ಡಬ್ಲಿನ್: ಪ್ರಪಂಚದಾಂದ್ಯಂತ ಜನ ಇಂದು ಚಂದ್ರಯಾನ-3 (Chandrayaan-3) ಮಿಷನ್ ಸಕ್ಸಸ್ ಅನ್ನು ಕಣ್ತುಂಬಿಕೊಂಡರು. ಅಂತೆಯೇ ಟೀಂ ಇಂಡಿಯಾ (Team India) ಆಟಗಾರರು ಕೂಡ ಚಂದ್ರಯಾನದ ಯಶಸ್ಸನ್ನು ಸಂಭ್ರಮಿಸಿದರು.
???? Witnessing History from Dublin! ????
The moment India's Vikram Lander touched down successfully on the Moon's South Pole ????#Chandrayaan3 | @isro | #TeamIndia https://t.co/uIA29Yls51 pic.twitter.com/OxgR1uK5uN
— BCCI (@BCCI) August 23, 2023
Advertisement
ಬೂಮ್ರಾ (Jasprit Bumrah) ಪಡೆ ಚಂದ್ರಯಾನ-3 ಸಕ್ಸಸ್ ಲೈವ್ ನೋಡುತ್ತಾ ಸಂಭ್ರಮಿಸಿದ ವೀಡಿಯೋವನ್ನು ಬಿಸಿಸಿಐ (BCCI) ಟ್ವಿಟ್ವರ್ ಅಕೌಂಟ್‍ನಿಂದ ಶೇರ್ ಮಾಡಲಾಗಿದೆ. ವಿಕ್ರಮ್ ಲ್ಯಾಂಡಿಂಗ್ ಆಗುತ್ತಿದ್ದಂತೆಯೇ ಟೀಂ ಇಂಡಿಯಾ ಆಗಾರರು ಚಪ್ಪಾಳೆ ತಟ್ಟುತ್ತಾ ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸಿರುವುದನ್ನು ಕಾಣಬಹುದಾಗಿದೆ.
Advertisement
Advertisement
ಭಾರತ ಮತ್ತು ಐರ್ಲೆಂಡ್ ನಡುವಿನ 3ನೇ ಟಿ-20 ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ತುಂತುರು ಮಳೆಯ ಪರಿಣಾಮ ಟಾಸ್ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಬೂಮ್ರಾ ಪಡೆ ಚಂದ್ರಯಾನ-3 ಯೋಜನೆಯ ಯಶಸ್ಸನ್ನು ಕಣ್ತುಂಬಿಕೊಂಡಿತು. ಇದನ್ನೂ ಓದಿ: ವಿಕ್ರಮ್ ಲ್ಯಾಂಡ್ ಆದ ಬಳಿಕ ಮೊದಲ ಚಿತ್ರ ರಿಲೀಸ್
Advertisement
ಇಸ್ರೋ ಸಂಜೆ 6:04ರ ಹೊತ್ತಿಗೆ ವಿಕ್ರಮ್ ಲ್ಯಾಂಡರ್ (Vikram Lander) ಅನ್ನು ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿತು. ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ (Soft Landing) ಮಾಡುವುದು ಸಾಧಾರಣ ಸಾಧನೆಯಲ್ಲ. ಚಂದ್ರನ ಮೇಲೆ ತಮ್ಮ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇರಿಸುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಏಕೈಕ ನಾಲ್ಕು ದೇಶಗಳ ಸಾಲಿಗೆ ಭಾರತವೂ ಸೇರಿದೆ.
Web Stories