ಬೆಂಗಳೂರು: ನೆಹರು ಅವರ ಗಾಂಧಿ ಕುಟುಂಬ ಇರಬಾರದು ಎಂದು ಬಿಜೆಪಿ (BJP) ಏನೇನೋ ಮಾಡಲು ಹೊರಟಿದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಡಿಸಿಎಂ ಡಿಕೆಶಿವಕುಮಾರ್ (DK Shivakumar) ಬಿಜೆಪಿ ವಿರುದ್ದ ಕಿಡಿಕಾರಿದರು.
ಕೆಪಿಸಿಸಿ (KPCC) ಕಚೇರಿಯಲ್ಲಿ ನಡೆದ ನೆಹರು ಜನ್ಮದಿನ (Jawaharlal Nehru Birthday) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿರುವ ತೀನ್ ಮೂರ್ತಿ ಭವನಕ್ಕೆ ನೆಹರು ಭವನ ಅಂತ ಇಟ್ಟಿದ್ದರು. ಆದರೆ ಬಿಜೆಪಿ ಅವರು ಅದನ್ನು ಪ್ರಧಾನಮಂತ್ರಿ ಭವನ ಅಂತ ಮಾಡಿದ್ದಾರೆ ಎಂದು ಸಿಟ್ಟು ಹೊರಹಾಕಿದರು.
ಪಠ್ಯ ಪುಸ್ತಕ ತಿರುಚಲು ಬಿಜೆಪಿ ಹೋಗಿತ್ತು. ಆದರೆ ಅದನ್ನು ನಾವು ಸರಿ ಮಾಡಿದ್ದೇವೆ. ಕರ್ನಾಟಕದ ಇತಿಹಾಸ (Karnataka History) ತಿರುಚುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾವು ಸರಿ ಮಾಡಿದ್ದೇವೆ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದರು.
ಗ್ಯಾರಂಟಿ ಯೋಜನೆಗಳು (Guarantee Scheme) ಸರಿಯಾಗಿ ಜನರಿಗೆ ಸಿಕ್ಕಿವೆಯಾ ಮಾಹಿತಿ ಪಡೆದುಕೊಳ್ಳಿ. ಮನೆ ಮನೆಗೆ ಹೋಗಿ ಸರ್ವೆ ಮಾಡಿ. ಫಲಾನುಭವಿಗಳಿಗೆ ಯೋಜನೆ ಸಿಗದೇ ಹೋದರೆ ಅದನ್ನು ಸರಿ ಮಾಡಿಸುವ ಕೆಲಸ ಮಾಡಿ ಎಂದು ಕಾರ್ಯಕರ್ತರು, ಮುಖಂಡರಿಗೆ ಡಿಕೆಶಿ ಕರೆ ನೀಡಿದರು. ಇದನ್ನೂ ಓದಿ: ಗಾಜಾದ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಹಮಾಸ್ ಉಗ್ರರ ಸುರಂಗ – ಇಸ್ರೇಲ್‌ನಿಂದ ವಿಡಿಯೋ ರಿಲೀಸ್
100 ಕೋಟಿ ಜನರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. ಕಳೆದ ದಸರಾದಲ್ಲಿ ಭಾರತ್ ಜೋಡೋ ಮಾಡಿದ್ದೆವು. ಈ ವರ್ಷ ಚಾಮುಂಡಿ ಸನ್ನಿಧಿಯಲ್ಲಿ 2 ಸಾವಿರ ಕೊಟ್ಟಿದ್ದೇವೆ. 1.4 ಕೋಟಿ ಜನರಿಗೆ ಗೃಹಲಕ್ಷ್ಮಿ ಸಿಕ್ಕಿದೆ. ಇಡೀ ದೇಶಕ್ಕೆ ಮಾದರಿಯಾದ ನಮ್ಮ ಗ್ಯಾರಂಟಿಯಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ಪ್ರಧಾನಿ ಹೇಳಿದರು. ಆದರೆ ಮಧ್ಯ ಪ್ರದೇಶದಲ್ಲಿ ನಾನು ಉಚಿತ ಕೊಡುತ್ತೇನೆ ಎಂದು ಬೋರ್ಡ್ ಹಾಕಿ ಕುಳಿತಿದ್ದಾರೆ ಎಂದು ಮೋದಿ (PM Narendra Modi) ವಿರುದ್ಧ ಡಿಕೆಶಿ ಕಿಡಿಕಾರಿದರು.