– ಟೆಸ್ಟ್ ರ‍್ಯಾಂಕಿಂಗ್ ಟಾಪ್ 10ರಲ್ಲಿ ಮೂವರು ಭಾರತೀಯರು
– ವಿದೇಶಿ ನೆಲದಲ್ಲಿ 6 ಟೆಸ್ಟ್ ಪಂದ್ಯ ಗೆದ್ದು ಸಾಧನೆ
ನವದೆಹಲಿ: ಭಾರತ ಕ್ರಿಕೆಟ್ ತಂಡವು ಹೆಚ್ಚಾಗಿ ಬ್ಯಾಟಿಂಗ್ ಸೂಪರ್ ಸ್ಟಾರ್‌ಗಳನ್ನು ಹೊಂದಿದೆ. ಆದರೆ ವೇಗದ ಬೌಲಿಂಗ್ ಘಟಕವನ್ನು ಅಷ್ಟಾಗಿ ಹೊಂದಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ವೇಗಿಗಳು ವೈಯಕ್ತಿಕ ದಾಖಲೆ ಬರೆಯುವ ಜೊತೆಗೆ ತಂಡವನ್ನು ಗೆಲುವಿನ ಗುರಿ ಮುಟ್ಟಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ.
ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು 2-0ರಿಂದ ಗೆದ್ದುಕೊಂಡಿದೆ. ಇದಕ್ಕೆ ವೇಗದ ಬೌಲರ್‌ಗಳು ಇದಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಸರಣಿಯಲ್ಲಿ ವಿಂಡೀಸ್‍ನ 39 ವಿಕೆಟ್‍ಗಳನ್ನು ಭಾರತದ ಉರುಳಿಸಿದೆ. ಈ ಪೈಕಿ 33 ವಿಕೆಟ್‍ಗಳನ್ನು ವೇಗಿಗಳೇ ವಿಕೆಟ್ ಪಡೆದಿರುವುದು ಗಮನಾರ್ಹ ಸಂಗತಿ. ಅದರಲ್ಲೂ ಜಸ್ಪ್ರೀತ್ ಬುಮ್ರಾ ಅತಿ ಹೆಚ್ಚು 13 ವಿಕೆಟ್ ಪಡೆದಿದ್ದಾರೆ.
Advertisement
Advertisement
ಬುಮ್ರಾ 2018ರ ಜನವರಿಯಲ್ಲಿ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಂದಿನಿಂದ ವಿಶ್ವದ 9 ವೇಗದ ಬೌಲರ್‌ಗಳು ಮಾತ್ರ ಟೆಸ್ಟ್‍ನಲ್ಲಿ 50+ ವಿಕೆಟ್‍ಗಳನ್ನು ಕಬಳಿಸಿದ್ದಾರೆ. ಅವರಲ್ಲಿ ಮೂವರು ಭಾರತದ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಎನ್ನುವುದು ಹೆಮ್ಮೆಯ ವಿಚಾರ. ಅಷ್ಟೇ ಅಲ್ಲದೆ ಈ ಅವಧಿಯಲ್ಲಿ ಟೀಂ ಇಂಡಿಯಾ ದೇಶದ ವಿದೇಶಿ ನೆಲದಲ್ಲಿ ಅತಿ ಹೆಚ್ಚು 6 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಇದಕ್ಕೆ ತಂಡದ ವೇಗದ ಬೌಲರ್‌ಗಳ ಕೊಡುಗೆ ಪ್ರಮುಖವಾಗಿದೆ.
