ರಾಂಚಿ: ಹೇಮಂತ್ ಸೊರೆನ್‌ಗೆ 2024ರ ಆರಂಭ ಮತ್ತು ಅಂತ್ಯವು ಹೆಚ್ಚು ಭಿನ್ನವಾಗಿರಲಿಲ್ಲ. ಪ್ರಕರಣವೊಂದರಲ್ಲಿ ಜೈಲುವಾಸ ಅನುಭವಿಸಿ ಬಂದ ನಾಯಕನ ಕೈ ಹಿಡಿದು ಜನ ಅಭಯ ತುಂಬಿದ್ದಾರೆ. ಜಾರ್ಖಂಡ್‌ನಲ್ಲಿ ಜಯಭೇರಿ ಬಾರಿಸಿದ ಸೊರೆನ್ ಒಂದೇ ವರ್ಷದಲ್ಲಿ 2ನೇ ಬಾರಿಗೆ ಸಿಎಂ ಆಗಿ ಪುನರಾಗಮನಕ್ಕೆ ಸಜ್ಜಾಗಿದ್ದಾರೆ.
ಈಚೆಗೆ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಸೊರೆನ್‌ರನ್ನು ಭೂಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ವಶಕ್ಕೆ ತೆಗೆದುಕೊಂಡಿತು. ಬಂಧನಕ್ಕೊಳಗಾಗುವ ಮೊದಲು ಅವರು ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈಗ ವರ್ಷ (2024) ಮುಗಿಯಲು ಒಂದು ತಿಂಗಳು ಉಳಿದಿರುವಾಗ, ಸೊರೆನ್ ಅವರು ಅಮೋಘ ವಿಜಯದ ವಾಸ್ತುಶಿಲ್ಪಿಯಾಗಿ ಹೊರಹೊಮ್ಮಿದ್ದಾರೆ. ‘ಇಂಡಿಯಾ’ ಮೈತ್ರಿಕೂಟವು ರಾಜ್ಯದಲ್ಲಿ ಮತ್ತೆ ಅಧಿಕಾರ ಉಳಿಸಿಕೊಂಡಿದೆ. ಸೊರೆನ್ ಮತ್ತೆ ಸಿಎಂ ಆಗಿ ಮುಂದುವರಿಯಲಿದ್ದಾರೆ.
Advertisement
ಜೆಎಂಎಂ ನಾಯಕ ಕೂಡ ಈ ನಡುವೆ ಅನೇಕ ಹಿನ್ನಡೆಗಳನ್ನು ಅನುಭವಿಸಿದರು. ಜನವರಿ 31 ರಂದು ಸೊರೆನ್ ಬಂಧನವಾಯಿತು. ಇದರ ಬೆನ್ನಲ್ಲೇ ಅವರ ಅತ್ತಿಗೆ ಸೀತಾ ಸೊರೆನ್ ಮಾರ್ಚ್‌ನಲ್ಲಿ ಬಿಜೆಪಿಗೆ ಸೇರಿದರು.
Advertisement
ಪಕ್ಷದ ಹಿರಿಯ ನಾಯಕ ಚಂಪೈ ಸೊರೆನ್ ಅವರು ಹೇಮಂತ್ ಸೊರೆನ್ ಅನುಪಸ್ಥಿತಿಯಲ್ಲಿ ಜಾರ್ಖಂಡ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಸೊರೆನ್ ಬಿಡುಗಡೆಯ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
Advertisement
ಬಂಧನಕ್ಕೊಳಗಾದ ಐದು ತಿಂಗಳ ನಂತರ ಜೂನ್‌ನಲ್ಲಿ ಜಾರ್ಖಂಡ್ ಹೈಕೋರ್ಟ್‌ನಿಂದ ಮಾಜಿ ಮುಖ್ಯಮಂತ್ರಿಗೆ ಜಾಮೀನು ನೀಡಲಾಯಿತು. ನ್ಯಾಯಾಲಯವು ಪ್ರಾಥಮಿಕವಾಗಿ, ಅವರು ತಪ್ಪಿತಸ್ಥರಲ್ಲ ಮತ್ತು ಅದೇ ರೀತಿಯ ಅಪರಾಧವನ್ನು ಮಾಡುವ ಸಾಧ್ಯತೆಯಿಲ್ಲ ಎಂದು ಅಭಿಪ್ರಾಯಪಟ್ಟಿತು.
Advertisement
ಇದರ ಬೆನ್ನಲ್ಲೇ ಚಂಪೈ ಸೊರೆನ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದರು. ಜೆಎಂಎಂ ಪಕ್ಷದಲ್ಲಿ ನನಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕೇಸರಿ ಪಡೆ ಸೇರಿಕೊಂಡರು.
ಇದೆಲ್ಲದರ ಹೊರತಾಗಿಯೂ, ರಾಷ್ಟ್ರೀಯ ಜನತಾ ದಳದಂತಹ ಮಿತ್ರಪಕ್ಷಗಳೊಂದಿಗೆ ಕೆಲವು ಸೀಟು ಹಂಚಿಕೆ ತೊಂದರೆಗಳ ಹೊರತಾಗಿಯೂ, ಸೊರೆನ್ ನೇತೃತ್ವದ ಜೆಎಂಎಂ ಮೈತ್ರಿಕೂಟ ಜಾರ್ಖಂಡ್‌ನಲ್ಲಿ ಜಯಭೇರಿ ಬಾರಿಸಿದೆ.
81 ಸದಸ್ಯ ಬಲದ ಅಸೆಂಬ್ಲಿಯಲ್ಲಿ 2019 ರಲ್ಲಿ ಜೆಎಂಎಂ 30 ಸ್ಥಾನ ಗೆದ್ದಿತ್ತು. ಈ ಬಾರಿ 33 ಕ್ಕೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್, ಆರ್‌ಜೆಡಿ ಮತ್ತು ಸಿಪಿಐ (ಎಂಎಲ್) ಆಡಳಿತಾರೂಢ ಮೈತ್ರಿಕೂಟದ ಸಂಖ್ಯೆಯನ್ನು 55ಕ್ಕೆ ಕೊಂಡೊಯ್ದಿವೆ. ಬಿಜೆಪಿ ನೇತೃತ್ವದ ಮೈತ್ರಿಕೂಟ ಕೇವಲ 25ರಲ್ಲಿ ಮುಂದಿದೆ.