ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ, ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ರೆಕಾರ್ಡ್ ಮಾಡಲಾಗಿರೋ ವಿಡಿಯೋವನ್ನ ಬಿಡುಗಡೆ ಮಾಡಲಾಗಿದೆ.
ಶಶಿಕಲಾ ನಟರಾಜನ್ ಬಣ ಈ ವಿಡಿಯೋವನ್ನ ರಿಲೀಸ್ ಮಾಡಿದ್ದು, ಆಸ್ಪತ್ರೆಯ ಬೆಡ್ ಮೇಲೆ ಜಯಲಲಿತಾ ಆಹಾರ ಸೇವನೆ ಮಾಡುತ್ತಿರೋ 20 ಸೆಕೆಂಡ್‍ಗಳ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ಜಯಲಲಿತಾ ಜ್ಯೂಸ್ ಕುಡಿಯುತ್ತಾ ಟಿವಿ ನೋಡುತ್ತಿರೋದನ್ನ ಕಾಣಬಹುದು. ಗುರುವಾರ ಆರ್‍ಕೆ ನಗರ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಈ ಹೊತ್ತಲ್ಲೇ ಶಶಿಕಲಾ ಬಣ ಆಸ್ಪತ್ರೆ ವಿಡಿಯೋವನ್ನ ಬಿಡುಗಡೆ ಮಾಡಿದೆ. ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಫೋಟೋ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದರೂ ಯಾವುದೇ ಫೋಟೋ ರಿಲೀಸ್ ಆಗಿರಲಿಲ್ಲ.
Advertisement
Advertisement
ಜಯಲಲಿತಾ ಕೊನೆಯ ದಿನಗಳಲ್ಲಿ ಹೇಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ನಮ್ಮಲ್ಲಿ ಕೆಲವು ವಿಡಿಯೋಗಳಿದ್ದು, ಅವುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಶಶಿಕಲಾ ಸೋದರ ಸಂಬಂಧಿ ಜಯನಾಥ್ ದಿವಾಕರನ್ ಈ ಹಿಂದೆ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದರು. ಪನ್ನಿರ್ ಸೆಲ್ವಂ ಅವರ ಗುಂಪಿನ ಟೀಕೆಗಳಿಗೆ ಉತ್ತರ ಎಂಬಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು.
Advertisement
Advertisement
ಜಯಲಲಿತಾ ಸಾವು ನಿಗೂಢವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಪನ್ನೀರ್ ಸೆಲ್ವಂ ಬಣ ಒತ್ತಾಯಿಸಿತ್ತು. ಅಲ್ಲದೆ ಜಯಲಲಿತಾ ಅವರನ್ನ ಕೊಲೆ ಮಾಡಲಾಗಿದೆ ಎಂದು ಕೂಡ ಆರೋಪಿಸಲಾಗಿತ್ತು. ಇದನ್ನು ತಮ್ಮ ಫೇಸ್ ಬುಕ್ ಹೇಳಿಕೆಯಲ್ಲಿ ಉಲ್ಲೇಖಿಸಿದ್ದ ದಿವಾಕರನ್, ”ಜಯಲಲಿತಾ ಹಾಗೂ ಶಶಿಕಲಾ ನಡುವಿನ ಅನ್ಯೋನ್ಯತೆ ಎಷ್ಟಿತ್ತು ಎಂಬುದು ನನಗೆ ಗೊತ್ತು. ಅದಕ್ಕೆ ಸಾಕ್ಷಿಯಾಗಿ ಜಯಲಲಿತಾ ಅವರ ಕೊನೆಯ ದಿನಗಳಲ್ಲಿ ಅವರ ಹಾಗೂ ಶಶಿಕಲಾ ನಡುವಿನ ಬಾಂಧವ್ಯವನ್ನು ಬಿಂಬಿಸುವ ವೀಡಿಯೋಗಳು ನನ್ನಲ್ಲಿವೆ. ಜಯಲಲಿತಾ ತಮ್ಮ ಕೊನೆಯ ದಿನಗಳನ್ನು ಕಳೆದ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಅವುಗಳನ್ನು ಚಿತ್ರೀಕರಿಸಲಾಗಿದೆ. ನಾನು ಆ ವಿಡಿಯೋಗಳನ್ನು ಫೇಸ್ ಬುಕ್ ನಲ್ಲಿ ಹಾಕಿದರೆ ಹೇಗಿರುತ್ತೆ? ಜಯಲಲಿತಾ ಅವರದ್ದು ಸಹಜ ಸಾವಲ್ಲ ಎಂದು ದನಿಯೆತ್ತಿದ್ದ ಪನ್ನೀರ್ ಸೆಲ್ವಂ ಬಣದ ಪಿಎಚ್ ಪಾಂಡಿಯನ್ ಹಾಗೂ ಮನೋಜ್ ಕೆ. ಪಾಂಡಿಯನ್ ಅವರ ಪರಿಸ್ಥಿತಿ ಹೇಗಿರುತ್ತೆ?” ಎಂದು ದಿವಾಕರನ್ ಹೇಳಿಕೊಂಡಿದ್ದರು.
https://www.youtube.com/watch?v=gZTeqiaWTh4&feature=youtu.be