ನವದೆಹಲಿ: ರಾಜ್ಯಸಭೆಯಲ್ಲಿ (Rajya Sabha)ವಿದಾಯದ ಭಾಷಣದ ವೇಳೆ ಸದನದ ಎಲ್ಲಾ ಸದಸ್ಯರಲ್ಲಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ (Jaya Bachchan) ಕ್ಷಮೆಯಾಚಿಸಿದ್ದಾರೆ.
ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು ಸಂಸತ್ತಿನ ನಡೆಯತ್ತಿದ್ದ ಬಜೆಟ್ ಅಧಿವೇಶನದಲ್ಲಿ ರಾಜ್ಯಸಭಾ ಅಧ್ಯಕ್ಷರಾದ ಜಗದೀಪ್ ಧನಕರ್ (Jagdeep Dhankar) ಅವರನ್ನು ವ್ಯಂಗ್ಯ ಮಾಡಿ ಮಾತನಾಡಿದ್ದರು. ಇದಕ್ಕೆ ಬಾರಿ ವಿರೋಧ ವ್ಯಕ್ತವಾಗಿತ್ತು. ಅದಕ್ಕೆ ಅವರು ಈಗ ರಾಜ್ಯಸಭೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಕ್ಷಮೆ ಕೇಳಿದ್ದಾರೆ. ಜಯಾ ಅವರು ತಮ್ಮ ವಿದಾಯದ ಭಾಷಣದ ವೇಳೆ ಸದನದ ಎಲ್ಲ ಸದಸ್ಯರಲ್ಲಿ, ತಾನು ಮುಂಗೋಪಿ ಆದರೆ ಯಾರನ್ನು ನೋಯಿಸುವ ಉದ್ದೇಶ ಹೊಂದಿಲ್ಲ ಎಂದು ಹೇಳಿ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಶಾಸಕ ಯತ್ನಾಳ್, ರಾಜ್ಯಾಧ್ಯಕ್ಷ ವಿಜಯೇಂದ್ರ ಸಮಾಗಮ!
ಜಯಾ ಅವರ ವಿದಾಯ ಭಾಷಣದಲ್ಲಿ ನಾನು ಏಕೆ ಕೋಪಗೂಳ್ಳುತ್ತೇನೆ ಎಂದು ಜನರು ನನ್ನನ್ನು ಪ್ರಶ್ನೆ ಮಾಡುತ್ತಾರೆ. ಅದು ನನ್ನ ಸ್ವಭಾವ. ನಾನು ನನ್ನನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಏನನ್ನಾದರೂ ಇಷ್ಟಪಡದೇ ಇದ್ದಲ್ಲಿ ಅಥವಾ ಒಪ್ಪದೇ ಇದ್ದರೆ ತಾಳ್ಮೆಯನ್ನು ಕಳೆದುಕೊಳ್ಳುತ್ತೇನೆ. ನಾನು ನಿಮ್ಮಲ್ಲಿ ಯಾರೊಂದಿಗಾದರೂ ಅನುಚಿತವಾಗಿ ವರ್ತಿಸಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಚೌಧರಿ ಚರಣ್ ಸಿಂಗ್, ಪಿವಿ ನರಸಿಂಹ ರಾವ್, ಸ್ವಾಮಿನಾಥನ್‌ಗೆ ಭಾರತ ರತ್ನ
ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ ಸದಸ್ಯರ ಕೊಡುಗೆಯನ್ನು ಪ್ರೀತಿಯಿಂದ ಸ್ವೀಕರಿಸಿದ ಉಪಾಧ್ಯಕ್ಷ ಜಗದೀಪ್ ಧನಕರ್ ಅವರು ಮಾತನಾಡಿ ನಮ್ಮ ಗೌರವಾನ್ವಿತ ಸಹೋದ್ಯೋಗಿಗಳ ನಿವೃತ್ತಿ ನಿಸ್ಸಂದೇಹವಾಗಿ ಶೂನ್ಯವನ್ನು ಉಂಟು ಮಾಡುತ್ತದೆ. ಪ್ರತಿಯೊಂದು ಆರಂಭಕ್ಕೂ ಒಂದು ಅಂತ್ಯವಿದೆ. ಹಾಗೆಯೇ ಪ್ರತಿ ಅಂತ್ಯವು ಹೊಸ ಆರಂಭವನ್ನು ಹೊಂದಿದೆ ಎಂದು ಹೇಳಿ ಶುಭ ಹಾರೈಸಿದರು. ಇದನ್ನೂ ಓದಿ: NDA ಒಕ್ಕೂಟ ಸೇರಲಿರುವ ಆರ್‌ಎಲ್‌ಡಿ- INDIA ಒಕ್ಕೂಟಕ್ಕೆ ಮತ್ತೊಂದು ಶಾಕ್