ಕಾಲಿವುಡ್ ನಟಿ ನಯನತಾರಾ (Nayanthara) ಸಿನಿಮಾ ಕೆಲಸಗಳ ನಡುವೆ ಸಂಸಾರ, ಮಕ್ಕಳು ಅಂತ ಬ್ಯುಸಿಯಾಗಿದ್ದಾರೆ. ಇದರ ನಡುವೆ ಪತಿ ವಿಘ್ನೇಶ್ ಶಿವನ್ (Vignesh Shivan) ಬರ್ತ್‌ಡೇ ನಟಿ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ. ಪತಿಯ ಹಣೆಯ ಮೇಲೆ ಮುತ್ತಿಟ್ಟು ನಟಿ ಶುಭಕೋರಿದ್ದಾರೆ. ಇದನ್ನೂ ಓದಿ:‘ಯುಐ’ ಸಿನಿಮಾ ಸೈಕಾಲಜಿಕಲ್ ಕಲ್ಕಿ ಎಂದು ಬಣ್ಣಿಸಿದ ಉಪೇಂದ್ರ
ಜನ್ಮದ ದಿನದ ಶುಭಾಶಯಗಳು. ಪದಗಳಲ್ಲಿ ವಿವರಿಸಲು ಸಾಧ್ಯವಾಗದಷ್ಟು ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದು ಪತಿಗೆ ನಯನತಾರಾ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ. ಇಬ್ಬರ ಕಲರ್‌ಫುಲ್ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಇನ್ನೂ ಹಲವು ವರ್ಷಗಳ ಪ್ರೀತಿಗೆ 2022ರಲ್ಲಿ ಮದುವೆಯ ಮುದ್ರೆ ಒತ್ತಿದ್ದರು. ಬಾಡಿಗೆ ತಾಯ್ತನ ಮೂಲಕ ಇಬ್ಬರೂ ಮಕ್ಕಳನ್ನು ನಟಿ ಬರಮಾಡಿಕೊಂಡರು. ಇದನ್ನೂ ಓದಿ:ರಜನಿಕಾಂತ್ ಚಿತ್ರದಲ್ಲಿ ವಿಲನ್ ರೋಲ್ ಮಾಡ್ತಿಲ್ಲ: ಪಾತ್ರದ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಉಪೇಂದ್ರ
ಅಂದಹಾಗೆ, ಶಾರುಖ್ ಖಾನ್ ಜೊತೆ ‘ಜವಾನ್’ (Jawan) ಸಿನಿಮಾದಲ್ಲಿ ನಯನತಾರಾ ನಟಿಸಿದ ಮೇಲೆ ಅವರ ಬೇಡಿಕೆ ಹೆಚ್ಚಾಗಿದೆ. ಬಹುಭಾಷೆಗಳಲ್ಲಿ ನಟಿಸುತ್ತಾ ನಟಿ ಆ್ಯಕ್ಟಿವ್ ಆಗಿದ್ದಾರೆ. ಸದ್ಯ ಅವರು ‘ಮೂಕುತಿ ಅಮ್ಮನ್ 2’ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.
ಇನ್ನೂ ನಯನತಾರಾಗೆ ಸುಂದರ್ ಸಿ. ನಿರ್ದೇಶನ ಮಾಡಲಿದ್ದಾರೆ. ಮತ್ತೊಂದು ದೇವಿ ಕುರಿತು ವಿಭಿನ್ನ ಕಥೆ ತರಲು ಅವರು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರ ಮೊದಲ ಭಾಗ ‘ಮೂಕುತಿ ಅಮ್ಮನ್’ ಸಿನಿಮಾದಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ ಪಾರ್ಟ್ 2ನಲ್ಲಿಯೂ ಕೂಡ ಅವರು ಸಾಥ್ ನೀಡಲಿದ್ದಾರೆ.