ಇಂಡೋ-ಪಾಕ್‌ ಕದನಕ್ಕೆ ನವರಾತ್ರಿ ಅಡ್ಡಿಯಾಗುತ್ತಾ? – ಹೈವೋಲ್ಟೇಜ್‌ ಸಭೆಯಲ್ಲಿ BCCI ಹೇಳಿದ್ದೇನು?

Public TV
2 Min Read
IND vs PAK 10

ಮುಂಬೈ: ಐಸಿಸಿ ವಿಶ್ವಕಪ್‌ ಟೂರ್ನಿಗೆ (World Cup 2023) ಸಂಬಂಧಿಸಿದಂತೆ ರಾಜ್ಯ ಸಂಸ್ಥೆಗಳೊಂದಿಗೆ ಹೈವೋಲ್ಟೇಜ್‌ ಸಭೆ ನಡೆಸಿದ ಬಿಸಿಸಿಐ (BCCI), ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ (India-Pakistan) ನಡುವಿನ ಪಂದ್ಯವು ನಿಗದಿಪಡಿಸಿದ ದಿನಾಂಕ, ಸ್ಥಳದಲ್ಲೇ ನಡೆಯಲಿದೆ. ಈ ಕುರಿತು ಇನ್ನೆರಡು-ಮೂರು ದಿನಗಳಲ್ಲಿ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

1640118727 BCCI Logo

ಅಕ್ಟೋಬರ್‌ 15 ರಂದು ನವರಾತ್ರಿ ಉತ್ಸವದ ಮೊದಲ ದಿನ ಆರಂಭವಾಗುವುದರಿಂದ ಅಕ್ಟೋಬರ್‌ 14 ರಂದೇ ಪಂದ್ಯ ನಡೆಸಲಾಗುವುದು ಎಂದು ಹೇಳಲಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಬಿಸಿಸಿಐ, ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ.‌ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಿಗದಿತ ದಿನಾಂಕ ಮತ್ತು ಸ್ಥಳದಲ್ಲೇ ನಡೆಯಲಿದೆ. ಇನ್ನೆರಡು-ಮೂರು ದಿನಗಳಲ್ಲಿ ಅಧಿಕೃತ ನಿರ್ಧಾರ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ (Jay Shah) ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಆಟಗಾರರು ಹುಲಿಗಳಂತೆ ಆಡ್ತಾರೆ, ಭಾರತವನ್ನ ಎಲ್ಲಿ ಬೇಕಾದ್ರೂ ಸೋಲಿಸ್ತಾರೆ – ಪಾಕ್‌ ಮಾಜಿ ಕ್ರಿಕೆಟಿಗ

Jay Shah

ಅಂತಿಮ ನಿರ್ಧಾರಕ್ಕೆ ಬರುವುದಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ಮತ್ತು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಜೊತೆಗೆ ಚರ್ಚೆ ನಡೆಸಲಾಗುವುದು. ಮೂವರು ಐಸಿಸಿ ಸದಸ್ಯರು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವಂತೆ ಕೇಳಿರುವುದರಿಂದ ಸಣ್ಣಪುಟ್ಟ ಬದಲಾವಣೆ ಆಗಬಹುದು ಎಂದು ಶಾ ಹೇಳಿದ್ದಾರೆ. ಇದನ್ನೂ ಓದಿ: ಅನುಚಿತ ವರ್ತನೆ ತೋರಿದ್ದೇ ಮುಳುವಾಯ್ತಾ? – ಹರ್ಮನ್‌ಪ್ರೀತ್ ಕೌರ್‌ಗೆ ನಿಷೇಧದ ಭೀತಿ

INDIA VS PAKISTAN

ಕೋಕಾ ಕೋಲಾ ಜೊತೆಗ ಒಪ್ಪಂದ:
ಇನ್ನೂ ಟಿಕೆಟ್‌ ದರ ನಿಗದಿಗಾಗಿ ಬಿಸಿಸಿಐ ರಾಜ್ಯ ಸಂಸ್ಥೆಗಳ ಜೊತೆಗೂ ಮಾತುಕತೆ ನಡೆಸುತ್ತಿದೆ. ಜೊತೆಗೆ ಕ್ರೀಡಾಂಗಣಗಳಲ್ಲಿ ಸ್ವಚ್ಛತೆ, ಶೌಚಾಲಯ ವ್ಯವಸ್ಥೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿದೆ. ಕ್ರೀಡಾಭಿಮಾನಿಗಳಿಗೆ ನೀರಿನ ಬಾಟಲಿಗಳನ್ನು ಒದಗಿಸಲು ಕೋಕಾ-ಕೋಲಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ:  AsiaCup 2023: ಅಂದುಕೊಂಡಂತೆ ನಡೆದ್ರೆ 15 ದಿನಗಳಲ್ಲಿ 3 ಬಾರಿ ಇಂಡೋ-ಪಾಕ್ ಕದನ ಫಿಕ್ಸ್

ಐಸಿಸಿ ಕಳೆದ ತಿಂಗಳು ಏಕದಿನ ವಿಶ್ವಕಪ್‌ ವೇಳಾಪಟ್ಟಿ ಬಿಡುಗಡೆ ಮಾಡಿತ್ತು. ಅದರಂತೆ ಆರಂಭಿಕ ಮತ್ತು ಫೈನಲ್‌ ಪಂದ್ಯಗಳು ನರೇಂದ್ರಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. 10 ದಿನಗಳಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು, ನವೆಂಬರ್‌ 19ರಂದು ಫೈನಲ್‌ ಪಂದ್ಯ ನಡೆಯಲಿದೆ. ಇದನ್ನೂ ಓದಿ: Emerging AsiaCup: ಭಾರತಕ್ಕೆ ಹೀನಾಯ ಸೋಲು, 128 ರನ್‌ ಜಯದೊಂದಿಗೆ ಚಾಂಪಿಯನ್‌ ಪಟ್ಟಕ್ಕೇರಿದ ಪಾಕಿಸ್ತಾನ

Web Stories

Share This Article