೆದ ಒಂದು ವರ್ಷದಿಂದ ನಿರಂತರವಾಗಿ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
Advertisement
ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮಹತ್ವದ ಮೂರು ನಿರ್ಣಯ ಕೈಗೊಂಡಿದ್ದೇವೆ. ಬಜೆಟ್ ಮುನ್ನ ಮೀಸಲಾತಿ ನೀಡೋದಾಗಿ ಸಿಎಂ ಭರವಸೆ ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಬಜೆಟ್ ಅಧಿವೇಶನದೊಳಗೆ ಮೀಸಲಾತಿ ನೀಡಲು ಆಗ್ರಹ ಮಾಡಿದರು. ಸಮಾಜ ಒಡೆಯುತ್ತಿರುವ ಕುತಂತ್ರಿಗಳನ್ನು ನಿರ್ಲಕ್ಷಿಸುವುದು ಮತ್ತು ಮುರುಗೇಶ್ ನಿರಾಣಿ ಹೆಸರಲ್ಲಿ ಶ್ರೀಪೀಠಕ್ಕೆ ಕೊಟ್ಟಂತಹ ವಸ್ತುಗಳನ್ನು ಅವರ ಮನೆಗೆ ವಾಪಸ್ ಕೊಡಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸುಧಾಕರ್ ಏನು ಸಿಎಂಗಿಂತ ದೊಡ್ಡವರಾ? ಬಿಜೆಪಿ ಶಾಸಕ ಕಿಡಿ
ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನಮಗೆ ಮೀಸಲಾತಿ ಕೊಡಬೇಕು ಅನ್ನೋ ಮನಸ್ಸಿದೆ. ಸಿಎಂ ಅವರು ಹೇಳಿದಂತೆ ಬಜೆಟ್ ಒಳಗಾಗಿ ಮೀಸಲಾತಿ ಕೊಡಬೇಕು. ವಿಳಂಬ ಆಗುತ್ತಿದೆ ಅನಿಸುತ್ತಿದೆ. ಕೊನೆಯದಾಗಿ ಹೋರಾಟ ಮಾಡುತ್ತೇವೆ. ಮೀಸಲಾತಿ ಒಡೆಯುವ ಕುತಂತ್ರ ಮಾಡುವ ವ್ಯಕ್ತಿಗಳನ್ನು ನಿರ್ಲಕ್ಷಿಸುತ್ತೇವೆ. ನನಗೆ ಮುಖ್ಯ ಇರುವುದು ಮಠ. ಮೀಸಲಾತಿ ಮಠ ಕಟ್ಟುವುದಿಲ್ಲ. ಪಂಚಮಸಾಲಿ ಮೂರನೇ ಪೀಠ, ನಾಲ್ಕನೇ ಪೀಠಕ್ಕೆ ಸ್ವಾಗತನೂ ಇಲ್ಲ ವಿರೋಧನೂ ಮಾಡಲ್ಲ ಎಂದು ಸ್ವಾಮೀಜಿ ಹೇಳಿದರು.