ಮಡಿಕೇರಿ: ನಗರದ ಹೊರ ವಲಯದಲ್ಲಿರುವ ಗಾಳಿಬೀಡು ಗ್ರಾಮದ ಜವಾಹರ್ ನವೋದಯ ವಿದ್ಯಾಲಯದಲ್ಲಿ ಸರಿಯಾದ ಮೂಲತಃ ಸೌಕರ್ಯಗಳು ಇಲ್ಲದೇ ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ಅಳಲನ್ನು ವ್ಯಕ್ತಪಡಿಸಿದ್ದಾರೆ. ಶಾಲೆಯ ಪರಿಸ್ಥಿತಿ ಕಂಡ ಪೋಷಕರು ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ತಮ್ಮ ಮಕ್ಕಳು ಒಳ್ಳೆಯ ವಿದ್ಯಾಲಯದದಲ್ಲಿ ಕಲಿಯುತ್ತಾರೆ. ನಮ್ಮಗೂ ಹೆಮ್ಮೆ ಎಂಬ ಉದ್ದೇಶದಿಂದ ನವೋದಯ ವಿದ್ಯಾ ಸಂಸ್ಥೆಗೆ ಸೇರಿಸಲು ಪೋಷಕರು ಇಚ್ಚಿಸಿದ್ದರು. ಆದರೆ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ಬೇಕಾದ ಸರಿಯಾದ ನೀರಿನ ವ್ಯವಸ್ಥೆ, ಸರಿಯಾದ ಸ್ವಚ್ಚತೆ, ಉತ್ತಮ ಶೌಚಾಲಯ ಕೂಡ ವ್ಯವಸ್ಥೆಯೂ ಇಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ.
Advertisement
Advertisement
ಮಡಿಕೇರಿ ವರ್ಷದ 9 ತಿಂಗಳು ಶೀತದ ವಾತಾವರಣ ಇರುವುದರಿಂದ ಶಾಲೆಯ ಕೊಠಡಿಗಳು ಈಗಾಗಲೇ ಪಾಚಿ ಹಿಡಿದಿದೆ. ಮಕ್ಕಳು ಶೀತದಲ್ಲಿ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಳೆದ ಮೂರು ದಿನಗಳ ಹಿಂದೆ ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಈ ಶಾಲೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮಕ್ಕಳ ಸಮಸ್ಯೆಯನ್ನು ಆಲಿಸಿ ಬಹುಬೇಗ ಅಗತ್ಯ ಮೂಲಭೂತ ಸೌಕರ್ಯಗಳನ್ನು ಮಾಡಿಕೊಡಲಾಗುತ್ತದೆ ಎಂಬ ಭವರಸೆಯನ್ನು ನೀಡಿದ್ದಾರೆ.