ಮುಂಬೈ: ಗಾಯಾಳುವಾಗಿ ಟೀಂ ಇಂಡಿಯಾದಿಂದ (Team India) ಹೊರಗುಳಿದಿದ್ದ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಶ್ರೀಲಂಕಾ (Sri Lanka) ವಿರುದ್ಧದ ಏಕದಿನ ಸರಣಿ (ODI) ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಬಿಸಿಸಿಐ (BCCI) ಪ್ರಕಟಿಸಿರುವ ತಂಡದಲ್ಲಿ ಬುಮ್ರಾ ಹೆಸರು ಕಾಣಿಸಿಕೊಂಡಿದೆ.
Advertisement
2022ರ ಸೆಪ್ಟೆಂಬರ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಬಳಿಕ ತಂಡದಿಂದ ಹೊರಗುಳಿದಿದ್ದ ಬುಮ್ರಾ ಇದೀಗ ಗಾಯದಿಂದ ಚೇತರಿಕೆ ಕಂಡಿದ್ದು, ಎನ್‍ಸಿಎನಲ್ಲಿ ಅಭ್ಯಾಸ ನಡೆಸಿ ಫಿಟ್ ಆಗಿರುವ ಬುಮ್ರಾ ಏಕದಿನ ತಂಡಕ್ಕೆ ಮರಳಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ ಮೊದಲು ಪ್ರಕಟಿಸಿದ ತಂಡದಲ್ಲಿ ಬುಮ್ರಾ ಆಯ್ಕೆ ಆಗಿರಲಿಲ್ಲ. ಆ ಬಳಿಕ ಇದೀಗ ಬದಲಾವಣೆಯೊಂದಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು, ತಂಡದಲ್ಲಿ ಬುಮ್ರಾ ಅವರ ಹೆಸರನ್ನು ಪ್ರಕಟಿಸಿದೆ. ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ಗಿಲ್ಲ ಪಂತ್ – ವಿಕೆಟ್ ಕೀಪರ್ ರೇಸ್‍ನಲ್ಲಿ ಉಪೇಂದ್ರ ಯಾದವ್
Advertisement
Advertisement
ಗಾಯದಿಂದಾಗಿ 2022ರ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‍ನಲ್ಲೂ ಬುಮ್ರಾ ಆಡಿರಲಿಲ್ಲ. ಇದೀಗ ಮುಂದಿನ ಏಕದಿನ ವಿಶ್ವಕಪ್ ದೃಷ್ಟಿಯಿಂದ ಬುಮ್ರಾರನ್ನು ಮತ್ತೆ ಆಯ್ಕೆ ಮಾಡಲಾಗಿದ್ದು, ಬುಮ್ರಾ ಪುನರಾಗಮನದಿಂದ ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಲಿದೆ.
Advertisement
ಏಕದಿನ ತಂಡ:
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ) ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (VK), ಇಶಾನ್ ಕಿಶನ್ (VK), ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್. ಇದನ್ನೂ ಓದಿ: ದಯವಿಟ್ಟು ಪಂತ್‍ರನ್ನು ನೋಡಲು ಆಸ್ಪತ್ರೆಗೆ ಬರಬೇಡಿ: DDCA ನಿರ್ದೇಶಕರ ಮನವಿ
NEWS – The All-India Senior Selection Committee has included pacer Jasprit Bumrah in India’s ODI squad for the upcoming Mastercard 3-match ODI series against Sri Lanka.
More details here – https://t.co/hIoAKbDnLA #INDvSL #TeamIndia
— BCCI (@BCCI) January 3, 2023
ತವರಿನಲ್ಲಿ ಭಾರತ ಪ್ರವಾಸಿ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಮತ್ತು 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಜ.3 ರಿಂದ ಟಿ20 ಸರಣಿ ಆರಂಭಗೊಳ್ಳಲಿದೆ. ಜ.10 ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ.