ತಾಯಿಯ ಸಾವಿನ ನೋವಿನಲ್ಲೂ ಮೈದಾನಕ್ಕಿಳಿದ ಕ್ರಿಕೆಟಿಗ

Public TV
1 Min Read
WI 1

ಬಾರ್ಬಡೋಸ್: ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಟೂರ್ನಿಯನ್ನು ವೆಸ್ಟ್ ಇಂಡೀಸ್ 2-0 ಅಂತರದಿಂದ ಐತಿಹಾಸಿಕ ಗೆಲುವು ಪಡೆದಿದೆ. ಆದರೆ 2ನೇ ಟೆಸ್ಟ್ ಪಂದ್ಯದ ವೇಳೆ ವಿಂಡೀಸ್ ಯುವ ವೇಗಿ ಅಲ್ಜಾರಿ ಜೋಸೆಫ್ ತಾಯಿಯ ಸಾವಿನ ಸುದ್ದಿ ಕೇಳಿಯೂ ಆಟದಲ್ಲಿ ಭಾಗಿಯಾಗಿದ್ದಾರೆ.

2ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ಆರಂಭದ ವೇಳೆ ಜೋಸೆಫ್ ಅವರ ತಾಯಿ ಬ್ರೈನ್ ಟ್ಯೂಮರ್ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದರು. ಆದರೆ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಜೋಸೆಫ್ 5 ವಿಕೆಟ್ ಪಡೆದು ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಕುಸಿತಕ್ಕೆ ಕಾರಣರಗಿದ್ದರು. ಆ ಬಳಿಕವೂ 3ನೇ ದಿನದಾಟ ಮುಂದುವರಿಸಿದ ಜೋಸೆಫ್ ತಾಯಿಯ ಸಾವಿನ ನೋವಿನಲ್ಲೂ ಆಟವಾಡಿದ್ದರು.

WI 2

ಈ ಕುರಿತು ಪ್ರತಿಕ್ರಿಯೆ ನೀಡಿರುವ ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್, ಜೋಸೆಫ್ ಅವರ ಸಂದರ್ಭವನ್ನು ನಾವು ವಿವರಿಸಲು ಅಸಾಧ್ಯವಾಗಿತ್ತು. ಆದರೆ ಅವರು ಆ ಸಂದರ್ಭದಲ್ಲೂ ಮೈದಾನಕ್ಕಿಳಿದಿದ್ದು, ನಮಗೆ ಸ್ಫೂರ್ತಿ ನೀಡಿತ್ತು. ಅಲ್ಲದೇ ಈ ನಿರ್ಧಾರ ನಮಗೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಕಾರಣವಾಯಿತು. ಆದ್ದರಿಂದ ಸರಣಿ ಗೆಲುವನ್ನು ಜೋಸೆಫ್ ಅವರ ತಾಯಿಗೆ ಅರ್ಪಿಸಿತ್ತೇವೆ ಎಂದು ತಿಳಿಸಿದ್ದಾರೆ. ವಿಶೇಷವೆಂದರೆ ಪಂದ್ಯದ ವೇಳೆ ಇತ್ತಂಡಗಳ ಆಟಗಾರರು ಕೂಡ ಕಪ್ಪು ಪಟ್ಟಿ ಧರಿಸಿ ಗೌರವ ಸೂಚಿಸಿದ್ದರು.

22 ವರ್ಷದ ಜೋಸೆಫ್ ಅವರಗೆ ಆಟದ ನಡುವೆ ತೆರಳಲು ಅವಕಾಶ ನೀಡಲಾಗಿತ್ತು. ಆದರೆ ತಂಡದ ಗೆಲುವಿನ ಉದ್ದೇಶದಿಂದ ಜೋಸೆಫ್ ಭಾಗವಹಿಸುವುದು ಮುಖ್ಯವಾಗಿತ್ತು. ಆದ್ದರಿಂದ ಅವರು ಮನೆಗೆ ತೆರಳದೇ ಇರುವ ನಿರ್ಧಾರವನ್ನು ಕೈಗೊಂಡಿದ್ದರು. ಅಲ್ಲದೇ ಪಂದ್ಯದಲ್ಲಿ ಪ್ರಮುಖ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾಗಿದ್ದರು. ಸದ್ಯ 3 ಪಂದ್ಯಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ 2-0 ಅಂತರದಲ್ಲಿ ಮುನ್ನಡೆ ಪಡೆದಿದ್ದು, 2009ರ ಬಳಿಕ ಇಂಗ್ಲೆಂಡ್ ವಿರುದ್ಧ ಸರಣಿ ಗೆಲುವು ದಾಖಲಿಸಿದೆ. ಅಂತಿಮ ಟೆಸ್ಟ್ ಪಂದ್ಯ ಜನವರಿ 9 ರಿಂದ ಆರಂಭವಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *