ಶಾರುಖ್ ಆಯ್ತು ಸಲ್ಮಾನ್ ಖಾನ್ ಜೊತೆ ಅಟ್ಲಿ ಹೊಸ ಸಿನಿಮಾ

Public TV
1 Min Read
Atlee

ಸೌತ್ ಡೈರೆಕ್ಟರ್ ಅಟ್ಲಿ (Atlee) ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಾ ಸದ್ದು ಮಾಡುತ್ತಿದ್ದಾರೆ. ‘ಜವಾನ್’ (Jawan) ಸಿನಿಮಾದಲ್ಲಿ ಶಾರುಖ್‌ಗೆ ಆ್ಯಕ್ಷನ್ ಕಟ್ ಹೇಳಿದ ಬಳಿಕ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಹೊಸ ಚಿತ್ರಕ್ಕಾಗಿ ಸಲ್ಮಾನ್ ಖಾನ್ (Salman Khan) ಜೊತೆ ಕೈಜೋಡಿಸಿದ್ದಾರೆ.

Salman Khan 1

ಶಾರುಖ್ ಖಾನ್ ಜೊತೆ ‘ಜವಾನ್’ ಸಿನಿಮಾ ಮಾಡಿ ಗೆದ್ದು ಬೀಗಿದ್ದಾರೆ. ಈಗ ವರುಣ್ ಧವನ್ ಮತ್ತು ಕೀರ್ತಿ ಸುರೇಶ್ ನಟನೆಯ ಹೊಸ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ. ಈ ಸಿನಿಮಾ ರಿಲೀಸ್‌ಗೂ ಮುನ್ನವೇ ಸಲ್ಮಾನ್ ಖಾನ್‌ಗೆ ಹೊಸ ಕಥೆ ಬರೆದಿದ್ದಾರೆ. ಸಿನಿಮಾ ಕಥೆಯ ಬಗ್ಗೆ ನಟನಿಗೂ ಅಟ್ಲಿ ವರದಿ ಒಪ್ಪಿಸಿದ್ದಾರೆ.

director atlee

ಸಾಲು ಸಾಲು ಸಿನಿಮಾಗಳ ಸೋಲಿನ ರುಚಿ ಕಂಡಿರುವ ಸಲ್ಮಾನ್ ಖಾನ್ ಈಗ ಸೌತ್ ನಿರ್ದೇಶಕ ಎ.ಆರ್ ಮುರುಗದಾಸ್ ಜೊತೆ ಸಿನಿಮಾ ಮಾಡ್ತಿದ್ದಾರೆ. ಈ ಬೆನ್ನಲ್ಲೇ ಮತ್ತೊಬ್ಬ ಸೌತ್‌ ನಿರ್ದೇಶಕ ಅಟ್ಲಿ ಜೊತೆ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ 30ರಂದು ಈ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಸದ್ಯಕ್ಕಂತೂ ಈ ಬಗ್ಗೆ ನಟನ ಕಡೆಯಿಂದಾಗಲಿ, ಅಟ್ಲಿ ಕಡೆಯಿಂದಾಗಲಿ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಇನ್ನೂ ಅಟ್ಲಿ ಜೊತೆ ಸಿನಿಮಾ ಮಾಡಿದರೆ ಸಲ್ಮಾನ್ ಖಾನ್‌ಗೆ ಖಂಡಿತವಾಗಿ ಭರ್ಜರಿ ಗೆಲುವು ಸಿಗಲಿದೆ ಎಂಬ ಅಭಿಪ್ರಾಯ ಅಭಿಮಾನಿಗಳಿಗೆ ಇದೆ. ಸ್ವತಃ ಸಲ್ಲು ಕೂಡ ಇದೇ ಆಲೋಚನೆ ಮಾಡಿದಂತಿದೆ.

Share This Article