ಮೆಲ್ಬರ್ನ್: ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಭಾರತದ ಸೂಪರ್‌ಸ್ಟಾರ್ ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಮೈಲಿಗಲ್ಲನ್ನು ದಾಟಿ ದಾಖಲೆ ಬರೆದಿದ್ದಾರೆ.
ಭಾನುವಾರ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಾಲ್ಕನೇ ಟೆಸ್ಟ್‌ನ 4 ನೇ ದಿನದಾಟದಂದು ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ವಿಕೆಟ್ ಕಿತ್ತು ಬುಮ್ರಾ ಈ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಫಲಿಸಿತು ಅಪ್ಪನ ತ್ಯಾಗ – ಮಗನಿಗಾಗಿ ಸರ್ಕಾರಿ ಉದ್ಯೋಗ ತೊರೆದಿದ್ದ ನಿತೀಶ್ ರೆಡ್ಡಿ ತಂದೆ!
ಸರಣಿಯಲ್ಲಿ ಈಗಾಗಲೇ ಅತಿ ಹೆಚ್ಚು ವಿಕೆಟ್ ಪಡೆದಿರುವ ಬುಮ್ರಾ, ಬೀಟ್ಸ್ ಮಾಲ್ಕಮ್ ಮಾರ್ಷಲ್, ಜೋಯಲ್ ಗಾರ್ನರ್ ಮತ್ತು ಕರ್ಟ್ಲಿ ಆಂಬ್ರೋಸ್ ಅವರಂತಹ ಕೆಲವು ಸಾರ್ವಕಾಲಿಕ ಶ್ರೇಷ್ಠರನ್ನು ಹಿಂದಿಕ್ಕಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 200 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಹೊಂದಿರುವ ಎಲ್ಲಾ ಬೌಲರ್‌ಗಳಲ್ಲಿ, ಬುಮ್ರಾ ಅತ್ಯುತ್ತಮ ಸರಾಸರಿ ಹೊಂದಿದ್ದಾರೆ.
201ನೇ ಮತ್ತು 202ನೇ ವಿಕೆಟನ್ನು ಕೆಲವೇ ದಿನಗಳಲ್ಲಿ ಕಬಳಿಸಿದ ಬುಮ್ರಾ, ಟೆಸ್ಟ್ ಕ್ರಿಕೆಟ್‌ನಲ್ಲಿ 19.5 ಸರಾಸರಿಯನ್ನು ಹೊಂದಿದ್ದಾರೆ. ಆ ಮೂಲಕ ಮಾಲ್ಕಮ್ ಮಾರ್ಷಲ್ (20.9), ಜೋಯಲ್ ಗಾರ್ನರ್ (21.0) ಮತ್ತು ಕರ್ಟ್ಲಿ ಆಂಬ್ರೋಸ್ (21.0) ಅವರನ್ನು ಹಿಂದಿಕ್ಕಿದ್ದಾರೆ. ಬುಮ್ರಾ ಅವರು 20 ಕ್ಕಿಂತ ಕಡಿಮೆ ಸರಾಸರಿಯನ್ನು ಕಾಯ್ದುಕೊಂಡು ಟೆಸ್ಟ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಆಗಿದ್ದಾರೆ. ಇದನ್ನೂ ಓದಿ: ಕೊನೆಯ 30 ನಿಮಿಷ ಆಟ| 11 ರನ್ ಅಂತರದಲ್ಲಿ 3 ವಿಕೆಟ್ ಪತನ – ಸಂಕಷ್ಟದಲ್ಲಿ ಭಾರತ