– ಮಹಿಳೆಯರ ಸ್ವಾತಂತ್ರ್ಯ ಮೊಟಕು ಮಾಡುವ ಕಾನೂನು ಬೇಡ
ಮಡಿಕೇರಿ: ಮೈಸೂರಿನಲ್ಲಿ ನಡೆದ ಸಾಮೂಹಿಕವಾಗಿ ಅತ್ಯಾಚಾರ ಪ್ರಕರಣ ಚಾಮುಂಡಿ ದೇವಿಯ ತಪ್ಪಲಿನಲ್ಲಿ ಆಗಿರುವುದು ಇನ್ನು ಅಪಮಾನ. ಇದು ಕನ್ನಡಾಂಬೆಗೆ ಮಾಡಿರುವ ಅಪಮಾನ ಎಂದು ಪಂಚಮಸಾಲಿ ಸಮುದಾಯ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
Advertisement
ಕೊಡಗಿನ ಕೋಡ್ಲಿಪೇಟೆಯಲ್ಲಿ ಮಾತಾನಾಡಿದ ಅವರು, ಸಾಮೂಹಿಕವಾಗಿ ಅತ್ಯಾಚಾರ ಚಾಮುಂಡಿ ದೇವಿಯ ತಪ್ಪಲಿನಲ್ಲಿ ಆಗಿರುವುದು ಅಪಮಾನ ಇದರಿಂದ ಕರ್ನಾಟಕದ ನೈತಿಕತೆ ತಲೆತಗ್ಗಿಸುವಂತಾಗಿದೆ. ನಿರ್ಭಯ ಕಾನೂನನ್ನು ಕರ್ನಾಟಕದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಬೇಕು ಎಂದರು. ಇದನ್ನೂ ಓದಿ: ಚುನಾವಣೆಯ ಅಬ್ಬರ ಪ್ರಚಾರ- ಕೊರೊನಾ ನಿಯಮ ಉಲ್ಲಂಘಿಸಿದ ಭಗವಂತ ಖೂಬಾ
Advertisement
Advertisement
ಕೇಂದ್ರ ಸರ್ಕಾರ ಜಾರಿಮಾಡಿರುವ ನಿರ್ಭಯ ಕಾನೂನನ್ನು ಬಳಸಿಕೊಂಡು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಲಿ. ದೇಶ, ಕರ್ನಾಟಕದಲ್ಲಿ ಭಯದ ವಾತಾವರಣ ಇಲ್ಲದಂತೆ ಇತ್ತು ಆದರೆ ಇಂದು ವಿದ್ಯಾರ್ಥಿಗಳು, ಮಹಿಳೆಯರು. ಭಯದಲ್ಲಿ ಓಡಾಡುವಂತಾಗಿದೆ. ಸರ್ಕಾರ ಮಹಿಳೆಯರಿಗೆ ರಕ್ಷಣೆ ಕೊಡುವ ಕಾನೂನುಗಳನ್ನು ಮಾಡಲಿ ಅದು ಬಿಟ್ಟು ಅವರ ಸ್ವಾತಂತ್ರ್ಯವನ್ನು ಮೊಟಕು ಮಾಡುವ ಕಾನೂನು ಮಾಡುವುದು ಬೇಡ ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.