Advertisement
ವೇಗಿ ಬುಮ್ರಾ ವಿಂಡೀಸ್ ಸರಣಿಯಲ್ಲಿ ಎರಡು ಬಾರಿ 5 ವಿಕೆಟ್ ಪಡೆದಿದ್ದಾರೆ. ಇಶಾಂತ್ ಒಮ್ಮೆ ಮಾತ್ರ 5 ವಿಕೆಟ್ ಕಬಳಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಬುಮ್ರಾ ಅವರು ಇನ್ನಿಂಗ್ಸ್ ನಲ್ಲಿ ಭಾರತದ ಪರ ಗರಿಷ್ಠ 5 ವಿಕೆಟ್‍ಗಳನ್ನು ಪಡೆದಿದ್ದಾರೆ. ಬುಮ್ರಾ 13 ವಿಕೆಟ್, ವಿಂಡೀಸ್ ಸರಣಿಯಲ್ಲಿ ಇಶಾಂತ್ 11 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 9 ವಿಕೆಟ್ ಪಡೆದಿದ್ದಾರೆ. ಎಡಗೈ ಬೌಲರ್ ರವೀಂದ್ರ ಜಡೇಜಾಗೆ ಆರು ವಿಕೆಟ್ ಪಡೆದಿದ್ದಾರೆ.
Advertisement
50+ ವಿಕೆಟ್ ಪಡೆದ ಬೌಲರ್‌ಗಳು:
ಎರಡು ವರ್ಷಗಳಲ್ಲಿ ವಿಶ್ವದ 9 ವೇಗದ ಬೌಲರ್‌ಗಳು ಮಾತ್ರ ಟೆಸ್ಟ್ ನಲ್ಲಿ 50+ ವಿಕೆಟ್‍ಗಳನ್ನು ಕಬಳಿಸಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ 27 ಇನ್ನಿಂಗ್ಸ್ ನಲ್ಲಿ 75 ವಿಕೆಟ್ ಪಡೆದರು 50ಕ್ಕಿಂತ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಕಂಗಿಸೋ ರಬಾಡ 28 ಇನ್ನಿಂಗ್ಸ್ ನಲ್ಲಿ 71 ವಿಕೆಟ್ ಗಳಿಸಿ ಎರಡನೇ ಸ್ಥಾನ ಹಾಗೂ 24 ಇನ್ನಿಂಗ್ಸ್ ನಲ್ಲಿ 62 ವಿಕೆಟ್ ಕಬಳಿಸಿರುವ ಟೀಂ ಇಂಡಿಯಾ ಬೌಲರ್ ಬುಮ್ರಾ ಮೂರನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಮೊಹಮ್ಮದ್ ಶಮಿ 29 ಇನ್ನಿಂಗ್ಸ್ ನಲ್ಲಿ 58 ವಿಕೆಟ್ ಗಳಿಸಿ ಐದನೇ ಸ್ಥಾನ ಹಾಗೂ ಇಶಾಂತ್ ಶರ್ಮಾ 24 ಇನ್ನಿಂಗ್ಸ್ ನಲ್ಲಿ 52 ವಿಕೆಟ್ ಕಬಳಿಸಿ ಎಂಟನೇ ಸ್ಥಾನ ಪಡೆದಿದ್ದಾರೆ.
ವೇಗದ ಬೌಲರ್ ಯಶಸ್ವಿಯಾದರೆ ವಿದೇಶದಲ್ಲಿ ತಂಡದ ಗೆಲುವಿನ ಶೇಕಡಾವಾರು ಪ್ರಮಾಣವೂ ಅತ್ಯಧಿಕವಾಗಿದೆ. ಕಳೆದ ಎರಡು ವರ್ಷಗಳಿಂದ ವಿದೇಶಿ ನೆಲದಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದಿರುವುದರ ಪೈಕಿ ಭಾರತ ಮತ್ತು ಇಂಗ್ಲೆಂಡ್ ಅಗ್ರಸ್ಥಾನದಲ್ಲಿವೆ. ಕಳೆದ ಎರಡು ವರ್ಷಗಳಲ್ಲಿ ಭಾರತವು ವಿದೇಶದಲ್ಲಿ 6 ಪಂದ್ಯಗಳನ್ನು ಗೆದ್ದಿದೆ. ಇಂಗ್ಲೆಂಡ್ ಮತ್ತು ಶ್ರೀಲಂಕಾ ತಲಾ ನಾಲ್ಕು ಜಯಗಳಿಸಿವೆ. ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಲಾ ಎರಡು ಪಂದ್ಯಗಳನ್ನು ಗೆದ್ದಿವೆ.