ChikkamagaluruCoronaLatestMain Post
ಜವಾಹರ್ ನವೋದಯ ಶಾಲೆ 59 ವಿದ್ಯಾರ್ಥಿಗಳು ಸೇರಿ 69 ಮಂದಿಗೆ ಕೊರೊನಾ

ಚಿಕ್ಕಮಗಳೂರು: ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿರುವ ಜವಾಹರ್ ನವೋದಯ ವಿದ್ಯಾಲಯದ 59 ವಿದ್ಯಾರ್ಥಿಗಳು ಹಾಗೂ 10 ಸಿಬ್ಬಂದಿ ಸೇರಿ ಒಟ್ಟು 69 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಶಾಲೆಯ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ ಒಟ್ಟು 443 ಮಂದಿಯ ಸ್ವ್ಯಾಬ್ ಪಡೆದು ಪರೀಕ್ಷೆ ನಡೆಸಲಾಯಿತು. ವರದಿಯಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೇರಿ 69 ಮಂದಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ಓಮಿಕ್ರಾನ್ ಮೊದಲ ಪ್ರಕರಣ ಪತ್ತೆ- ಭಾರತದಲ್ಲಿ 5ಕ್ಕೇರಿದ ಸಂಖ್ಯೆ
ಸೋಂಕು ಪತ್ತೆಯಾದ ಎಲ್ಲರಲ್ಲಿಯೂ ರೋಗದ ಲಕ್ಷಣಗಳಿಲ್ಲ. ಕೊರೊನಾ ಸೋಂಕಿತರನ್ನು ಜವಾಹರ್ ನವೋದಯ ವಿದ್ಯಾಲಯದಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ವಸತಿ ಶಾಲೆಯನ್ನು ಸೀಲ್ ಡೌನ್ ಮಾಡಲಾಗಿದೆ. ಸ್ಥಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಂತು ಚೂಯಿಂಗಮ್!