– ಹೊಸ ಇತಿಹಾಸ ನಿರ್ಮಿಸಿದ ಸ್ಟಾರ್ ವೇಗಿ
ವಿಶಾಖಪಟ್ಟಣಂ: ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ 5 ಪಂದ್ಯಗಳ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ 6 ವಿಕೆಟ್ ಪಡೆದಿದ್ದ ಬುಮ್ರಾ, 2ನೇ ಪಂದ್ಯದಲ್ಲಿ 9 ವಿಕೆಟ್‌ಗಳನ್ನ ಉರುಳಿಸಿ ಐಸಿಸಿ ರ‍್ಯಾಂಕಿಂಗ್‌ನಲ್ಲಿ (ICC Test Rankings) ನಂ.1 ಸ್ಥಾನಕ್ಕೇರಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ವೇಗಿ ಎನಿಸಿಕೊಂಡಿದ್ದಾರೆ.
Advertisement
Advertisement
2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 15.5 ಓವರ್‌ಗಳಲ್ಲಿ 45 ರನ್ ಬಿಟ್ಟುಕೊಟ್ಟು 6 ವಿಕೆಟ್ ಪಡೆದಿದ್ದ ಬುಮ್ರಾ, 2ನೇ ಇನ್ನಿಂಗ್ಸ್‌ನಲ್ಲಿ 17.2 ಓವರ್‌ಗಳಲ್ಲಿ 3 ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ 881 ಶ್ರೇಯಾಂಕಗಳೊಂದಿಗೆ ನಂ.1 ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ರವಿಚಂದ್ರನ್ ಅಶ್ವಿನ್ (Ashwin), ರವೀಂದ್ರ ಜಡೇಜಾ ಹಾಗೂ ಬಿಷೆನ್ ಸಿಂಗ್ ಬೇಡಿ ಈ ಹಿಂದೆ ಅಗ್ರಸ್ಥಾನಕ್ಕೇರಿದ್ದರು. ಇದನ್ನೂ ಓದಿ: ಡೇವಿಸ್ ಕಪ್‍ನಲ್ಲಿ ಕೊಡಗಿನ ಯುವಕನ ಸಾಧನೆ – ವರ್ಲ್ಡ್ ಕಪ್ 1ರಲ್ಲಿ ಸ್ಥಾನ ಗಿಟ್ಟಿಸಿಕೊಂಡ ಭಾರತ
Advertisement
ಬುಮ್ರಾ ಕಳೆದ 34 ಟೆಸ್ಟ್ ಪಂದ್ಯಗಳಿಂದ 15 ವಿಕೆಟ್ ಪಡೆದಿದ್ದರೂ 3ನೇ ಸ್ಥಾನಕ್ಕಿಂತ ಹೆಚ್ಚು ಮೇಲಕ್ಕೇರಲು ಸಾಧ್ಯವಾಗಿರಲಿಲ್ಲ. ಆದರೀಗ ಇಂಗ್ಲೆಂಡ್ (England) ವಿರುದ್ಧದ ಪ್ರದರ್ಶನದಿಂದಾಗಿ ಆರ್. ಅಶ್ವಿನ್ ಅವರನ್ನು ಹಿಂದಿಕ್ಕಿ ನಂ.1 ಸ್ಥಾನ ತನ್ನದಾಗಿಸಿಕೊಂಡಿದ್ದಾರೆ. ಅಲ್ಲದೇ ಏಕದಿನ ಕ್ರಿಕೆಟ್ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ 665 ಶ್ರೇಯಾಂಕದೊಂದಿಗೆ 6ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಖ್ಯಾತ ಹಾಕಿ ಆಟಗಾರನಿಂದ ಅಪ್ರಾಪ್ತೆಯ ಮೇಲೆ ರೇಪ್!
Advertisement
ಟಾಪ್-10ನಲ್ಲಿ ಮೂವರು ಭಾರತೀಯರು:
ಇತ್ತೀಚೆಗಷ್ಟೇ ಬುಮ್ರಾ ಟೆಸ್ಟ್‌ನಲ್ಲಿ ಅತಿ ವೇಗವಾಗಿ 150 ವಿಕೆಟ್ ಪಡೆದ ಏಷ್ಯಾದ 2ನೇ ಆಟಗಾರ ಎಂಬ ಮಹತ್ವದ ಮೈಲುಗಲ್ಲು ಸಾಧಿಸಿದ್ದರು. ಈ ಬೆನ್ನಲ್ಲೇ ಐಸಿಸಿ ರ‍್ಯಾಂಕಿಂಗ್‌ನಲ್ಲೂ ನಂ.1 ಪಟ್ಟಕ್ಕೇರಿದ್ದಾರೆ. ಇದರೊಂದಿಗೆ ಪುರುಷರ ಟೆಸ್ಟ್ ಕ್ರಿಕೆಟ್ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಮೂವರು ಭಾರತೀಯರು ಟಾಪ್-10 ನಲ್ಲಿ ಸ್ಥಾನ ಪಡೆದುಕೊಂಡಂತಾಗಿದೆ. 881 ಶ್ರೇಯಾಂಕದೊಂದಿಗೆ ವೇಗಿ ಜಸ್ಪ್ರೀತ್ ಬುಮ್ರಾ ನಂ.1 ಸ್ಥಾನದಲ್ಲಿದ್ದರೆ, ನಂ.1 ಸ್ಥಾನದಲ್ಲಿದ್ದ ಅಶ್ವಿನ್ 841 ಶ್ರೇಯಾಂಕದೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದರೊಂದಿಗೆ ರವೀಂದ್ರ ಜಡೇಜಾ 746 ಶ್ರೇಯಾಂಕದೊಂದಿಗೆ 9ನೇ ಸ್ಥಾನದಲ್ಲಿದ್ದಾರೆ.
WTC ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿತ:
ಇಂಗ್ಲೆಂಡ್ (England) ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ (Team India) 106 ರನ್‌ಗಳಿಂದ ಭರ್ಜರಿ ಗೆದ್ದುಕೊಂಡಿದ್ದು, ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship) ಅಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿಯಿತು. ಇದನ್ನೂ ಓದಿ: ಒಂದೇ ಸಮಯದಲ್ಲಿ ಅಪ್ಲೋಡ್, ಟ್ಯಾಗ್ – ಸಿಂಧು, ನೀರಜ್ ಪೋಸ್ಟ್ ರಹಸ್ಯ ಬಯಲು
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ 396/10
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 253/10
ಭಾರತ ಎರಡನೇ ಇನ್ನಿಂಗ್ಸ್ 255/10
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 292/10