ನವದೆಹಲಿ: ಭಾರತದ ಯುವ ವೇಗಿ ಜಸ್ಪ್ರಿತ್ ಬುಮ್ರಾ ಮತ್ತು ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧಾನಾ ಅವರು ವರ್ಷದ ವಿಸ್ಡೆನ್ ಇಂಡಿಯಾ ಅಲ್ಮನಾಕ್ ಕ್ರಿಕೆಟರ್ಸ್ ಆಗಿ ಆಯ್ಕೆಯಾಗಿದ್ದಾರೆ.
2019 ಮತ್ತು 2020 ನೇ ಸಾಲಿನ ವಿಸ್ಡೆನ್ ಇಂಡಿಯಾ ಅಲ್ಮನಾಕ್‍ನ ವರ್ಷದ ಕ್ರಿಕೆಟರ್ಸ್ ಆಯ್ಕೆಯಾಗಿದ್ದು, ಇದರಲ್ಲಿ ಭಾರತದಿಂದ ಇಬ್ಬರು ಸೇರಿ ಏಷ್ಯಾದಿಂದ ಒಟ್ಟು ಐದು ಜನರಿಗೆ ಈ ಪ್ರಶಸ್ತಿ ದೊರಕಿದೆ. ಬುಮ್ರಾ ಮತ್ತು ಮಂಧಾನಾ ಅವರನ್ನು ಬಿಟ್ಟರೆ ಪಾಕಿಸ್ತಾನದ ಫಖರ್ ಜಮಾನ್, ಶ್ರೀಲಂಕಾದ ದಿಮುತ್ ಕರುಣಾರತ್ನೆ ಮತ್ತು ಅಫ್ಘಾನಿಸ್ತಾನದ ರಶೀದ್ ಖಾನ್ ಅವರಿಗೆ ಏಷ್ಯಾದಿಂದ ಈ ಪ್ರಶಸ್ತಿಗೆ ಲಭಿಸಿದೆ.
Advertisement
Advertisement
ಈ ಪ್ರಶಸ್ತಿ ಪಡೆದ ಸ್ಮೃತಿ ಮಂಧಾನಾ ಅವರು ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಮತ್ತು ದೀಪ್ತಿ ಶರ್ಮಾ ಅವರನ್ನು ಬಿಟ್ಟರೆ ವಿಸ್ಡೆನ್ ಇಂಡಿಯಾ ಅಲ್ಮನಾಕ್ ಕ್ರಿಕೆಟರ್ಸ್ ಆಗಿ ಆಯ್ಕೆಯಾದ ಮೂರನೇ ಭಾರತದ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಭಾರತೀಯ ಕ್ರಿಕೆಟ್ ದಿಗ್ಗಜರಾದ ಗುಂಡಪ್ಪ ವಿಶ್ವನಾಥ್ ಮತ್ತು ಲಾಲಾ ಅಮರನಾಥ್ ಅವರನ್ನು ವಿಸ್ಡೆನ್ ಇಂಡಿಯಾ ಹಾಲ್ ಆಫ್ ಫೇಮ್ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ.
Advertisement
Advertisement
ಬರಹಗಾರ ಪ್ರಶಾಂತ್ ಕಿಡಾಂಬಿ ಬರೆದ ಮೊದಲ ಆಲ್ ಇಂಡಿಯಾ ಟೀಮ್ ಅನ್ ಟೋಲ್ಡ್ ಹಿಸ್ಟರಿ ಎಂಬ ಪುಸ್ತಕ ವರ್ಷದ ವಿಸ್ಡೆನ್ ಇಂಡಿಯಾ ಪುಸ್ತಕವಾಗಿ ಆಯ್ಕೆಯಾಗಿದೆ. ಈ ಪುಸ್ತಕವನ್ನು ಅಲ್ಮಾನಾಕ್‍ನ ವಿಮರ್ಶಕರು ಭಾರತದ ಕ್ರಿಕೆಟ್ ಪ್ರವಾಸವನ್ನು ತುಂಬಾ ಚೆನ್ನಾಗಿ ವಿವರಿಸಲಾಗಿದೆ ಎಂದು ಹೇಳಿದ್ದಾರೆ.