ನವದೆಹಲಿ: ತಮ್ಮ ಉರಿ ಚೆಂಡಿನ ದಾಳಿಯ ಮೂಲಕ ಬ್ಯಾಟ್ಸ್‍ಮ್ಯಾನ್‍ಗಳನ್ನು ಕಕ್ಕಾಬಿಕ್ಕಿಯಾಗಿಸುವ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಈಗ ಟಿ20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.
Advertisement
ತಮ್ಮ ವಿಭಿನ್ನ ಶೈಲಿಯ ಬೌಲಿಂಗ್ ಆಕ್ಷನ್ ಮೂಲಕ ಯಾರ್ಕರ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಬುಮ್ರಾ ಟಿ20 ಕ್ರಿಕೆಟ್‍ನಲ್ಲಿ ಭಾರತದ ಯಶಸ್ವಿ ಬೌಲರ್. ಇದೀಗ ಬುಮ್ರಾ ಟಿ20 ಕ್ರಿಕೆಟ್‍ನಲ್ಲಿ ತಮ್ಮ ದಾಖಲೆಯ ಓಟವನ್ನು ಮುಂದುವರಿಸಿದ್ದಾರೆ. ಈ ಮೊದಲು ಭಾರತದ ಸ್ಪಿನ್ನರ್ ಯಜುವೇಂದ್ರ ಚಹಲ್ ಟಿ20 ಕ್ರಿಕೆಟ್ 63 ವಿಕೆಟ್‍ಗಳೊಂದಿಗೆ ಅತೀ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಎಂಬ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಇದೀಗ ಬುಮ್ರಾ ಮುರಿದು ತಮ್ಮ ಹೆಸರಿನಲ್ಲಿ ಹೊಸ ದಾಖಲೆಯನ್ನು ಬರೆದುಕೊಂಡಿದ್ದಾರೆ. ಬುಮ್ರಾ ಟಿ20 ವಿಶ್ವಕಪ್‍ನಲ್ಲಿ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ 2 ವಿಕೆಟ್ ಪಡೆಯುದರೊಂದಿಗೆ ಟಿ20 ಕ್ರಿಕೆಟ್‍ನಲ್ಲಿ ಒಟ್ಟು 64 ವಿಕೆಟ್ ಪಡೆದರು. ಈ ಮೂಲಕ ಭಾರತದ ಪರ ಟಿ20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ವಿಕೆಟ್ ಕಿತ್ತ ದಾಖಲೆಯ ಒಡೆಯನಾಗಿದ್ದಾರೆ. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸಿದ ಕನ್ನಡಿಗ ರಾಹುಲ್
Advertisement
Advertisement
ಟಿ20 ಕ್ರಿಕೆಟ್‍ನಲ್ಲಿ ಬೂಮ್ರ 54 ಪಂದ್ಯಗಳಿಂದ 64 ವಿಕೆಟ್ ಕಿತ್ತು ಮೊದಲ ಸ್ಥಾನದಲ್ಲಿದ್ದರೆ. ಚಹಲ್ 49 ಪಂದ್ಯಗಳಿಂದ 63 ವಿಕೆಟ್ ಪಡೆದು 2ನೇ ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿ ಆರ್. ಆಶ್ವಿನ್ 48 ಪಂದ್ಯಗಳಿಂದ 55 ವಿಕೆಟ್ ಸಾಧನೆ ಮಾಡಿದರೆ, ಭುವನೇಶ್ವರ್ ಕುಮಾರ್ 52 ಪಂದ್ಯಗಳಿಂದ 50 ವಿಕೆಟ್ ಕಿತ್ತು ಈ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ. 5ನೇ ಸ್ಥಾನದಲ್ಲಿ ರವೀಂದ್ರ ಜಡೇಜಾ ಇದ್ದು, ಈವರೆಗೆ 54 ಪಂದ್ಯಗಳಿಂದ 43 ವಿಕೆಟ್ ಬೇಟೆಯಾಡಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಸ್ಕಾಟ್ಲೆಂಡ್ ಮೇಲೆ ಸವಾರಿ ಮಾಡಿದ ಭಾರತ – 8 ವಿಕೆಟ್‍ಗಳ ಜಯದೊಂದಿಗೆ ಸೆಮೀಸ್ ಆಸೆ ಜೀವಂತ
Advertisement