ಮುಂಬೈ: ಟೀಂ ಇಂಡಿಯಾ (Team India) 2022ರಲ್ಲಿ ಈವರೆಗೆ ಒಟ್ಟು 27 ಟಿ20 (T20) ಪಂದ್ಯವಾಡಿದೆ. ಆದರೆ ಟೀಂ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಜಸ್ಪ್ರೀತ್ ಬುಮ್ರಾ (Jasprit Bumrah) ಮಾತ್ರ ಆಡಿದ್ದು ಕೇವಲ ಮೂರೇ ಪಂದ್ಯ ಎಂಬುದು ಅಚ್ಚರಿಯ ಸಂಗತಿ.
Advertisement
ಬುಮ್ರಾ ಸದ್ಯ ಟೀಂ ಇಂಡಿಯಾದಲ್ಲಿರುವ ಮ್ಯಾಚ್ ವಿನ್ನಿಂಗ್ ಬೌಲರ್. ತಮ್ಮ ವೇಗದ ಬೌಲಿಂಗ್ ಮೂಲಕ ಎದುರಾಳಿಗಳ ವಿಕೆಟ್ ಬೇಟೆಯಾಡುವ ಬುಮ್ರಾ ಕಳೆದ ವರ್ಷ 2021ರ ಟಿ20 ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್‍ನಲ್ಲಿ ಭಾರತದ ಪರ ಕಾಣಿಸಿಕೊಂಡಿದ್ದು, ಬಹಳ ಅಪರೂಪ. ಇದಕ್ಕೆ ಸಾಕ್ಷಿ ಎಂಬಂತೆ ಅಂಕಿಅಂಶಗಳು ಕೂಡ ಇದೇ ಸಾಕ್ಷಿ ನೀಡುತ್ತಿದೆ. 2022ರ ಅವಧಿಯಲ್ಲಿ ಭಾರತ ತಂಡ ಈವರೆಗೆ ಒಟ್ಟು 27 ಟಿ20 ಪಂದ್ಯವಾಡಿದೆ. ಆದರೆ ಈ ಪಂದ್ಯಗಳ ಪೈಕಿ ಬುಮ್ರಾ ಆಡಿದ್ದು ಕೇವಲ 3 ಪಂದ್ಯಗಳನ್ನು. ಇನ್ನುಳಿದ 24 ಪಂದ್ಯಗಳಿಂದ ಬುಮ್ರಾ ಹೊರಗುಳಿದಿದ್ದರು. ಇದನ್ನೂ ಓದಿ: IND Vs AUS ಟಿ20 ಸರಣಿಗೆ ಬೂಮ್ರಾ ವಾಪಸ್ – ಸರಣಿ ಉಳಿಸಿಕೊಳ್ಳುವ ತವಕದಲ್ಲಿ ರೋಹಿತ್ ಬಳಗ
Advertisement
Advertisement
ಭಾರತ ಪ್ರಮುಖ ತಂಡಗಳ ನಡುವೆ ಟಿ20 ಸರಣಿ ಆಡಿದ್ದರೂ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಆ ಬಳಿಕ ಗಾಯಾಳುವಾಗಿ ತಂಡದಿಂದ ಹೊರಗುಳಿದಿದ್ದರು. ಹಾಗಾಗಿ ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗೂ ಮುನ್ನ ಭಾರತ ಪರ ಕಂಬ್ಯಾಕ್ ಮಾಡಬೇಕಾಗಿದೆ.
Advertisement
Bumrah is set to play his fourth T20I of 2022 tonight against AUS in Nagpur.#INDvsAUS #JaspritBumrah pic.twitter.com/hDceNJbuEG
— Dr. Cric Point ???? (@drcricpoint) September 23, 2022
2021ರ ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾದ ಬೌಲರ್‌ಗಳ ಪೈಕಿ ಭುವನೇಶ್ವರ್ ಕುಮಾರ್ 26 ಪಂದ್ಯವಾಡಿದರೆ, ಹರ್ಷಲ್ ಪಟೇಲ್ 18, ಅವೇಶ್ ಖಾನ್ 15, ಅರ್ಶ್‌ದೀಪ್ ಸಿಂಗ್ 11, ದೀಪಕ್ ಚಹಾರ್ 7, ಉಮ್ರಾನ್ ಮಲಿಕ್ 3, ಮೊಹಮ್ಮದ್ ಸಿರಾಜ್ 2 ಮತ್ತು ಶಾರ್ದೂಲ್ ಠಾಕೂರ್ 1 ಪಂದ್ಯವನ್ನಾಡಿದ್ದಾರೆ. ಇದನ್ನೂ ಓದಿ: ಭಾರತ Vs ಆಸ್ಟ್ರೇಲಿಯಾ T20: ಟಿಕೆಟ್‍ಗಾಗಿ ಮುಗಿಬಿದ್ದ ಜನ – ಲಾಠಿ ಚಾರ್ಜ್, ನಾಲ್ವರಿಗೆ ಗಾಯ
ಟೀಂ ಇಂಡಿಯಾ ಪರ ವೇಗದ ಬೌಲರ್‌ಗಳು ಭರವಸೆ ಮೂಡಿಸಿದ್ದರೂ ಡೆತ್ ಓವರ್‌ಗಳಲ್ಲಿ ದುಬಾರಿಯಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಹಾಗಾಗಿ ಬುಮ್ರಾ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಬುಮ್ರಾ ಡೆತ್ ಓವರ್‌ಗಳಲ್ಲಿ ರನ್ ಕಂಟ್ರೋಲ್ ಜೊತೆಗೆ ವಿಕೆಟ್ ಬೇಟೆಯಾಡುವ ಬೌಲರ್. ಹಾಗಾಗಿ ಇದೀಗ ಟಿ20 ವಿಶ್ವಕಪ್ ಹತ್ತಿರ ಇರುವಂತೆ ಬುಮ್ರಾ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇದೀಗ ತವರಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಿಂದ ಬುಮ್ರಾ ಹೊರಗುಳಿದಿದ್ದರು. ತಂಡದಲ್ಲಿದ್ದರೂ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಮೊದಲ ಟಿ20 ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ಕಲೆ ಹಾಕಿದ್ದರೂ ಸೋತಿತ್ತು. ಹಾಗಾಗಿ 2ನೇ ಟಿ20 ಪಂದ್ಯದಲ್ಲಿ ಬುಮ್ರಾ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಟಿ20 ವಿಶ್ವಕಪ್‍ಗೂ ಮುನ್ನ ಬುಮ್ರಾ ವಾಪಸ್ಸಾತಿ ಕುತೂಹಲ ಮೂಡಿಸಿದೆ.