ಬೆಂಗಳೂರು: ಭಾರತ-ಚೀನಾ(China-India) ಇಂದಿನ ಸಂಘರ್ಷಕ್ಕೆ ನೆಹರೂ (Jawaharlal Nehru) ಅವರೇ ಕಾರಣ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಆರೋಪಿಸಿದ್ದಾರೆ.
Advertisement
ಚೀನಾದಿಂದ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಭಾರತವನ್ನು ಕಾಂಗ್ರೆಸ್ (Congress) ದುರ್ಬಲ ದೃಷ್ಟಿಯಿಂದ ನೋಡುವುದು ಬೇಡ. ನಮ್ಮ ಭಾರತೀಯ ಸೇನೆ ದುರ್ಬಲ ಅಲ್ಲ. ಪ್ರತಿ ಹಂತದಲ್ಲೂ ಚೀನಾ ಸೇನೆಗೆ (China Army) ಸಮಬಲ ತೋರಿಸಿದೆ. ಇಂತ ಸಂಘರ್ಷದ ಬಗ್ಗೆ ಕಾಂಗ್ರೆಸ್ ಹಗುರವಾಗಿ ಮಾತನಾಡಬಾರದು ಎಂದಿದ್ದಾರೆ. ಇದನ್ನೂ ಓದಿ: ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಚೀನಾ ರಾಯಭಾರ ಕಚೇರಿಯಿಂದ ದೇಣಿಗೆ: ಅಮಿತ್ ಶಾ
Advertisement
Advertisement
ಸಂಘರ್ಷಕ್ಕೆ ಮೂಲ ಕಾರಣ ನೆಹರೂ. ಹಿಂದಿ ಚೀನಿ ಭಾಯಿ-ಭಾಯಿ ಅಂತಾ ಪ್ರಮಾದ ಮಾಡಿದ್ದು ನೆಹರೂ. ಅವರ ಪ್ರಮಾದದಿಂದ ಪ್ರತಿ ವರ್ಷ ನಮ್ಮ ದೇಶ ಉತ್ತರ ಕೊಡಬೇಕಾಗ್ತಿದೆ. ಆದ್ರೆ ಭಾರತ ಯಾರಿಗೂ ತಲೆ ಬಾಗಲ್ಲ. ಈ ವಿಚಾರ ಕಾಂಗ್ರೆಸ್ ಸಣ್ಣದಾಗಿ ಮಾತನಾಡಬಾರದು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಭಾರತ-ಚೀನಾ ಗಡಿ ಸಂಘರ್ಷ – ಅರುಣಾಚಲ ಪ್ರದೇಶದಲ್ಲಿ ವಾಯು ಗಸ್ತು ಆರಂಭಿಸಿದ ಭಾರತೀಯ ಸೇನೆ
Advertisement
ಚೀನಾದವರು ಗಡಿ ವಾಸ್ತವ ರೇಖೆ (LAC) ದಾಟಿ ಬಂದಾಗೆಲ್ಲ ಸಂಘರ್ಷ ಆಗುತ್ತೆ. ಆದ್ರೆ ಕಾಂಗ್ರೆಸ್ ಇದರಲ್ಲಿ ಸಣ್ಣ ರಾಜಕಾರಣ ಮಾಡ್ತಿದೆ. ಕಾಶ್ಮೀರದಲ್ಲೂ ಕಾಂಗ್ರೆಸ್ ಸಣ್ಣತನ ಪ್ರದರ್ಶಿಸಿತು. ಈ ಬೆಳವಣಿಗೆ ಸರಿಯಲ್ಲ. ಚೀನಾವನ್ನು ಟಿಬೆಟ್ ನಲ್ಲೇ ತಡೆದು ನಿಲ್ಲಿಸಿದ್ದರೆ ಅವರು ಇಲ್ಲಿಯವರೆಗೆ ಬರ್ತಿರ್ಲಿಲ್ಲ. ಇದು ಕಾಂಗ್ರೆಸ್ ಕಾಲದಲ್ಲೇ ಮಾಡಬೇಕಾಗಿತ್ತು, ಅವರು ಮಾಡಲಿಲ್ಲ. ಈ ಪ್ರಮಾದದಿಂದ ಸಮಸ್ಯೆ ಈಗ ಆಗ್ತಿದೆ ಎಂದು ಹೇಳಿದ್ದಾರೆ.