ಮುಂಬೈ: ಆರ್‍ಎಸ್‍ಎಸ್‍ನ್ನು ತಾಲಿಬಾನ್‍ಗೆ ಹೋಲಿಸಿ ಹೇಳಿಕೆ ನೀಡಿದ್ದ ಬಾಲಿವುಡ್ ಗೀತ ರಚನೆಕಾರ ಜಾವೇದ್ ಅಖ್ತರ್‌ಗೆ ಮಹಾರಾಷ್ಟ್ರದ ಥಾಣೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
Advertisement
ಜಾವೇದ್ ಅಖ್ತರ್ ಹೇಳಿಕೆ ಖಂಡಿಸಿ ಆರ್‍ಎಸ್‍ಎಸ್ ಕಾರ್ಯಕರ್ತರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಕುರಿತು ಕೋರ್ಟ್ ಇದೀಗ ನೋಟಿಸ್ ಜಾರಿ ಮಾಡಿದೆ. ನವೆಂಬರ್ 12ರಂದು ಕೋರ್ಟ್‍ಗೆ ಹಾಜರಾಗಿ ಕಾರಣ ತಿಳಿಸುವಂತೆ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ಹಾಗೂ ಜಂಟಿ ಸಿವಿಲ್ ನ್ಯಾಯಾಧೀಶರ(ಹಿರಿಯ ವಿಭಾಗ) ನ್ಯಾಯಾಲಯವು ಜಾವೇದ್ ಅಖ್ತರ್ ಗೆ ಸೂಚಿಸಿದೆ. ಇದನ್ನೂ ಓದಿ: ಹಾನಗಲ್, ಸಿಂಧಗಿ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ನಿಗದಿ
Advertisement
ಆರ್‍ಎಸ್‍ಎಸ್ ಕಾರ್ಯಕರ್ತ ವಿವೇಕ್ ಚಂಪಾನೇಕರ್ ಅವರು 1 ರೂಪಾಯಿ ಪರಿಹಾರ ನೀಡುವಂತೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
Advertisement
Advertisement
ಬಾಲಿವುಡ್ ಗೀತ ರಚನೆಕಾರ ಜಾವೇದ್ ಅಖ್ತರ್ ಅವರು ಸುದ್ದಿ ವಾಹಿನಿಯೊಂದಕ್ಕೆ ಮಾತನಾಡುವಾಗ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರಪಂಚದಾದ್ಯಂತ ಬಲಪಂಥೀಯರು ಅಸಾಧಾರಣ ಸಾಮ್ಯತೆ ಹೊಂದಿದ್ದಾರೆ. ತಾಲಿಬಾನಿಗಳಿಗೆ ಇಸ್ಲಾಮಿಕ್ ದೇಶ ಬೇಕು, ಇವರಿಗೆ ಹಿಂದೂ ರಾಷ್ಟ್ರ ಬೇಕು ಎಂದು ಆರ್‍ಎಸ್‍ಎಸ್ ಹೆಸರು ಹೇಳದೆಯೇ ಮಾತನಾಡಿದ್ದರು. ಇದನ್ನೂ ಓದಿ: ಕೋವಿಡ್ 19 ಬೂಸ್ಟರ್ ಡೋಸ್ ಪಡೆದ ಜೋ ಬೈಡನ್
ದೂರುದಾರರ ಪರವಾಗಿ ವಾದ ಮಂಡಿಸಿದ ವಕೀಲ ಆದಿತ್ಯ ಮಿಶ್ರಾ, ಅಖ್ತರ್ ಅವರು ಸುದ್ದಿವಾನಿಯೊಂದಿಗೆ ಮಾತನಾಡುವಾಗ ಆರ್‍ಎಸ್‍ಎಸ್ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಹೇಳಿದ್ದಾರೆ.