ಮೈಸೂರು: ದೇಶಕ್ಕೆ ಒಬ್ಬರೇ ರಾಷ್ಟ್ರಪತಿ, ಒಂದು ಸಮುದಾಯಕ್ಕೆ ಒಬ್ಬರೇ ಗುರು. ಮತ್ತೆ ಮೂರನೇ ಪೀಠದ ಅಗತ್ಯ ಇಲ್ಲ ಎಂದು ಕೂಡಲ ಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಮೈಸೂರಿನಲ್ಲಿ ಪ್ರತಿಪಾದಿಸಿದ್ದಾರೆ.
ಫೆಬ್ರವರಿ 14ರಂದು ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ಆದರೆ ಕೂಡಲ ಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಜ್ಯಪಾಲರು
Advertisement
Advertisement
ಕಳೆದ 14 ವರ್ಷಗಳಿಂದ ಕಷ್ಟ ಪಟ್ಟು ಸಮುದಾಯವನ್ನು ಒಗ್ಗೂಡಿಸಿದ್ದೇನೆ. ಮಳೆ, ಬಿಸಿಲು, ಗಾಳಿ ಎನ್ನದೇ ಪೀಠವನ್ನು ಕಟ್ಟಲಾಗಿದೆ. ಕೂಡಲ ಸಂಗಮ ಶ್ರೀಗಳ ಪ್ರಭಾವ ಹೆಚ್ಚಾಗುವ ಹೊಟ್ಟೆ ಕಿಚ್ಚಿನಿಂದ ಈ ರೀತಿಯ ಹುನ್ನಾರ ನಡೆಯುತ್ತಿದೆ. ಸದ್ಯದಲ್ಲೇ ನಮ್ಮ ಹೋರಾಟಕ್ಕೆ ಜಯ ಸಿಗಲಿದೆ ಎಂದು ಹೇಳಿದರು.
Advertisement
ಮೀಸಲಾತಿಯ ಸಂಪೂರ್ಣ ಲಾಭ ಯತ್ನಾಳ್, ಸಿಸಿ ಪಾಟೀಲ್ ಹಾಗೂ ಬೆಲ್ಲದ್ ಅವರಿಗೆ ಸಿಗುವ ಹೊಟ್ಟೆಕಿಚ್ಚಿನಿಂದ ಮೂರನೇ ಪೀಠ ಸ್ಥಾಪನೆಗೆ ಮುಂದಾಗಿದ್ದಾರೆ. ಯಾರು ಏನೇ ಮಾಡಿದರೂ ಈ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ. ಪಂಚಮಸಾಲಿ ಪೀಠವೇ ನಮ್ಮ ಪೀಠ. ಅವರು ಬೇಕಾದರೆ ಮನೆಗೊಂದು, ಊರಿಗೊಂದು ಮಾಡಿಕೊಳ್ಳಲಿ ಎಂದರು. ಇದನ್ನೂ ಓದಿ: ಎಮ್ಮೆ ಹುಟ್ಟುಹಬ್ಬ ಆಚರಿಸಿದ ರೈತ
Advertisement
ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಕೊಡಿಸುವುದಷ್ಟೇ ನಮ್ಮ ಗುರಿ. ಈ ಹೋರಾಟ ತಡೆಯಲು ಮಾನಸಿಕ ತೊಂದರೆ ನೀಡುತ್ತಿದ್ದಾರೆ. ಏನೇ ಪ್ರಯತ್ನ ನಡೆದರೂ ಈ ಹೋರಾಟ ಮಾತ್ರ ನಿಲ್ಲಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.