ದುಬೈ: ಏಷ್ಯಾ ಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಉದ್ಧಟತನ ತೋರಿದ್ದ ಹ್ಯಾರಿಸ್ ರೌಫ್‌ಗೆ ಜಸ್ಪ್ರಿತ್ ಬುಮ್ರಾ ಟಕ್ಕರ್ ಕೊಟ್ಟಿದ್ದಾರೆ.
ಇಂದು ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಹ್ಯಾರಿಸ್ ರೌಫ್ ವಿಕೆಟ್ ಉಡೀಸ್ ಮಾಡಿ ಬುಮ್ರಾ ‘ಪ್ಲೇನ್ ಕ್ರ್ಯಾಶ್’ ಸನ್ನೆ ಮಾಡಿ ತಿರುಗೇಟು ನೀಡಿದರು.
Bumrah launched an air strike on Haris Rauf and shot down his plane. 😂😂🤣#indvspak2025 pic.twitter.com/cFKNyQmvMA
— Saffron Chargers (@SaffronChargers) September 28, 2025
ವಾರದ ಹಿಂದೆ ಸೂಪರ್ ಫೋರ್ ಪಂದ್ಯದಲ್ಲಿ ಭಾರತದ ಆಪರೇಷನ್ ಸಿಂಧೂರ ಮತ್ತು ರಫೇಲ್ ಯುದ್ಧ ವಿಮಾನ ಕುರಿತು ವ್ಯಂಗ್ಯ ಮಾಡಿದ್ದ ಪಾಕ್ ಕ್ರಿಕೆಟಿಗ ಹ್ಯಾರಿಸ್ ರೌಫ್ (Haris Rauf) ವಿಕೆಟ್ ಪಡೆದ ಬೂಮ್ರಾ ಕೂಡಾ ಅದೇ ರೀತಿಯಲ್ಲಿ ಅಣಕ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
ಭಾನುವಾರದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಉತ್ತಮ ಆರಂಭ ಪಡೆದುಕೊಂಡಿತ್ತು. ಆದರೆ, ಮಧ್ಯಮ ಕ್ರಮಾಂಕದಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಅಂತಿಮವಾಗಿ 19.1 ಓವರ್‌ಗೆ ಪಾಕ್ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 146 ರನ್ ಗಳಿಸಿದೆ.