ದಾವಣಗೆರೆ: ಕೆಲ ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಕೂಡಲ ಸಂಗಮ ಮಠದ ಜಯಮೃತ್ಯುಂಜಯ ಸ್ವಾಮೀಜಿ ಇದೀಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯಿತ ಸಮಾವೇಶದಲ್ಲಿ ಒಬ್ಬ ತಂದೆಗೆ ಹುಟ್ಟಿದವರು ಲಿಂಗಾಯಿತರು, ಐದು ತಂದೆಗಳಿಗೆ ಹುಟ್ಟಿದವರು ವೀರಶೈವರು ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಸ್ವಾಮೀಜಿಯ ಮತ್ತೊಂದು ವಿವಾದಾತ್ಮಕ ಹೇಳಿಕೆಯ ಆಡಿಯೋ ವೈರಲ್ ಅಗಿದೆ.
Advertisement
Advertisement
ಈ ಆಡಿಯೋ ಕ್ಲಿಪ್ ನಲ್ಲಿ ಜಂಗಮರನ್ನು ಹೀಯಾಳಿಸಿ ನಿಂದಿಸಿದ್ದಾರೆ. ಪಂಚಮಸಾಲಿ ಸಮಾಜದ ಮುಖಂಡ ಶರಣಪ್ಪನ ಜೊತೆ ಫೋನ್ ಸಂಭಾಷಣೆ ಮಾಡುತ್ತಾ, ಜಂಗಮ ಜನಾಂಗ 2% ಇದ್ದು ಪಂಚಮಸಾಲಿ ಸಮುದಾಯವರು ಮೂತ್ರ ವಿಸರ್ಜನೆ ಮಾಡಿದರೆ ಅದರಲ್ಲಿ ಹರಿದುಕೊಂಡು ಹೊಗ್ತಾರೆ ಎನ್ನುವ ಆಡಿಯೋ ಜಂಗಮರನ್ನು ಕೆರಳುವಂತೆ ಮಾಡಿದೆ.
Advertisement
Advertisement
ಅಲ್ಲದೇ ಸ್ವಾಮೀಜಿಯ ಈ ಆಡಿಯೋ ವೈರಲ್ ಆಗಿ ವಾಟ್ಸಪ್ ಫೇಸ್‍ಬುಕ್ ಗಳಲ್ಲಿ ರಾರಾಜಿಸುತ್ತಿದೆ. ಅಲ್ಲದೇ ಜಯಮೃತ್ಯುಂಜಯ ಸ್ವಾಮೀಜಿಯ ಆಡಿಯೋ ಕೇಳಿ ರಾಯಚೂರಿನ ಜಂಗಮ ಸಮಾಜದ ವಿರುಪಾಕ್ಷ ಸ್ವಾಮೀಜಿ ಜಯಮೃತ್ಯುಂಜಯ ಸ್ವಾಮೀಜಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದ್ರಲ್ಲಿ ಸ್ವಾಮೀಜಿ ತಮ್ಮನ್ನು ಸಮರ್ಥನೆ ಮಾಡಿಕೊಂಡಿದ್ದು, ಆಡಿಯೋದಲ್ಲಿರುವ ಧ್ವನಿ ನನ್ನದೇ. ಆದರೆ ನನಗೆ ಕೆಟ್ಟ ಹೆಸರು ತರಲು ಯಾರೋ ಆಡಿಯೋ ತಿರುಚಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದ್ರೆ ಜಂಗಮ ವಿರುಪಾಕ್ಷ ಸ್ಚಾಮೀಜಿ ಮಾತ್ರ ಬಹಿರಂಗ ಸವಾಲ್ ಹಾಕಿದ್ದಾರೆ. ಜಂಗಮ ಸಮುದಾಯದ ಮುಂದೆ ಬಂದು ನಿಲ್ಲುತ್ತೇವೆ. ಮೂತ್ರ ವಿಸರ್ಜನೆ ಎಲ್ಲಿ ಮಾಡಿಕೊಳ್ಳುತ್ತೀರಿ ನಾವು ನೋಡ್ತಿವಿ ಎಂದು ಉತ್ತರಿಸಿದ್ದಾರೆ. ಅಲ್ಲದೆ ಇಡೀ ಜಂಗಮ ಸಮುದಾಯವರ ಕ್ಷಮೆ ಕೇಳುವಂತೆ ಫೋನ್ ಮಾಡಿ ಜಯಮೃತ್ಯುಂಜಯ ಸ್ವಾಮೀಜಿಗೆ ಕ್ಲಾಸ್ ತೆಗೆತುಕೊಂಡಿದ್ದಾರೆ.