‘ಪಠಾಣ್’ (Pathaan) ಸಿನಿಮಾದ ಸೂಪರ್ ಸಕ್ಸಸ್ ನಂತರ ಮತ್ತೆ ತಾವು ಗೆಲ್ಲಲೇಬೇಕು ಅಂತಾ ಶಾರುಖ್ ಖಾನ್ ಪಣ ತೊಟ್ಟಂತೆಯಿದೆ. ‘ಜವಾನ್’ (Jawan) ಸಿನಿಮಾದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ‘ಜಿಂದಾ ಬಂದಾ’ (Zinda Bandha) ಅಂತಾ ಬಾದಶಾ ಜಬರ್‌ದಸ್ತ್ ಆಗಿ ಕುಣಿದಿದ್ದಾರೆ.
ದೀಪಿಕಾ ಪಡುಕೋಣೆ ಜೊತೆ ‘ಪಠಾಣ್’ ಸಿನಿಮಾ ಮೂಲಕ ಶಾರುಖ್ ಬಿಗ್ ಹಿಟ್ ಕೊಟ್ಟ ಮೇಲೆ ಜವಾನ್ ಆಗಿ ಮಿಂಚಲು ಶಾರುಖ್ ಖಾನ್ (Sharukh Khan) ರೆಡಿಯಾಗಿದ್ದಾರೆ. ನಯನತಾರಾ (Nayanatara) ಜೊತೆ ಬಾದಶಾ ಮತ್ತೆ ಬಿಗ್ ಹಿಟ್ ಕೊಡಲು ಸಜ್ಜಾಗಿದ್ದಾರೆ. ಜವಾನ್ ಟೀಸರ್‌ನಿಂದ ಶಾರುಖ್ ಈ ಹಿಂದೆ ಹೈಪ್ ಕ್ರಿಯೆಟ್ ಮಾಡಿದ್ರು. ಈಗ ಸಿನಿಮಾದ ಮೊದಲ ಸಾಂಗ್ ಫ್ಯಾನ್ಸ್‌ಗೆ ಸೂಪರ್ ಕಿಕ್ ಕೊಡುತ್ತಿದೆ. ಇದನ್ನೂ ಓದಿ:ಸಮಂತಾ, ರಶ್ಮಿಕಾ ಈಗ ಶ್ರೀಲೀಲಾ ಭವಿಷ್ಯ ನುಡಿದ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ
ಶಾರುಖ್ ಖಾನ್ ಅವರ ಸಿನಿಮಾಗಳಲ್ಲಿ ಹಾಡಿಗೆ ಬಹಳ ಮಹತ್ವ ನೀಡಲಾಗುತ್ತದೆ. ಅದು ಜವಾನ್ ಸಿನಿಮಾದಲ್ಲೂ ಮುಂದುವರಿದಿದೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರು ಸಂಗೀತ ನೀಡಿದ್ದಾರೆ. ಬಹಳ ಮಾಸ್ ಆಗಿ ‘ಜಿಂದಾ ಬಂದಾ’ ಹಾಡು ಮೂಡಿಬಂದಿದೆ. ತುಂಬ ಅದ್ದೂರಿಯಾಗಿ ಇದನ್ನು ಶೂಟ್ ಮಾಡಲಾಗಿದೆ. ಮೂಲಗಳ ಪ್ರಕಾರ ಬರೋಬ್ಬರಿ 15 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಶಾರುಖ್ ಖಾನ್ ಜೊತೆ ಸಾವಿರಾರು ಹುಡುಗಿಯರು ಡ್ಯಾನ್ಸ್ ಮಾಡಿರುವುದು ಈ ಹಾಡಿನ ವಿಶೇಷ. ರಿಲೀಸ್ ಆಗಿ ಕೆಲವೇ ನಿಮಿಷಗಳಲ್ಲಿ ಭರ್ಜರಿ ವಿವ್ಸ್ ಬಾಚಿಕೊಳ್ತಿದೆ.
1000 ಡ್ಯಾನ್ಸರ್‌ಗಳ ನಡುವೆ ಶಾರುಖ್ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಜವಾನ್ ಚಿತ್ರ ಬಹುಭಾಷೆಗಳಲ್ಲಿ ತೆರೆಗೆ ಬರಲಿದೆ. ಗೌರಿ ಖಾನ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬಂದಿದೆ. ಶಾರುಖ್ ಜೊತೆ ನಯನತಾರಾ, ವಿಜಯ್ ಸೇತುಪತಿ, ಸಾನ್ಯ ಮಲ್ಹೋತ್ರಾ, ಪ್ರಿಯಾಮಣಿ, ದೀಪಿಕಾ ಪಡುಕೋಣೆ ನಟಿಸಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]