ಮುಂಬೈ: ಟೀಂ ಇಂಡಿಯಾ ಡೆತ್ ಓವರ್ ಸ್ಪೆಷಲಿಸ್ಟ್ ಎಂಬ ಹೆಗ್ಗಳಿಕೆ ಪಡೆದಿರುವ ಬುಮ್ರಾ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಗಾಯಗೊಂಡಿರುವ ಬಗ್ಗೆ ಮುಂಬೈ ಇಂಡಿಯನ್ಸ್ ಸ್ಪಷ್ಟನೆ ನೀಡಿದೆ. ಬುಮ್ರಾ ಗಾಯದ ಸಮಸ್ಯೆ ಗಂಭೀರ ಸ್ವರೂಪದಲ್ಲ. ಮುಂದಿನ ಪಂದ್ಯದಲ್ಲಿ ಅವರು ಆಡಲಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಗಾಯಗೊಂಡಿದ್ದರು. ಬೌಲಿಂಗ್ ವೇಳೆ ಚೆಂಡನ್ನು ತಡೆಯಲು ಮುಂದಾದ ಬುಮ್ರಾ ಎಡಗೈ ಜಾರಿದ ಪರಿಣಾಮ ಗಾಯಗೊಂಡು ಮೈದಾನಲ್ಲೇ ನೋವು ಅನುಭವಿಸಿದ್ದರು. ಆ ಬಳಿಕ ಮುಂಬೈ ಬ್ಯಾಟಿಂಗ್ ವೇಳೆ ಅಂತಿಮ 4 ಎಸೆತಗಳು ಉಳಿದರು ಕೂಡ ಬುಮ್ರಾ ಬ್ಯಾಟಿಂಗ್ ನಡೆಸಿರಲಿಲ್ಲ. ಅದ್ದರಿಂದ ಅಭಿಮಾನಿಗಳಲ್ಲಿ ಆತಂಕ ಎದುರಾಗಿತ್ತು.
Advertisement
https://twitter.com/dhonirohitfan1/status/1109858689324744704
Advertisement
ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವ ವೇಳೆ ಬುಮ್ರಾ ಗಾಯದ ಸಮಸ್ಯೆಗೆ ಸಿಲುಕಿದ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಬಿಸಿಸಿಐ ಕೂಡ ಈ ಬಗ್ಗೆ ಮಾಹಿತಿ ಪಡೆದಿದೆ. ಕಳೆದ ವರ್ಷ ಕೂಡ ಬುಮ್ರಾ ಗಾಯದ ಸಮಸ್ಯೆ ಎದುರಿಸಿದ್ದರು. ಪರಿಣಾಮ ಇಂಗ್ಲೆಂಡ್ ವಿರುದ್ಧದ ಸಿಮೀತ ಓವರ್ ಗಳ ಸರಣಿಯಲ್ಲಿ ಬುಮ್ರಾ ಭಾಗವಹಿಸಿರಲಿಲ್ಲ. ಆ ಬಳಿಕ ಟೆಸ್ಟ್ ಸರಣಿಗೆ ಕಮ್ ಬ್ಯಾಕ್ ಮಾಡಿದ್ದರು. ವಿಶ್ವಕಪ್ ಟೂರ್ನಿಗೆ 2 ತಿಂಗಳು ಮಾತ್ರ ಉಳಿದಿರುವುದಿಂದ ಆಟಗಾರರು ಫಿಟ್ನೆಸ್ ಕಾಯ್ದುಕೊಳ್ಳುವುದು ಪ್ರಮುಖವಾಗಿದೆ.
Advertisement
ಮುಂಬೈ ಇಂಡಿಯನ್ಸ್ ಸರಣಿಯನ್ನು ಸೋಲಿನ ಮೂಲಕ ಆರಂಭ ಮಾಡಿದ್ದು, ಭಾನುವಾರ ನಡೆದ ಪಂದ್ಯದಲ್ಲಿ ಯುವಿ ಅರ್ಧ ಶತಕದ ಹೊರತಾಗಿಯೂ ಸೋಲುಂಡಿತ್ತು. ಡೆಲ್ಲಿ ಆಟಗಾರರ ಪಂತ್ ಸ್ಫೋಟ ಬ್ಯಾಟಿಂಗ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು.