ಬಿಗ್ ಬಾಸ್ ಸ್ಪರ್ಧಿಯೊಬ್ಬರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ವಿಚಾರ ದೇಶದಾದ್ಯಂತ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಪವಿತ್ರ ಕೊಳದಲ್ಲಿ ಕಾಲು ತೊಳೆದುಕೊಂಡಿದ್ದ ಆ ಬಿಗ್ ಬಾಸ್ ಸ್ಪರ್ಧಿ, ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದೇ ನೀರಿನಿಂದಲೇ ದೇವರಿಗೆ ಪೂಜೆ ಸಲ್ಲಿಸಿದ್ದರಿಂದ, ಭಕ್ತರು ಮತ್ತು ಪೂಜಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳದ ಸುಪ್ರಸಿದ್ಧ ದೇವಾಲಯ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಮಲಯಾಳಂ ಬಿಗ್ ಬಾಸ್ ಸ್ಪರ್ಧಿ ಹಾಗೂ ಯೂಟ್ಯೂಬರ್ ಆಗಿರುವ ಜಾಸ್ಮಿನ್ ಜಾಫರ್ (Jasmin Jaffar) ಭೇಟಿ ಕೊಟ್ಟಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿರುವ ಪವಿತ್ರ ಕೊಳದಲ್ಲಿ ಕಾಲು ತೊಳೆದುಕೊಂಡಿದ್ದಾರೆ. ಅದನ್ನು ವಿಡಿಯೋ ಕೂಡ ಮಾಡಿದ್ದಾರೆ. ವಿಡಿಯೋ ಮಾಡಿ ಆರು ದಿನಗಳ ನಂತರ ಆ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋ ಕಂಡು ಭಕ್ತರು ಆಘಾತಗೊಂಡಿದ್ದಾರೆ. ಇದನ್ನೂ ಓದಿ: ಸುದೀಪ್ ಹುಟ್ಟುಹಬ್ಬಕ್ಕೆ `ಬಿಗ್’ ಸರ್‌ಪ್ರೈಸ್
ಆ ಜಾಗದಲ್ಲಿ ಹಿಂದೂಯೇತರರು ಹೋಗುವಂತಿಲ್ಲವಂತೆ. ಫೋಟೋಗ್ರಫಿ ಮಾಡುವಂತಿಲ್ಲ. ಈ ಎಲ್ಲ ನಿಯಮವನ್ನು ಜಾಸ್ಮಿನ್ ಉಲ್ಲಂಘನೆ ಮಾಡಿದ್ದಾರೆ. ಜೊತೆಗೆ ಜಾಸ್ಮಿನ್ ಕಾಲು ತೊಳೆದುಕೊಂಡ ಕೊಳದಿಂದಲೇ ದೇವರ ಪೂಜೆಗೆ ನೀರು ತಗೆದುಕೊಂಡು ಹೋಗಲಾಗಿದೆಯಂತೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ದೇವಸ್ಥಾನ ಮಂಡಳಿಯು ಜಾಸ್ಮಿನ್ ವಿರುದ್ಧ ದೂರು ದಾಖಲಿಸಿದೆ. ಇದನ್ನೂ ಓದಿ: ರಿಷಿಕೇಶದಲ್ಲಿ ಗಂಗಾರತಿ ಮಾಡಿದ ಫರ‍್ಹಾ ಖಾನ್
ವಿಷಯ ತಿಳಿಯುತ್ತಿದ್ದಂತೆಯೇ ಜಾಸ್ಮಿನ್ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ನನಗೆ ತಿಳಿಯದೇ ಆಗಿರುವಂಥ ಪ್ರಮಾದವಿದು. ಹಾಗಾಗಿ ಕ್ಷಮೆ ಕೇಳುತ್ತೇನೆ ಅಂತ ಹೇಳಿದ್ದಾರೆ. ಆದರೆ, ಭಕ್ತರ ಆಕ್ರೋಶವಂತೂ ನಿಲ್ಲುತ್ತಲೇ ಇಲ್ಲ.