ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ದೆಹಲಿ ವಿರುದ್ಧ ಪಂದ್ಯದಲ್ಲಿ ಬೌಲಿಂಗ್ ಮಾತ್ರವಲ್ಲದೇ ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶನ ನಡೆಸಿ ಗಮನ ಸೆಳೆದಿದ್ದಾರೆ.
ಫಿರೋಜ್ ಶಾ ಕೊಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಕರ್ಷಕ ರನೌಟ್ ಮಾಡಿದ್ದು, ಪಂದ್ಯದ 18 ಓವರಿನ ಮೊದಲ ಎಸೆತವನ್ನು ಅಕ್ಷರ್ ಡಿಫೆನ್ಸ್ ಮಾಡಿ ರನ್ ಕದಿಯುವ ಪ್ರಯತ್ನ ನಡೆಸಿದರು. ಇತ್ತ ಮತ್ತೊಂದು ತುದಿಯಲ್ಲಿ ಇದ್ದ ಕೀಮೋ ಪಾಲ್ ಅರ್ಧ ಕ್ರಿಸ್‍ಗೆ ತೆರಳಿದ್ದರು. ತಕ್ಷಣ ಎಚ್ಚೆತ್ತ ಬುಮ್ರಾ ಬುಲೆಟ್ ವೇಗದಲ್ಲಿ ಚೆಂಡನ್ನು ಎಸೆದು ರನೌಟ್ ಮಾಡಿದ್ದಾರೆ. ಈ ವಿಡಿಯೋವನ್ನು ಐಪಿಎಲ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ನೋಡಿದ ಅಭಿಮಾನಿಗಳು ಬುಮ್ರಾ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
WATCH: BOOM’s Bullet run-out ⚡️⚡️
Full video here ????️????️https://t.co/6bnDhGuiwk #DCvMI pic.twitter.com/yz6fYVTxNi
— IndianPremierLeague (@IPL) April 18, 2019
ಇದೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೂಡ ತಮ್ಮ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೇ ಧೋನಿ ಶೈಲಿಯಲ್ಲಿ ಹೆಲಿಕಾಪ್ಟರ್ ಸಿಕ್ಸರ್ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‍ನ ಅಂತಿಮ ಓವರಿನಲ್ಲಿ ಸಿಕ್ಸರ್ ಮೂಡಿ ಬಂದಿದ್ದು, ಮರು ಎಸೆತದಲ್ಲಿ ಪಾಂಡ್ಯ ವಿಕೆಟ್ ಒಪ್ಪಿಸಿದ್ದರು. ಪಂದ್ಯದಲ್ಲಿ ಪಾಂಡ್ಯ ಸಹೋದದರು ಉತ್ತಮ ಪ್ರದರ್ಶನ ನೀಡಿದ್ದು, ಹಾರ್ದಿಕ್ 15 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಿಡಿಸಿ 32 ರನ್, ಕೃಣಾಲ್ ಪಾಂಡ್ಯ 26 ಎಸೆತಗಳಲ್ಲಿ 5 ಬೌಂಡರಿ ಸಿಡಿಸಿ 37 ರನ್ ಗಳಿಸಿದ್ದರು. ಪರಿಣಾಮ ಮುಂಬೈ 168 ರನ್ ಗಳಿಸಿತ್ತು. ಮುಂಬೈ ನೀಡಿದ ರನ್ ಗುರಿಯನ್ನ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 40 ರನ್ ಅಂತರದಲ್ಲಿ ಸೋಲು ಪಡೆಯಿತು.
https://twitter.com/shubhangi23_/status/1118918007999406080