ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಒಂದೇ ಒಂದು ವಿಕೆಟ್ ಪಡೆಯದೆ ನಿರಾಸೆ ಮೂಡಿಸಿದ್ದ ಜಸ್ ಪ್ರೀತ್ ಬುಮ್ರಾ ಕಿವೀಸ್ ವಿರುದ್ಧದ ಟೆಸ್ಟ್ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಮಾಡಿ ಮಿಂಚಿದ್ದಾರೆ.
30ನೇ ಓವರಿನಲ್ಲಿ ನ್ಯೂಜಿಲೆಂಡ್ ಅಧ್ಯಕ್ಷರ ಇಲೆವೆನ್ ತಂಡದ ಆಟಗಾರ ಫಿನ್ ಅಲೆನ್ ಬುಮ್ರಾ ಎಸೆದ ಬಾಲ್ ವಿಕೆಟ್ ನಿಂದ ದೂರದಲ್ಲಿ ಹೋಗುತ್ತೆ ಎಂದು ತಿಳಿದು ಬ್ಯಾಟ್ ಮೇಲೆ ಎತ್ತಿದರು. ಆದರೆ ಬಾಲ್ ವೇಗವಾಗಿ ಬಂದು ವಿಕೆಟ್ ಗೆ ಬಿತ್ತು. ಇದನ್ನು ನೋಡಿದ ಅಲೆನ್ ಶಾಕ್ ಆದರು. ಅಲೆನ್ 20 ರನ್ (53 ಎಸೆತ, 3 ಬೌಂಡರಿ) ಗಳಿಸಿ ಔಟಾದರು.
Advertisement
Advertisement
ಬುಮ್ರಾ ಬನಾನಾ ಸ್ವಿಂಗ್ ಬಾಲ್ ಎಸೆದು ವಿಕೆಟ್ ಪಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ರಿಕೆಟ್ ಅಭಿಮಾನಿಗಳು ಬುಮ್ರಾ ಅವರ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಹನುಮನ್ ವಿಹಾರಿ 101 ರನ್ ಹಾಗೂ ಚೇತೇಶ್ವರ್ ಪೂಜಾರ್ 93 ರನ್ ಸಹಾಯದಿಂದ ಮೊದಲ ಇನ್ನಿಂಗ್ಸ್ ನ 78.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 263 ರನ್ ಪೇರಿಸಿತ್ತು. ಮೊಹಮ್ಮದ್ ಶಮಿ 3 ವಿಕೆಟ್ ಕಿತ್ತರೆ, ಬುಮ್ರಾ, ಉಮೇಶ್ ಯಾದವ್ ಹಾಗೂ ನವದೀಪ್ ಸೈನಿ ತಲಾ 2 ವಿಕೆಟ್ ಉರುಳಿಸಿದರು. ಉಳಿದಂತೆ ಆರ್.ಅಶ್ವಿನ್ ಒಂದು ವಿಕೆಟ್ ಪಡೆದರು. ಪರಿಣಾಮ ನ್ಯೂಜಿಲೆಂಡ್ 74.2 ಓವರ್ ಗಳಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 235 ರನ್ ಪೇರಿಸಿ 28 ರನ್ ಗಳ ಹಿನ್ನಡೆ ಅನುಭವಿಸಿತು.
Advertisement
ಏನಿದು ಬನಾನಾ ಸ್ವಿಂಗ್?
ಫಾಸ್ಟ್ ಸ್ವಿಂಗ್ ಯಾರ್ಕರ್ ಅನ್ನು ಬನಾನಾ ಸ್ವಿಂಗ್ ಯಾರ್ಕರ್ ಎಂಬುದಾಗಿ ಕ್ರಿಕೆಟಿನಲ್ಲಿ ಕರೆಯಲಾಗುತ್ತದೆ. ಬಾಳೆಹಣ್ಣು ರೀತಿ ಇಂಗ್ಲಿಷಿನ ‘ಸಿ’ ಅಕ್ಷರದ ವಿನ್ಯಾಸದಂತೆ ಬಾಲಿನ ಪಾಥ್ ಇರುವ ಕಾರಣ ಇದಕ್ಕೆ ಬನಾನಾ ಸ್ವಿಂಗ್ ಹೆಸರು ಬಂದಿದೆ. ಈ ಹಿಂದೆ ಪಾಕಿಸ್ತಾನದ ವಾಕರ್ ಯೂನಿಸ್ ಈ ರೀತಿಯ ಸ್ವಿಂಗ್ ಎಸೆದು ಆಟಗಾರರನ್ನು ಔಟ್ ಮಾಡುತ್ತಿದ್ದರು.
Jasprit Bumrah looking in his element.. absolute ripper to dismiss Allen. #NZX1vIND pic.twitter.com/mcrLF56qUI
— Subhayan Chakraborty (@CricSubhayan) February 15, 2020