ಜೇಸನ್ ಹೋಲ್ಡರ್ ಏಕಾಂಗಿ ಹೋರಾಟ ವ್ಯರ್ಥ: ಪಂಜಾಬ್‍ಗೆ ರೋಚಕ ಗೆಲುವು

Public TV
2 Min Read
CRI11

ಶಾರ್ಜಾ: ಹೈದರಾಬಾದ್ ಸನ್ ರೈಸರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 5 ರನ್‍ಗಳ ರೋಚಕ ಗೆಲುವು ದಾಖಲಿಸಿ ಯುಎಇ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

CRI13 1ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 57 ವಿಕೆಟ್ ನಷ್ಟಕ್ಕೆ 127 ರನ್ ಹೊಡೆದರೆ ಹೈದರಾಬಾದ್ 7 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಪಂಜಾಬ್ 8 ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ಜಿಗಿದಿದೆ.

ಟಾಸ್ ಗೆದ್ದ ಹೈದರಾಬಾದ್ ಸನ್ ರೈಸರ್ಸ್, ಮೊದಲು ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತ್ತು. ಆರಂಭಿಕರಾದ ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್‍ಗೆ 26 ರನ್ ಗಳಿಸಿತು. ರಾಹುಲ್ 21 ರನ್ (21 ಎಸೆತ, 3 ಬೌಂಡರಿ) ಹಾಗೂ ಮಯಾಂಕ್ 5 ರನ್‍ಗಳಿಸಿ ಜೇಸನ್ ಹೋಲ್ಡರ್‍ಗೆ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಸಿಎಸ್‍ಕೆ vs ಆರ್​ಸಿಬಿ ಅಭಿಮಾನಿಗಳ ವಾರ್- ಧೋನಿ, ಕೊಹ್ಲಿ ತುಂಟಾಟ

114ಆರಂಭಿಕ ಅಘಾತ ಅನುಭವಿಸಿದ ಪಂಜಾಬ್ ತಂಡಕ್ಕೆ ಕ್ರಿಸ್ ಗೇಲ್ ಮಾಕ್ರ್ರಮ್ ದೊಡ್ಡ ಜೊತೆಯಾಟವಾಡುವ ಭರವಸೆ ನೀಡಿದರು. ಗೇಲ್ 14 ರನ್ (17 ಎಸೆತ 1 ಬೌಂಡರಿ) ಮಾಕ್ರ್ರಮ್ 27 ರನ್ (32 ಎಸೆತ 2 ಬೌಂಡರಿ) ಗಳಿಸಿ ಪೆವಿಲಿಯನ್ ಕಡೆ ನಡೆದರು. ಹೈದರಾಬಾದ್ ಕರಾರುವಾಕ್ ಬೌಲಿಂಗ್ ದಾಳಿಗೆ ನಲುಗಿದ ಪಂಜಾಬ್ ನಿಗದಿತ 20 ಓವರ್‍ಗಳಲ್ಲಿ 7 ವಿಕೆಟ್ ಕಳೆದುಕೊಂಡು 125 ರನ್‍ಗಳಿಲಷ್ಟೆ ಶಕ್ತವಾಯಿತು. ಹೈದರಾಬಾದ್ ಪರ ಹೋಲ್ಡರ್ 3 ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: ರಾಜಸ್ತಾನ್ ರಾಯಲ್ಸ್ ಬಗ್ಗು ಬಡಿದ ಡೆಲ್ಲಿ ಪ್ಲೇ ಆಫ್‍ಗೆ ಎಂಟ್ರಿ

CRI12125 ರನ್‍ಗಳ ಸಾಧಾರಣ ಮೊತ್ತ ಬೆನ್ನತ್ತಿದ ಹೈದರಾಬಾದ್ ಮಹಮದ್ ಶಮಿ ದಾಳಿಗೆ ಆರಂಭದಲ್ಲೇ ಡೇವಿಡ್ ವಾರ್ನರ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ವಿಕೆಟ್ ಕಳೆದುಕೊಂಡು ರನ್‍ಗಳಿಸಲು ತಿಣುಕಾಡಿತು. ವಾರ್ನರ್ 2 ರನ್ ವಿಲಿಯಮ್ಸನ್ 1 ರನ್‍ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು. ಪಂಜಾಬ್ ತಂಡದ ಮಿಂಚಿನ ದಾಳಿಗೆ ತತ್ತರಿಸಿದ ಹೈದರಾಬಾದ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಮುಂದುವರೆಸಿತು. ಸನ್ ರೈಸರ್ಸ್ ಪರ ಮನೀಶ್ ಪಾಂಡೆ 13 ರನ್ (23 ಎಸೆತ 1 ಬೌಂಡರಿ ) ಕೇದಾರ್ ಜಾದವ್ 12 ರನ್ ಗಳಿಸಿ ರವಿ ಬಿಶ್ನೋಯಿಗೆ ವಿಕೆಟ್ ಒಪ್ಪಿಸಿದರು. ವೃದ್ಧಿಮಾನ್ ಸಹಾ 31 ರನ್ (37 ಎಸೆತ 1 ಬೌಂಡರಿ) ಗಳಿಸಿ ರನ್‍ಗೆ ಬಲಿಯಾದರು.

etಹೈದರಾಬಾದ್ ಗೆಲುವಿಗಾಗಿ ಏಕಾಂಗಿ ಹೋರಾಟ ಮಾಡಿದ ಜೇಸನ್ ಹೋಲ್ಡರ್, ಅಜೇಯ 47ರನ್ (29 ಎಸೆತ 5 ಸಿಕ್ಸರ್ ) ಸಿಡಿಸಿದರು. ಪಂದ್ಯದ ಕೊನೆಯ ಓವರ್‍ನಲ್ಲಿ ಹೈದರಾಬಾದ್ ಗೆಲುವಿಗೆ 6 ಬಾಲ್‍ಗಳಲ್ಲಿ 17 ರನ್‍ಗಳ ಅವಶ್ಯಕತೆಯಿತ್ತು. ನಾಥನ್ ಎಲ್ಲಿಸ್ ಕೊನೆಯ ಓವರ್‍ನಲ್ಲಿ ಕೇವಲ 11ರನ್ ನೀಡಿ ಪಂಜಾಬ್ ಗೆಲುವಿಗೆ ಕಾರಣದರು.

 

Share This Article
Leave a Comment

Leave a Reply

Your email address will not be published. Required fields are marked *