ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanathara) ವೈಯಕ್ತಿಕ ಬದುಕಿನ ಬಗ್ಗೆ ಒಂದಲ್ಲಾ ಒಂದು ವಿಚಾರ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಡಿವೋರ್ಸ್ ವದಂತಿಯ ನಡುವೆ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಾನು ಸೆಲೆಬ್ರಿಟಿಯೇ ಹೊರತು ಸಾರ್ವಜನಿಕರ ಆಸ್ತಿಯಲ್ಲ- ಟ್ರೋಲಿಗರಿಗೆ ತಾಪ್ಸಿ ಪನ್ನು ವಾರ್ನಿಂಗ್
ಕಳೆದ ಕೆಲ ತಿಂಗಳುಗಳಿಂದ ನಯನತಾರಾ ಡಿವೋರ್ಸ್ ವಿಚಾರ ಕುರಿತು ಗುಮಾನಿ ಹರಿದಾಡುತ್ತಿದೆ. ಈ ಬಾರಿ ವದಂತಿಗಳಿಗೆ ತಕ್ಕ ಉತ್ತರ ಕೊಡುವಂತಹ ಪೋಸ್ಟ್ ಅನ್ನೇ ನಟಿ ಹಂಚಿಕೊಂಡಿದ್ದಾರೆ. ‘ನನ್ನವನು’ ಎಂದು ಅಡಿಬರಹ ನೀಡಿ ಪತಿ ವಿಘ್ನೇಶ್ ಜೊತೆಗಿನ ಚೆಂದದ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ.
View this post on Instagram
ಹಸಿರಾದ ಗಾರ್ಡನ್‌ನಲ್ಲಿ ನಯನತಾರಾ ದಂಪತಿ ಹೆಜ್ಜೆ ಹಾಕುತ್ತಿರುವ ಫೋಟೋ ಈಗ ನೆಟ್ಟಿಗರ ಗಮನ ಸೆಳೆದಿದೆ. ಕ್ಯೂಟ್, ಬ್ಯೂಟಿಫುಲ್ ಎಂದೆಲ್ಲಾ ಬಗೆ ಬಗೆಯ ಕಾಮೆಂಟ್ ಹರಿದು ಬಂದಿದೆ.
ಅಂದಹಾಗೆ, ಶಾರುಖ್ ಖಾನ್ ಜೊತೆಗಿನ ‘ಜವಾನ್’ ಸಿನಿಮಾದ ಸಕ್ಸಸ್ ನಂತರ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.