ಮುಂಬೈ: ಟೀಂ ಇಂಡಿಯಾದ (Team India) ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಗಾಯಾಳುವಾಗಿ ಟಿ20 ವಿಶ್ವಕಪ್‍ನಿಂದ (T20 World Cup 2022) ಹೊರಗುಳಿಯಲಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ ಇದೀಗ ಬುಮ್ರಾ ಮೆಡಿಕಲ್ ರಿಪೋರ್ಟ್ ಶುಭ ಸುದ್ದಿಯೊಂದನ್ನು ನೀಡಿದೆ.
Advertisement
ಬಿಸಿಸಿಐ (BCCI) ಮೆಡಿಕಲ್ ಟೀಂ ನೀಡಿರುವ ರಿಪೋರ್ಟ್ ಪ್ರಕಾರ ಬುಮ್ರಾಗೆ ಸರ್ಜರಿ ಬೇಕಾಗಿಲ್ಲ. ಬದಲಾಗಿ ವಿಶ್ರಾಂತಿ ನೀಡಿದರೆ ಸಾಕು ಸರಿಹೊಂದುತ್ತಾರೆ. ಹಾಗಾಗಿ ಟಿ20 ವಿಶ್ವಕಪ್‍ಗೂ ಮುನ್ನ ಸಂಪೂರ್ಣ ವಿಶ್ರಾಂತಿಯಲ್ಲಿರಲಿ ಎಂದು ತಿಳಿಸಿದೆ. ಅಲ್ಲದೆ ಟೀಂ ಇಂಡಿಯಾ ವಿಶ್ವಕಪ್ ತಂಡದೊಂದಿಗೆ ಬುಮ್ರಾ ಆಸ್ಟ್ರೇಲಿಯಾಗೆ (Australia) ತೆರಳಲಿ ಗಾಯದಿಂದ ಚೇತರಿಕೆ ಕಂಡರೆ ಆಡಬಹುದೆಂಬ ಲೆಕ್ಕಾಚಾರವೊಂದು ಹಾಕಲಾಗಿದೆ. ಹಾಗಾಗಿ ಬುಮ್ರಾ ತಂಡದೊಂದಿಗೆ ತೆರಳುವ ಸಾಧ್ಯತೆ ಇದೆ. ಇದನ್ನೂ ಓದಿ: ಭಾರತ-ದಕ್ಷಿಣ ಆಫ್ರಿಕಾ 2ನೇ ಪಂದ್ಯಕ್ಕೆ ಮಳೆ ಅಡ್ಡಿ?
Advertisement
Advertisement
ಇತ್ತ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಕೂಡ ಬುಮ್ರಾ ಕುರಿತಾಗಿ ಮಾತನಾಡಿದ್ದು, ಬುಮ್ರಾ ವಿಶ್ವಕಪ್ ತಂಡದಿಂದ ಹೊರ ಬಿದ್ದಿಲ್ಲ. ಈ ಬಗ್ಗೆ ಮುಂದಿನ ಮೂರು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಬುಮ್ರಾ ಎನ್‍ಸಿಎನಲ್ಲಿ (NCA) ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 2023ರಲ್ಲಿ ನಡೆಯಲಿದೆ ಭಾರತದ ಮೊದಲ MotoGP ರೇಸ್
Advertisement
ಬುಮ್ರಾ ಬೆನ್ನು ನೋವಿನಿಂದ ಬಳಲುತ್ತಿದ್ದು, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಿಂದ ಬುಮ್ರಾ ಹೊರಗುಳಿದಿದ್ದರು. ಆ ಬಳಿಕ ಗಾಯಳುವಾಗಿರುವ ಕಾರಣ ಮುಂದಿನ 2 ಟಿ20 ಪಂದ್ಯದಿಂದ ಬುಮ್ರಾ ಹೊರನಡೆದಿದ್ದಾರೆ. ಆಫ್ರಿಕಾ ಸರಣಿಗೆ ಬುಮ್ರಾ ಬದಲು ಸಿರಾಜ್‍ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಐಸಿಸಿ ಟಿ20 ವಿಶ್ವಕಪ್ ಆಸ್ಟ್ರೇಲಿಯಾ ಆತಿಥ್ಯ ವಹಿಸುತ್ತಿದ್ದು, ಅಕ್ಟೋಬರ್ 16 ರಿಂದ ನವೆಂಬರ್ 13ರವರೆಗೆ ಚುಟುಕು ಸಮರ ನಡೆಯಲಿದೆ.