ನವದೆಹಲಿ: ವಿಶ್ವಕಪ್ ಫೈನಲ್ ಪಂದ್ಯವಾಡದ ಪ್ರತೀಕಾ ರಾವಲ್ (Pratika Rawal) ಅವರಿಗೆ ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ಮುಖ್ಯಸ್ಥ ಜಯ್‌ಶಾ (Jay Shah) ಅವರಿಂದ ಚಿನ್ನದ ಪದಕ ಲಭಿಸಿದೆ.
ಗಾಯಗೊಂಡು ಟೀಂ ಇಂಡಿಯಾದ (Team India) ಭಾಗವಾಗಿರದ ಕಾರಣ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಅವರಿಗೆ ವೇದಿಕೆ ಕಾರ್ಯಕ್ರಮದಲ್ಲಿ ಚಿನ್ನದ ಪದಕ ಸಿಕ್ಕಿರಲಿಲ್ಲ. ಆದರೆ ಐಸಿಸಿ ಈಗ ಪ್ರತೀಕಾ ರಾವಲ್ ಗಾಯಗೊಂಡಿದ್ದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಚಿನ್ನದ ಪದಕ ನೀಡಿದೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಪ್ರತೀಕಾ ರಾವಲ್ ಪಂದ್ಯ ಮುಗಿದ ನಂತರ ನಮ್ಮ ತಂಡದ ಮ್ಯಾನೇಜರ್ ಅವರಿಗೆ ಜಯ್ ಶಾ ಸರ್ ಮೆಸೇಜ್ ಮಾಡಿ ಪದಕ ನೀಡುವುದಾಗಿ ತಿಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾವು ಭೇಟಿಯಾಗುವ ಮೊದಲು ನನಗೆ ಪದಕ ಸಿಕ್ಕಿತ್ತು. ಅದನ್ನು ನಾನು ಧರಿಸಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ಆರ್‌ಸಿಬಿ ಖರೀದಿಗೆ ಆಸಕ್ತಿ ತೋರಿಸಿದ ಇಬ್ಬರು ಬಿಲಿಯನೇರ್ ಕನ್ನಡಿಗರು!
#PratikaRawal | Will Jay Shah’s intervention set a new precedent in how World Cup medals are awarded?
Could this be a turning point in the rulebook for athletes’ recognition?@ShivaniGupta_5 with more context on this @GrihaAtul | #WomenInBlue #WorldChampions pic.twitter.com/XP5fUskyMa
— News18 (@CNNnews18) November 7, 2025
2025ರ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪ್ರತೀಕಾ ರಾವಲ್ ಒಟ್ಟು 6 ಪಂದ್ಯಗಳನ್ನಾಡಿ 51.33 ಸರಾಸರಿಯಲ್ಲಿ 308 ರನ್ ಗಳಿಸಿದ್ದರು. ಬಾಂಗ್ಲಾದೇಶದ ವಿರುದ್ಧ ನವಿ ಮುಂಬೈನಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಮೊಣಕಾಲಿನ ಸಮಸ್ಯೆಯಿಂದಾಗಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು. ಅವರ ಬದಲಿಗೆ ಶಫಾಲಿ ವರ್ಮಾ ತಂಡಕ್ಕೆ ಆಗಮಿಸಿದ್ದರು. ಇದನ್ನೂ ಓದಿ: ಆರ್‌ಸಿಬಿಯಲ್ಲೇ ಉಳಿಯಲಿದ್ದಾರೆ ಸ್ಮೃತಿ, ಪೆರ್ರಿ – ಯಾವ ತಂಡದಲ್ಲಿ ಯಾರು? ಯಾರಿಗೆ ಎಷ್ಟು ಕೋಟಿ?
ಐಸಿಸಿ ನಿಯಮಗಳ ಪ್ರಕಾರ ತಂಡದ 15 ಆಟಗಾರ್ತಿಯರು ಮಾತ್ರ ವಿಶ್ವಕಪ್ ಪದಕವನ್ನು ಪಡೆಯುತ್ತಾರೆ. ಈ ಗೆಲುವಿನಲ್ಲಿ ಪ್ರತೀಕಾ ಪಾತ್ರವಿದ್ದರೂ ಫೈನಲ್‌ನಲ್ಲಿ ಭಾಗಿಯಾಗದ ಕಾರಣ ಪದಕ ಸಿಕ್ಕಿರಲಿಲ್ಲ.

