– ಕರಾವಳಿಯ ಮೊದಲ ಐಟಿ ಕಂಪನಿ
– 805 ಕೋಟಿ ರೂ.ಗೆ ಖರೀದಿ
ಬೆಂಗಳೂರು: ಕರಾವಳಿಯ ಮೊದಲ ಐಟಿ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ರೊಬೋಸಾಫ್ಟ್ ಕಂಪನಿಯನ್ನು ಜಪಾನ್ ಕಂಪನಿ ಖರೀದಿಸಿದೆ.
ರೊಬೊಸಾಫ್ಟ್ ಕಂಪನಿಯ ಶೇ.100 ಷೇರನ್ನು 805 ಕೋಟಿ ರೂ. ನೀಡಿ ಖರೀದಿಸಲು ಟೆಕ್ನೊ ಪ್ರೊ ಹೋಲ್ಡಿಂಗ್ಸ್ ಒಪ್ಪಂದ ಮಾಡಿಕೊಂಡಿದೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ರೊಬೊಸಾಫ್ಟ್ ಟೆಕ್ನಾಲಜಿ, ಸದ್ಯ ಇರುವ ಆಡಳಿತ ಮಂಡಳಿಯೇ ಕಂಪನಿಯನ್ನು ಮುನ್ನಡೆಸಿಕೊಂಡು ಹೋಗಲಿದ್ದು, ರವಿತೇಜ ಬೊಮ್ಮಿರೆಡ್ಡಿಪಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದೆ.
Advertisement
ರೊಬೊಸಾಫ್ಟ್ ಇಂಟರ್ನೆಟ್ ಬ್ರ್ಯಾಂಡ್‍ಗಳಿಗೆ ಅಪ್ಲಿಕೇಶನ್, ಮೊಬೈಲ್ ಆಪ್ಸ್, ಗೇಮಿಂಗ್ ಸಾಫ್ಟ್‌ವೇರ್ ಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಪ್ರಸ್ತುತ ಈ ಕಂಪನಿಯಲ್ಲಿ ಎಸೆಂಟ್ ಕ್ಯಾಪಿಟಲ್ ಶೇ.37.3, ಕಲಾರಿ ಕ್ಯಾಪಿಟಲ್ ಶೇ.27, ರೊಬೊಸಾಫ್ಟ್ ಶೇ.35.7 ಪಾಲನ್ನು ಹೊಂದಿದೆ. ಮೊದಲ ಹಂತದಲ್ಲಿ ಜಪಾನ್ ಕಂಪನಿ ಶೇ.80 ರಷ್ಟು ಷೇರು ಖರೀದಿಸಿ ಒಂದು ವರ್ಷದ ಬಳಿಕ ಉಳಿದ ಶೇ.20ರಷ್ಟು ಪಾಲನ್ನು ಖರೀದಿ ಮಾಡಲಿದೆ. ಇದನ್ನೂ ಓದಿ: ಸಾಲದಲ್ಲಿ ವಿಐಎಲ್ ಕಂಪನಿ – ಸರ್ಕಾರಕ್ಕೆ ಷೇರು ಮಾರಲು ಮುಂದಾದ ಬಿರ್ಲಾ
Advertisement
ಉಡುಪಿಯ ಚಿಟ್ಪಾಡಿಯಲ್ಲಿ 1996ರಲ್ಲಿ ಸ್ಥಾಪನೆಗೊಂಡಿದ್ದ ರೊಬೊಸಾಫ್ಟ್ ಬಳಿಕ ಸಂತೆಕಟ್ಟೆಯ ಬಳಿ ಅತ್ಯಾಧುನಿಕ ವಿನ್ಯಾಸದ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು.
Advertisement
Advertisement
ಪ್ರೊಡಕ್ಟ್ ಅಡ್ವೈಸರಿ, ಡಿಸೈನ್, ಅನಾಲಿಟಿಕ್ಸ್ ನಲ್ಲಿ ಪರಿಣಿತಿಯನ್ನು ಕಂಪನಿ ಹೊಂದಿದೆ. ಉಡುಪಿಯಲ್ಲಿ ಕೇಂದ್ರ ಕಚೇರಿಯಿದ್ದು, ಬೆಂಗಳೂರು ಹಾಗೂ ಮುಂಬೈನಲ್ಲಿ ಡೆಲಿವರಿ ಕೇಂದ್ರ ಹಾಗೂ ಅಮೆರಿಕ ಜಪಾನ್ ಸೇರಿದಂತೆ ಹಲವೆಡೆ ಮಾರಾಟ ಕೇಂದ್ರಗಳನ್ನು ಹೊಂದಿದೆ.
ರೊಬೊಸಾಫ್ಟ್ ಕಂಪನಿಯಲ್ಲಿ 1 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ದುಡಿಯುತ್ತಿದ್ದು ಜಪಾನ್ ಕಂಪನಿ ಖರೀದಿಯಿಂದ ಅಮೆರಿಕ, ಯುರೋಪ್, ಜಪಾನಿನಲ್ಲಿ ಕಾರ್ಯವ್ಯಾಪಿ ವಿಸ್ತರಣೆಯಾಗಲಿದೆ.