ಸೆ.28ರಂದು ಮಗುವಿಗೆ ಜನ್ಮ ನೀಡಲಿದ್ದಾರೆ ದೀಪಿಕಾ ಪಡುಕೋಣೆ

Public TV
1 Min Read
deepika padukone 1

ನ್ನಡತಿ, ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣ್‌ವೀರ್ ಸಿಂಗ್ (Ranveer Singh) ದಂಪತಿ ಚೊಚ್ಚಲ ಮಗುವಿನ ಆಗಮನಕ್ಕಾಗಿ ಎದುರು ನೋಡುತ್ತಿದ್ದಾರೆ. ಪ್ರೆಗ್ನೆನ್ಸಿ ಫೋಟೋಶೂಟ್ ಶೇರ್ ಮಾಡಿ ಸುದ್ದಿಯಲ್ಲಿರುವ ದೀಪಿಕಾ ಪಡುಕೋಣೆ ಇದೀಗ ಡೆಲಿವೆರಿ ಬಗ್ಗೆ ಅಪ್‌ಡೇಟ್‌ವೊಂದು ಸಿಕ್ಕಿದೆ. ಸೆ.28ರಂದು ನಟಿ ಚೊಚ್ಚಲ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ.

deepika padukone 1

ನಟಿ ದೀಪಿಕಾ ಈಗ ತುಂಬು ಗರ್ಭಿಣಿಯಾಗಿದ್ದು, ಮನೆಗೆ ಹೊಸ ಅತಿಥಿ ಆಗಮನವಾಗುತ್ತಿರುವ ಖುಷಿಯಲ್ಲಿದ್ದಾರೆ. ಸೆಪ್ಟೆಂಬರ್ 28ರಂದು ದೀಪಿಕಾಗೆ ಡಾಕ್ಟರ್ ಡೆಲಿವೆರಿ ಡೇಟ್ ಕೊಟ್ಟಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಟಿಯ ಹೆರಿಗೆ ನಡೆಯಲಿದೆ. ಇದನ್ನೂ ಓದಿ:ತರುಣ್ ಸುಧೀರ್, ಸೋನಲ್ ಚರ್ಚ್‌ ವೆಡ್ಡಿಂಗ್‌ ಆಲ್ಬಂ

Deepika Padukone

ಇನ್ನೂ 2025ರ ಮಾರ್ಚ್‌ನ ನಂತರ ಸಿನಿಮಾ ಕೆಲಸದಲ್ಲಿ ಭಾಗಿಯಾಗುತ್ತಾರೆ ಎನ್ನಲಾಗಿದೆ. ಅಲ್ಲಿಯವರೆಗೂ ಮಗುವಿನ ಪಾಲನೆಯಲ್ಲಿ ನಟಿ ತೊಡಗಿಸಿಕೊಳ್ಳಲಿದ್ದಾರೆ.

ಇತ್ತೀಚೆಗೆ ದೀಪಿಕಾ ಪಡುಕೋಣೆ ನಟಿಸಿದ ಪಠಾಣ್, ಜವಾನ್, ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಸಕ್ಸಸ್ ಕಂಡಿದೆ. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ನಟಿ ತಾಯಿಯಾಗಿದ್ದಾರೆ. ಮಗುವಿನ ಆಗಮನದ ಬಳಿಕ ಮತ್ತೆ ದೀಪಿಕಾ ಸಿನಿಮಾಗೆ ಮರಳಿದ್ದಾರೆ.

Share This Article